ವಾಣಿಜ್ಯ

ಬಿಸಿಎಂ- 95 ಅನಾವರಣ

ಉನ್ನತ ಶ್ರೇಣಿಯ ಜೈವಿಕ ಸಾರಗಳನ್ನು ರಫ್ತು ಮಾಡುವ ಅರ್ಜುನ ನ್ಯಾಚುರಲ್ ಎಕ್ಸ್‌ಟ್ರ್ಯಾಕ್ಟ್ ಲಿಮಿಟೆಡ್ ಹಕ್ಕುಸ್ವಾಮ್ಯ ಪಡೆದಿರುವ ಬಿಸಿಎಂ- 95ನ್ನು ...

ಬೆಂಗಳೂರು: ಉನ್ನತ ಶ್ರೇಣಿಯ ಜೈವಿಕ ಸಾರಗಳನ್ನು ರಫ್ತು ಮಾಡುವ ಅರ್ಜುನ ನ್ಯಾಚುರಲ್ ಎಕ್ಸ್‌ಟ್ರ್ಯಾಕ್ಟ್ ಲಿಮಿಟೆಡ್ ಹಕ್ಕುಸ್ವಾಮ್ಯ ಪಡೆದಿರುವ ಬಿಸಿಎಂ- 95ನ್ನು ಅನಾವರಣಗೊಳಿಸಿದೆ. ಅರಿಶಿಣದಿಂದ ತೆಗೆಯುವ ಈ ಉತ್ಪನ್ನವು ಶೇ. 100ರಷ್ಟು ಮಾನದಂಡಕ್ಕೆ ಒಳಗಾಗಿದೆ. ಬಿಸಿಎಂ-95ನ ಲಭ್ಯತೆಯಿಂದಾಗಿ ಅರಿಶಿಣದ ನಿಸರ್ಗದತ್ತ ಶಕ್ತಿಗಳು ಬಹುಪಾಲು ಹೆಚ್ಚಿದೆ ಮತ್ತು ಔಷಧೀಯ ಪರಿಣಾಮವೂ ಗರಿಷ್ಠ ಮಟ್ಟಕ್ಕೆ ಏರಿದೆ. ಬಿಸಿಎಂ-95 ತೀವ್ರ ಅಧ್ಯಯನಕ್ಕೆ ಒಳಗಾದ ಉತ್ಪನ್ನಗಳಲ್ಲಿ ಒಂದು. ಯಾವುದೇ ಅಡ್ಡಪರಿಣಾಮಗಳಿಲ್ಲದೆ ಇದು ದೀರ್ಘಕಾಲಿನ ಕಾಯಿಲೆಗಳ ಉಪಶಮನಕ್ಕೆ ಉತ್ತಮ ಎಂದು ಸಂಸ್ಥೆ ಹೇಳಿಕೊಂಡಿದೆ. ಬಿಸಿಎಂ- 95 ಮತ್ತು ಇತರ ಉತ್ಪನ್ನಗಳ ಬಿಡುಗಡೆಯೊಂದಿಗೆ ಕ್ಯೂರ್‌ಗಾರ್ಡನ್ ಬೆಂಗಳೂರಿನಲ್ಲಿ ತನ್ನ ಕಾರ್ಯಗಳನ್ನು ಆರಂಭಿಸಿದೆ. ಆರಂಭೋತ್ಸವದಲ್ಲಿ ಕ್ಯೂರ್‌ಗಾರ್ಡನ್‌ನ ಮೂರು ಉತ್ಪನ್ನಗಳನ್ನು ಘೋಷಿಸಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಅರ್ಜುನ ನ್ಯಾಚುರಲ್ ಎಕ್ಸ್‌ಟ್ರ್ಯಾಕ್ಟ್ ಲಿ. ಅಧ್ಯಕ್ಷ ಪಿ.ಜೆ. ಕುಂಜಚಾನ್, ಬಿಸಿಎಂ- 95 ಉರಿಯೂತ ಕಾಯಿಲೆಗಳಿಗೆ ಒಂದು ಕ್ರಾಂತಿಕಾರಿ ಪರಿಹಾರ. ಕ್ಯೂರ್‌ಗಾರ್ಡನ್ ಉತ್ಪನ್ನಗಳು ಈಗ ಬೆಂಗಳೂರಿನಲ್ಲೇ ಸಿಗುವುದರಿಂದ ಗ್ರಾಹಕರನ್ನು ನೇರವಾಗಿ ತಲುಪಬಹುದಾಗಿದೆ. ಇಂದು ಬಹುಪಾಲು ಜನರಿಗೆ ಮಧುಮೇಹವಿದೆ. ಇದು ಮಧುಮೇಹಿಗಳಿರೂ ಉಪಯೋಗಬಹುದು ಎಂದು ಹೇಳಿದರು.

ಎಸ್‌ಬಿಐಗೆ ರು. 777.1 ಕೋಟಿ ಪ್ರೀಮಿಯಂ ಆದಾಯ

ಎಸ್‌ಬಿಐ ಜನರಲ್ ಇನ್ಷೂರೆನ್ಸ್ ಕಂಪನಿ ಲಿಮಿಟೆಡ್ (ಎಸ್‌ಬಿಐ ಜನರಲ್) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಾಮಾನ್ಯ ವಿಮೆ ವಿಭಾಗದ ಸಂಸ್ಥೆಯಾಗಿದೆ. 2012-13ನೇ ಸಾಲಿನಲ್ಲಿ ಯಶಸ್ವಿಯಾಗಿ 777.1 ಕೋಟಿ ಮೊತ್ತದ ಪ್ರೀಮಿಯಂ ಆದಾಯ ಗಳಿಸಿದೆ. ಆರ್ಥಿಕ ಫಲಿತಾಂಶವನ್ನು ಮಾಧ್ಯಮದ ಜತೆ ಹಂಚಿಕೊಂಡ ಎಸ್‌ಬಿಐ ಜನರಲ್ ಇನ್ಷೂರೆನ್ಸ್ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಜೆ. ಶರ್ಮ, ನಮ್ಮ ಸಂಸ್ಥೆ ಕಳೆದ ಸಾಲಿಗೆ ಹೋಲಿಸಿದರೆ ಅತ್ಯುತ್ತಮ ಬೆಳವಣಿಗೆಯೊಂದಿಗೆ ಸಾಮಾನ್ಯ ವಿಮೆ ವಲಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಯಾಗಿದೆ. ಪ್ರೀಮಿಯಂ ಆದಾಯದಲ್ಲಿ ರು. 750 ಕೋಟಿ ಗಡಿ ದಾಟಿದ್ದೇವೆ. ಮೂರು ವರ್ಷದಲ್ಲೇ ಈ ಯಶಸ್ಸು ಸಾಧಿಸಿದ್ದೇವೆ. ಅಖಿಲ ಭಾರತ ಮಟ್ಟದಲ್ಲಿ ನಮ್ಮ ಶಾಖೆಗಳ ಸಂಖ್ಯೆಯನ್ನು 38 ಪ್ರದೇಶಗಳಿಗೆ ವಿಸ್ತರಿಸಿದ್ದೇವೆ ಎಂದು ಹೇಳಿದರು. ಬ್ಯಾಂಕ್ ಇನ್ಷೂರೆನ್ಸ್ ಲೀಡ್ ಚಾನೆಲ್ ಆಗಿದ್ದು, ಶೇ. 63ರ ಕೊಡುಗೆ ನೀಡುತ್ತಿದೆ. ಏಜೆನ್ಸಿ ಚಾನೆಲ್ ಶೇ. 19, ಬ್ರೋಕರ್ ಚಾನೆಲ್ ಶೇ. 12, ಮತ್ತು ಡೈರೆಕ್ಟರ್ ಚಾನೆಲ್ ಶೇ. 7 ಪ್ರೀಮಿಯಂ ಆದಾಯ ನೀಡುತ್ತದೆ. ಮುಂದಿನ ಕೆಲವು ವರ್ಷಗಳಲ್ಲಿ ಬ್ಯಾಂಕ್ ಇನ್ಷೂರೆನ್ಸ್ ಪ್ರಾಬಲ್ಯ ಸಾಧಿಸುವ ವಿಶ್ವಾಸವಿದೆ ಎಂದು ಹೇಳಿದರು.

ಸೋಲಾರ್ ರೂಫ್ ಸಿಸ್ಟಂಗೆ ಒಪ್ಪಂದ
ವಿದ್ಯುಚ್ಛಕ್ತಿ ಉಪಕರಣಗಳ ಉತ್ಪಾದನೆ ಹಾಗೂ ಪರಿಹಾರ ಕ್ಷೇತ್ರದಲ್ಲಿ ದೇಶದಲ್ಲಿ ಪ್ರಮುಖ ಸ್ಥಾನದಲ್ಲಿರುವ ಜಾಕ್ಸನ್ ಪವರ್ ಸಲ್ಯೂಷನ್ಸ್ ಬೆಂಗಳೂರು ಹಾಗೂ ಪುಣೆಗಳಲ್ಲಿ ಸೋಲಾರ್ ರೂಫ್ ಸಿಸ್ಟಂಗಳನ್ನು ಅಳವಡಿಸುವಹೊಸ ಒಪ್ಪಂದ ಪಡೆದಿರುವ ಬಗ್ಗೆ ಘೋಷಣೆ ಮಾಡಿದೆ.  ಜಾಕ್ಸನ್ ಪವರ್ ಸಲ್ಯೂಷನ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಗುಪ್ತಾ ಮಾತನಾಡಿ, ಬೆಂಗಳೂರಿನ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದಲ್ಲಿ 80 ಕೆಡಬ್ಲ್ಯೂಪಿ ಸೌರಶಕ್ತಿ ರೂಫ್‌ಟಾಪನ್ನು ಜಾಕ್ಸನ್ ಸ್ಥಾಪಿಸಲಿದೆ. ಈ ಯೋಜನೆಯನ್ನು ಜುಲೈ 2013ರ ವೇಳೆಗೆ ಪೂರ್ಣಗೊಳಿಸಲಿದೆ. ಈ ಸೌಲಭ್ಯದ ಮೂಲಕ ಬೆಂಗಳೂರಿನ ವಿಪತ್ತು ನಿರ್ವಹಣಾ ಕೇಂದ್ರವು ದಿನದ 24 ಗಂಟೆಗಳ ಕಾಲವೂ ತಡೆರಹಿತ ವಿದ್ಯುತ್ ಸೌಲಭ್ಯ ಪಡೆಯಬಹುದಾಗಿರುತ್ತದೆ ಎಂದು ಹೇಳಿದರು.  ಜಾಕ್ಸನ್ ಸಂಸ್ಥೆ ಸೌರವಿದ್ಯುಚ್ಛಕ್ತಿ ಉತ್ಪಾದನೆ ಕುರಿತು ದೇಶದಲ್ಲಿ ಬೆಳವಣಿಗೆಯ ಮುಂದಿನ ಹಂತ ಪ್ರವೇಶಿಸಲಿದೆ. ಬೃಹತ್ ಪ್ರಮಾಣದ ಸೌರವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ನಮ್ಮ ಸಂಸ್ಥೆ ಖ್ಯಾತಿ ಪಡೆಯುತ್ತಿದೆ ಎಂದು ಹೇಳಿದರು
.
ಗದಗದಲ್ಲಿ ಪವನ ವಿದ್ಯುತ್ ಘಟಕ ಆರಂಭ
ಭಾರತದಲ್ಲಿ ಸಮಗ್ರ ರೂಪದಲ್ಲಿ ಅತಿದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿರುವ 'ಟಾಟಾ ಪವರ್‌' ಕರ್ನಾಟಕದ ಗದಗದಲ್ಲಿ ಪರಿಶುದ್ಧ ಇಂಧನ ಸಂಸ್ಥೆಯಡಿ 50.4 ಮೆಗಾವಾಟ್ ಸಾಮರ್ಥ್ಯದ ಪವನ ವಿದ್ಯುತ್ ಘಟಕ ಆರಂಭಿಸಿದೆ. ವಿಶ್ವಸಂಸ್ಥೆಯ ಫ್ರೇಮ್‌ವರ್ಕ್ ಕನ್ವೆನ್ಷನ್ ಆನ್ ಕ್ಲೈಮೇಟ್ ಚೇಂಜ್ (ಯುಎನ್‌ಎಫ್‌ಸಿ) ಕಾರ್ಯಕ್ರಮದಡಿ ಈ ವಿದ್ಯುತ್ ಘಟಕ ಅನುಷ್ಠಾನಗೊಳಿಸಲಾಗಿದೆ.  ಟಾಟಾ ಪವರ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಸರ್ದಾನ ಈ ಕುರಿತು ಮಾತನಾಡಿ, ನಮ್ಮ ಕಂಪನಿ ಪರಿಶುದ್ಧ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಆದ್ಯತೆ ನೀಡುತ್ತಿದೆ. ಇದು ಈ ಪರಿಶುದ್ಧ ಇಂಧನ ವಲಯದ ನಾಲ್ಕನೇ ಯೋಜನೆಯಾಗಿದೆ. ವಿಶ್ವಸಂಸ್ಥೆಯ ಫ್ರೇಮ್‌ವರ್ಕ್ ಕನ್ವೆನ್ಷನ್ ಆನ್ ಕ್ಲೈಮೇಟ್ ಚೇಂಜ್ ಕಾರ್ಯಕ್ರಮದಡಿ ಕರ್ನಾಟಕದ ಗದಗ್‌ನಲ್ಲಿ ಈ ಪವನ ವಿದ್ಯುತ್ ಘಟಕ ಆರಂಭಿಸಲಾಗಿದೆ ಎಂದು ಹೇಳಿದರು. ಗದಗ್‌ನಲ್ಲಿ 50.4 ಮೆಗಾವಾಟ್ ಸಾಮರ್ಥ್ಯದ ಪವನ ವಿದ್ಯುತ್ ಘಟಕದ ಸ್ಥಾಪನೆ ಕಾರ್ಯ 2009ರ ಜುಲೈನಲ್ಲಿ ಆರಂಭಗೊಂಡಿತ್ತು. ಇಲ್ಲಿ ನೆಲೆಗೊಂಡಿರುವ 63 ಪವನ ವಿದ್ಯುತ್ ಘಟಕಗಳು ತಲಾ 800 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯದ್ದಾಗಿದೆ. ಗದಗದ ಈ ಪವನ ವಿದ್ಯುತ್ ಘಟಕ ಗಾಳಿಯ ಶಕ್ತಿ ಬಳಸಿಕೊಂಡು ವಾರ್ಷಿಕ ಸರಾಸರಿ 107064 ಮೆಗಾವಾಟ್ ವಿದ್ಯುತ್ ಉತ್ಪಾದಿಸಬಲ್ಲದಾಗಿದೆ ಎಂದು ವಿವರಿಸಿದರು.

ಬ್ಲೇಝ್ 2013 ಸಮಾರೋಪ
ವಿದ್ಯುಚ್ಛಕ್ತಿ ನಿರ್ವಹಣೆಯಲ್ಲಿ ಜಾಗತಿಕ ಪರಿಣತ ಕಂಪನಿ ಶ್ನೈಡರ್ ಎಲೆಕ್ಟ್ರಿಕ್ ಇಂಡಿಯಾದಿಂದ ಮೈಸೂರು ರಸ್ತೆಯ ಆರ್‌ವಿಸಿಇ ಕಾಲೇಜಿನಲ್ಲಿ ನಡೆದ 'ಬ್ಲೇಝ್ 2013'ರ  ಮೆಗಾಫೈನಲ್ ಸಮಾರೋಪಗೊಂಡಿತು. 'ಬ್ಲೇಝ್‌' ಪ್ರತಿಷ್ಠಿತ ಎಂಜಿನಿಯರ್ ಕಾಲೇಜುಗಳಿಗೆ ಶ್ನೈಡರ್ ಎಲೆಕ್ಟ್ರಿಕ್ ಭಾರತದಾದ್ಯಂತ ನಡೆಸುವ ವಿದ್ಯುಚ್ಛಕ್ತಿ ಉಳಿತಾಯದ ಆಧುನಿಕ ತಂತ್ರಗಳ ಕುರಿತಾದ ವಾರ್ಷಿಕ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯಲ್ಲಿ ಎಂಎಸ್‌ಆರ್‌ಐಟಿ ಕಾಲೇಜಿನ ತಂಡವನ್ನು ಅವರ ಪ್ರಾಜೆಕ್ಟ್ ಎನರ್ಜಿ ಆಡಿಟ್‌ಗಾಗಿ ವಿಜೇತರೆಂದು ಪ್ರಕಟಿಸಲಾಯಿತು. ತಂಡಕ್ಕೆ ರು. 75,000 ಬಹುಮಾನ ನೀಡಲಾಯಿತು. ಈ ವರ್ಷದ ಸ್ಪರ್ಧೆ ದೇಶಾದ್ಯಂತ 14 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಆನ್‌ಲೈನ್‌ನಲ್ಲಿ ನಡೆಯಿತು. ವಿವಿಧ ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡ 80ಕ್ಕೂ ಅಧಿಕ ತಂಡಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಪ್ರಾರಂಭಿಕ ಸುತ್ತುಗಳ ಸಾಧನೆಯ ಅನುಸಾರ 14 ತಂಡಗಳನ್ನು ಮೆಗಾಫೈನಲ್‌ಗೆ ಆಯ್ಕೆ ಮಾಡಲಾಯಿತು.

ಸ್ಮಾರ್ಟ್‌ಫೋನ್ ಬಿಡುಗಡೆ
ಬೆಂಗಳೂರು: ಸಿಸ್ಟೆಮಾ ಶ್ಯಾಮ್ ಟೆಲಿಸರ್ವೀಸ್ ಲಿಮಿಟೆಡ್ ಎಂಟಿಎಸ್ ಬ್ರಾಂಡ್‌ನಲ್ಲಿ ದೂರಸಂಪರ್ಕ ಸೇವೆ ಒದಗಿಸುತ್ತಿದ್ದು, ಎಂಟಿಎಸ್ ಡ್ಯುಯೆಟ್ ಹೆಸರಿನಲ್ಲಿ ಡ್ಯುಯೆಲ್ ಸಿಮ್ ಸ್ಮಾರ್ಟ್ ಫೋನ್ ಬಿಡುಗಡೆ ಘೋಷಿಸಿದೆ. ತನ್ನ ಗ್ರಾಹಕರಿಗೆ ವ್ಯಾಪಕ ಆಯ್ಕೆ ನೀಡುವ ಕಾರ್ಯತಂತ್ರದ ಭಾಗವಾಗಿ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಾಗಿದೆ. ಎಂಟಿಎಸ್ ಸ್ಮಾರ್ಟ್‌ಫೋನ್ ಪೋರ್ಟ್‌ಪೋಲಿಯೋ ಅಂಡ್ರಾಯ್ಡ್ 2.3 ಜಿಂಗರ್‌ಬ್ರೀಡ್‌ನಲ್ಲಿ ಕಾರ್ಯನಿರ್ವಹಿಸಲಿದ್ದು ಆಕರ್ಷಕ ಧ್ವನಿ ಮತ್ತು ಡಾಟಾ ಯೋಜನೆ ದೊರೆಯಲಿದೆ.  ಎಂಟಿಎಸ್ ಇಂಡಿಯಾದ ಮುಖ್ಯ ಮನಾರುಕಟ್ಟೆ ಮತ್ತು ಸೇಲ್ಸ್ ಆಫೀಸರ್ ಆಗಿರುವ ಲಿಯೊನಿಡ್ ಮುಸಟೋವ್ ಅವರು ಹೇಳುವಂತೆ, ಎಂಟಿಎಸ್ ಸಂಸ್ಥೆ ಗ್ರಾಹಕರಿಗೆ ಆಕರ್ಷಕ ಸೌಲಭ್ಯ ಒದಗಿಸಲು ಬಯಸಿದೆ. ಹೊಸ ಸ್ಮಾರ್ಟ್‌ಫೋನ್ ಎಂಟಿಎಸ್ ಡ್ಯುಯೆಟ್ ಈ ನಿಟ್ಟಿನಲ್ಲಿ ಆಕರ್ಷಣೆ ಮತ್ತು ತಂತ್ರಜ್ಞಾನದ ಸಮ್ಮಿಲನವಾಗಿದೆ.

ಸ್ನ್ಯಾಪ್‌ಡೀಲ್ ಜತೆ ಇಬೈ ವಾಣಿಜ್ಯ ಒಪ್ಪಂದ
ಕಂಪನಿಯಲ್ಲಿ ಹೂಡಿಕೆ ಮಾಡುವುದನ್ನು ಒಳಗೊಂಡಂತೆ ಸ್ನ್ಯಾಪ್‌ಡೀಲ್ ಜತೆ ವಾಣಿಜ್ಯ ಒಪ್ಪಂದ ಮಾಡಿಕೊಂಡಿರುವುದಾಗಿ ಇಬೈ ಘೋಷಿಸಿದೆ. ಇಬೈ ಮತ್ತು ಸ್ನ್ಯಾಪ್‌ಡೀಲ್ ವ್ಯಾಪಾರಿಗಳಿಗೆ ಹೆಚ್ಚಿನ ಗ್ರಾಹಕ ಬೇಡಿಕೆ ಒದಗಿಸುವ ಜತೆಗೆ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಭಾರತೀಯ ಗ್ರಾಹಕರಿಗೆ ವ್ಯಾಪಕ ಆಯ್ಕೆಗಳನ್ನು ನೀಡುವುದು ಈ ಪಾಲುದಾರಿಕೆಯ ಉದ್ದೇಶವಾಗಿದೆ.  ಇಂಟರ್‌ನೆಟ್ ಮತ್ತು ಮೊಬೈಲ್ ಅಸೋಷಿಯೇಷನ್ ಆಫ್ ಇಂಡಿಯಾದ ಇತ್ತೀಚಿನ ಸಂಶೋಧನೆ ಪ್ರಕಾರ, ಭಾರತೀಯ ಇ ಕಾಮರ್ಸ್ ಮಾರುಕಟ್ಟೆ 2012ರಲ್ಲಿ 1.2 ಬಿಲಿಯನ್ ಡಾಲರ್ ಮತ್ತು 2013ರಲ್ಲಿ 1.8 ಬಿಲಿಯನ್ ಡಾಲರ್‌ನಷ್ಟು ಪ್ರಗತಿ ಹೊಂದಲಿದೆ ಎಂದು ಅಂದಾಜಿಸಲಾಗಿದೆ.  ಈ ಕುರಿತಂತೆ ಇಬೈ ನಿರ್ದೇಶಕರಾಗಿರುವ ಜೈ ಲೀ ಮಾತನಾಡಿ, ಭಾರತದಲ್ಲಿನ ಆನ್‌ಲೈನ್ ಶಾಪಿಂಗ್ ವಿಭಾಗದ ಬೆಳವಣಿಗೆ ಅದ್ಭುತ ವೇಗದಲ್ಲಿದೆ. ಸ್ನ್ಯಾಪ್‌ಡೀಲ್‌ನ ಪೂರಕ ವ್ಯವಹಾರ ಮಾದರಿ, ಉತ್ತಮ ವ್ಯವಸ್ಥಾಪನ ತಂಡ ಮತ್ತು ಸದೃಢ ಬಂಧವನ್ನು ಹೊಂದಿರುವ ಹಿನ್ನೆಲೆಯಲ್ಲಿ ನಾವು ಸ್ನ್ಯಾಪ್ ಡೀಲ್ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

12ರವರೆಗೆ ಮಾರಾಟ ಮೇಳ
ಚನ್ನಪಟ್ಟಣದ ಕೈಮಗ್ಗ ಮತ್ತು ಕರಕುಶಲ ತಯಾರಿಕೆ ಕೇಂದ್ರ 'ಇಂಡಿಯನ್ ಹೆರಿಟೇಜ್‌' ಕುಮಾರಪಾರ್ಕ್‌ರಸ್ತೆಯ ಚಿತ್ರಕಲಾ ಪರಿಷತ್‌ನಲ್ಲಿ ಜೂ. 3ರಿಂದ ಮಾರಾಟ ಮೇಳ ಪ್ರಾರಂಭಿಸಿದ್ದು 12ರವರೆಗೆ ನಡೆಯಲಿದೆ. ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ಕೈಮಗ್ಗ ತಯಾರಿಕೆಯ ವಸ್ತುಗಳನ್ನು ನೇರವಾಗಿ ಜನರಿಗೆ ತಲುಪಿಸುವುದು ಮೇಳದ ಮುಖ್ಯ ಉದ್ದೇಶ. ಈ ಕುರಿತು ಸಂಸ್ಥೆಯ ಕಾರ್ಯದರ್ಶಿ ಮಹಮ್ಮದ್ ಆಸಿಫ್ ಮಾತನಾಡಿ, ದೇಶ, ವಿದೇಶ ಮಟ್ಟದಲ್ಲಿ ಅವಾರ್ಡ್‌ಗಳನ್ನು ಪಡೆದ ಕರಕುಶಲಕಾರರು ಮಾಡಿದ ವಸ್ತುಗಳು ಈ ಮಾರಾಟ ಮೇಳದಲ್ಲಿ ಇರಲಿದೆ ಎಂದರು. ರೇಷ್ಮೆ ಸೀರೆ, ದುಪ್ಪಟ್ಟಾ ಇತರೆ ಬಟ್ಟೆಗಳು ಇಲ್ಲಿ ದೊರಕಲಿವೆ. ಮಹೇಶ್ವರಿ ಸಿಲ್ಕ್, ಚಾಂದೇರಿ ಸಿಲ್ಕ್, ಒರಿಸ್ಸಾ, ರಾ ಸಿಲ್ಕ್, ಮುರ್ಷಿದಾಬಾದ್ ಸಿಲ್ಕ್‌ನ ಬಟ್ಟೆಗಳು ಇಲ್ಲಿ ಲಭ್ಯ. ಜರಿ- ಝರ್ದೋಸಿ ಕಾರ್ಪೆಟ್, ಬೆಡ್‌ಶೀಟ್, ಉಲ್ಲನ್ ಶಾಲ್, ಕಾಶ್ಮೀರಿ, ಪುಲ್ಕಾರಿ ಡಿಸೈನೇಗಳನ್ನು ಹೊಂದಿರುವ ಡ್ರೆಸ್ ಮೆಟೀರಿಯಲ್‌ಗಳು ಕೂಡ ಇಲ್ಲಿ ದೊರಕಲಿದೆ.

ಮಾರುಕಟ್ಟೆಗೆ ಎಂಡುರ್ ರಸ್‌ಸ್ಟೋನ್
ಮುಂಬೈ: ಹಳ್ಳಿಯ ಸೊಗಡನ್ನು ಪ್ರತಿಬಿಂಬಿಸುವ 'ಎಂಡುರ್ ರಸ್‌ಸ್ಟೋನ್‌' ಟೈಲ್ಸ್‌ಗಳನ್ನು ಎಚ್‌ಆ್ಯಂಡ್‌ಆರ್ ಜಾನ್ಸನ್ ಕಂಪನಿ ಮಾರುಕಟ್ಟೆಗೆ ಪರಿಚಯಿಸಿದೆ. ಈ ಟೈಲ್ಸ್‌ಗಳು ನೈಸರ್ಗಿಕವಾಗಿದ್ದು, ವಿಶೇಷವಾಗಿ ಭಾರತೀಯ ಗ್ರಾಮೀಣ ಸೊಗಡನ್ನು ಪ್ರತಿನಿಧಿಸುತ್ತವೆ. ಇವುಗಳನ್ನು ಮಣ್ಣಿನಿಂದ ಹದಮಾಡಲಾಗಿದ್ದು, ಕಂದು, ಬೂದು, ಕಿತ್ತಳೆ, ಬಿಳಿ ಮತ್ತು ಕೆಂಪು ಬಣ್ಣಗಳಿಂದ ಕೂಡಿವೆ. ವಿಶೇಷವಾಗಿ ತಮಿಳುನಾಡಿನ ಕೋಲಂ ರಂಗೋಲಿ, ರಾಜಸ್ಥಾನದ ಪ್ರಾಚೀನ ಕಲೆ ಮತ್ತು ಕೇರಳ ಮರದ ವಿನ್ಯಾಸದ ಚಿತ್ರಗಳನ್ನು ಸ್ಫೂರ್ತಿಯಾಗಿ ಬಳಸಿಕೊಂಡು, ವಿನ್ಯಾಸ ಮಾಡಲಾಗಿದೆ. ಈ ನೂತನ ಎಂಡುರ್ ರಸ್ ಸ್ಟೋನ್ ಟೈಲ್ಸ್‌ಗಳನ್ನು ತಾರಸಿ, ವರಾಂಡಾ ಸೇರಿದಂತೆ ಹೊರಗೋಡೆಯ ಮೇಲ್ಮೈಗಳಿಗೆ ಬಳಸಬಹುದಾಗಿದೆ. ಎಂಡುರ್ ರಸ್‌ಸ್ಟೋನ್ ಆರಂಭದ ಬೆಲೆ ಚದರಿ ಅಡಿಗೆ 80. ಎಲ್ಲ ಜಾನ್ಸನ್ ಸ್ಟೋರ್‌ಗಳಲ್ಲಿ ಈ ಎಂಡುರ್ ರಸ್‌ಸ್ಟೋನ್‌ಗಳು ಲಭ್ಯ ಇವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ