ವಾಣಿಜ್ಯ

ವಿತ್ತಲೋಕದ ಸುತ್ತಮುತ್ತ

ಏರ್‌ಟೆಲ್ ಬ್ರಾಡ್ ಬ್ಯಾಂಡ್ ವಿಶೇಷ ಕೊಡುಗೆ
ಏರ್‌ಟೆಲ್ ಮತ್ತು ಮೈಕ್ರೋಸಾಫ್ಟ್ ಒಂದಾಗಿ ಭಾರತೀಯ ಗ್ರಾಹಕರಿಗಾಗಿ ಎಕ್ಸ್‌ಬಾಕ್ಸ್ 360 ಪ್ಲಸ್ ಏರ್‌ಟೆಲ್ ಬ್ರಾಡ್ ಬ್ಯಾಂಡ್‌ನ ವಿಶೇಷ ಕೊಡುಗೆಯನ್ನು ಬಿಡುಗಡೆ ಮಾಡಿವೆ. ದೆಹಲಿ ಎನ್‌ಸಿಆರ್, ಬೆಂಗಳೂರು, ಚೆನ್ನೈ ಮತ್ತು ಮುಂಬೈ ನಗರಗಳ ಗ್ರಾಹಕರಿಗೆ ಮಾತ್ರ ಲಭ್ಯವಿರುವ ಕೊಡುಗೆ ಇದಾಗಿದ್ದು, ಜೂನ್ 30ರವರೆಗೆ ಚಾಲನೆಯಲ್ಲಿ ಇರಲಿದೆ.  ಉಚಿತ ಎಕ್ಸ್‌ಬಾಕ್ಸ್ ಗೇಮ್‌ಗಳು, ಏರ್‌ಟೆಲ್ ಹೈ ಸ್ಪೀಡ್ ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ ಆಕರ್ಷಕ ಕೊಡುಗೆಗಳು ಹಾಗೂ ಉಚಿತ ಎಕ್ಸ್‌ಬಾಕ್ಸ್ ಲೈವ್ ಗೋಲ್ಡ್ ಸದಸ್ಯತ್ವ ಇವು ಈ ಬೇಸಿಗೆಯಲ್ಲಿ ಅದ್ಭುತವಾದ ಮನರಂಜನೆಯ ಡೀಲ್‌ಗಳನ್ನು ಹುಡುಕುತ್ತಿರುವ ಗ್ರಾಹಕರಿಗೆ ಕೆಲ ಉಪಯುಕ್ತ ಅಂಶಗಳಾಗಿವೆ. ಈ ಕುರಿತು ಮಾತನಾಡಿದ ಮೈಕ್ರೋಸಾಫ್ಟ್ ಕಾರ್ಪೋರೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಬ್ಯುಸಿನೆಸ್ ಗ್ರೂಪ್ ಲೀಡ್- ಇಂಟರಾಕ್ಟಿವ್ ಇಂಟರ್‌ನೆಟ್ ಬ್ಯುಸಿನೆಸ್‌ನ ಅನ್ಷು ಮೋರ್, ಅತ್ಯುತ್ತಮ ಮಲ್ಟಿಪ್ಲೆಯರ್ ಆಕ್ಷನ್‌ನಿಂದಾಗಿ ಖ್ಯಾತಿ ಪಡೆದಿರುವ ಎಕ್ಸ್‌ಬಾಕ್ಸ್‌ನ ಲೈವ್ ಮನರಂಜನೆಯ ಅನುಭೂತಿಯನ್ನು ಗ್ರಾಹಕರು ಪಡೆಯಬಹುದಾಗಿದೆ. ಯಾವುದೇ ಅಡೆತಡೆಗಳಿಲ್ಲದೆ ರೋಚಕ ರೋಮಿಂಗ್, ಗೇಮಿಂಗ್, ಆಕ್ಷನ್/ ಮನರಂಜನೆಯ ಅನುಭವವನ್ನು ನೀಡುತ್ತದೆ ಎಂದರು. ಮಾಹಿತಿಗೆ: ಢಿಢಿಢಿ.ಛ್ಝ್ಠಡಿಜಟ.್ಝಟಿ/್ಢಛ್ಟ್ಢಿಗೆ ಭೇಟಿ ನೀಡಿ.


ಕೆನರಾಬ್ಯಾಂಕ್ ದೆಹಲಿಯವರೆಗೂ ವಿಸ್ತರಣೆ

ಕೆನರಾ ಬ್ಯಾಂಕ್ ತನ್ನ ಉತ್ತರ ವಿಭಾಗವನ್ನು ದೆಹಲಿಯವರೆಗೂ ವಿಸ್ತರಿಸಿದೆ. ಮುನಿರ್ಕಾ ಮತ್ತು ಯಮುನಾ ವಿಹಾರ ಶಾಖೆಗಳನ್ನು ಅಧಿಕೃತವಾಗಿ ಇತ್ತೀಚಿಗೆ ಅನಾವರಣಗೊಳಿಸಲಾಯಿತು. ಈ ಮೂಲಕ ತನ್ನ ಕಾರ್ಯವ್ಯಾಪಿ ವಿಸ್ತರಣೆಯಲ್ಲಿ ಉತ್ತಮ ಸನ್ನಿವೇಶ ಹಾಗೂ ಯುವ ಪೀಳಿಗೆಯ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಲು ಪಣತೊಟ್ಟಿದೆ ಎಂದು ಶಾಖೆ ಉದ್ಘಾಟನೆ ಮಾಡಿದ ಆರ್.ಕೆ. ದುಬೆ ತಿಳಿಸಿದರು. ಕೆನರಾ ಬ್ಯಾಂಕ್ ದೆಹಲಿಯ ಗ್ರಾಹಕರ ಒತ್ತಾಯದ ಮೇರೆಗೆ, ಬ್ಯಾಂಕ್‌ಗಳ ಪುನರ್‌ನವೀಕರಣ ಕಾರ್ಯವನ್ನು ಮಾಡುತ್ತಲೇ ಬಂದಿದೆ. ಅಲ್ಲದೇ ಇ-ಲಾಂಗ್ಸ್ ಮತ್ತು ಟೆಕ್ ಪಾರ್ಕ್‌ಗಳ ನಿರ್ಮಾಣ ಕೂಡ ಉತ್ತಮ ನಗರಕ್ಕೆ ಕೊಡುಗೆಯಾಗಿ ನೀಡಿದೆ ಎಂದು ಅವರು ಹೇಳಿದರು.




ಗೋ ಏರ್ ಸಂಸ್ಥೆ  ಒಪ್ಪಂದ
ಗೋ ಏರ್ ಸಂಸ್ಥೆ ಸೇವೆಯಲ್ಲಿರುವ ತನ್ನ ವಿಮಾನಗಳಿಗೆ ಐದು ಶಾರ್ಕ್ಲೆಟ್ ಶಿಪ್‌ಸೆಟ್ ಅಳವಡಿಸುವ ಉದ್ದೇಶ ಪತ್ರಕ್ಕೆ ಏರ್ ಬಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿರುವುದಾಗಿ ಪ್ರಕಟಿಸಿದೆ. ಶಾರ್ಕ್ಲೆಟ್‌ಗಳು, ನೂತನವಾಗಿ ವಿನ್ಯಾಸಗೊಳಿಸಲ್ಪಟ್ಟ ಏರ್‌ಬಸ್ ವಿಮಾನಗಳ ವಾಯುಚಲನಾ ಸಾಮರ್ಥ್ಯ ಉತ್ತಮಪಡಿಸುವ, ಇಂಧನ ಬಳಕೆಯನ್ನು ಶೇ.4ರಷ್ಟು ಕಡಿಮೆ ಮಾಡುವ ಮತ್ತು ಇಂಗಾಲಾಮ್ಲ ವಿಸರ್ಜನೆ ಕಡಿಮೆ ಮಾಡುವ ರೆಕ್ಕೆ ತುದಿಯ ಸಾಧನಗಳು ಒಪ್ಪಂದದಲ್ಲಿ ಒಂದಾಗಿದೆ. ಈ ಬಗ್ಗೆ ಮಾತನಾಡಿದ ಗೋ ಏರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಯೋರ್ಜಿಯೋ ಡೆ ರೋನಿ, ಏರ್ ಬಸ್‌ನಿಂದ ಸರಬರಾಜು ಮಾಡಲ್ಪಟ್ಟ, ಶಾರ್ಕ್‌ಲೆಟ್ ಅಳವಡಿಸಲ್ಪಟ್ಟ ವಿಮಾನಗಶಳು ನಮ್ಮ ನಿರೀಕ್ಷೆಗಳನ್ನು ಮೀರಿವೆ. ಇಂತಹ ಅತ್ಯುತ್ತಮ ಕಾರ್ಯಕ್ಷಮತೆಯು ಕಂಡುಬರುವುದರಿಂದ ನಾವು ನಮ್ಮ ಎಲ್ಲಾ ಸೇವೆಯಲ್ಲಿರುವ ಏರ್‌ಬಸ್ ವಿಮಾನಗಳಿಗೂ ಶಾರ್ಕ್ಲೆಟ್‌ಗಳನ್ನು ಅಳವಡಿಸಲು ನಿರ್ಧರಿಸಿದ್ದೇವೆ ಎಂದರು.



ಅಕ್ಷಯ ತೃತೀಯಕ್ಕೆ ತಾನಿಷ್ಕ್ ವಿಶೇಷ ಕೊಡುಗೆ
ಆಭರಣ ಉದ್ಯಮ ತಾನಿಷ್ಕ್ ಅಕ್ಷಯ ತೃತೀಯಕ್ಕಾಗಿ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಈ ಮೂಲಕ ಗ್ರಾಹಕರ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿದೆ. ಅಕ್ಷಯ ತೃತೀಯ ಸಂಭ್ರಮದ ಆಚರಣೆಗಾಗಿ ತಾನಿಷ್ಕ್, ಪ್ರತಿ ಚಿನ್ನ ಖರೀದಿ ಮೇಲೆ ಚಿನ್ನದ ನಾಣ್ಯ ಉಚಿತವಾಗಿ ನೀಡುತ್ತಿದೆ. 2 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರಾಭರಣ ಖರೀದಿ ಮೇಲೆ ಶೇ. 15ರಷ್ಟು ರಿಯಾಯಿತಿ ಘೋಷಿಸಿದೆ. 2013ರ ಮೇ 13ರವರೆಗೆ ದೇಶದ ಎಲ್ಲಾ ತಾನಿಷ್ಕ್ ಮಳಿಗೆಗಳಲ್ಲಿ ಈ ಕೊಡುಗೆ ಲಭ್ಯವಿದೆ.  ಹಣದುಬ್ಬರ ಸಮಸ್ಯೆಯಿಂದ ಪಾರಾಗಲು ಚಿನ್ನದ ಮೇಲಿನ ಹೂಡಿಕೆ ಅತ್ಯುತ್ತಮ ಎಂದು ಸಾಬೀತಾಗಿದೆ. ಅಕ್ಷಯ ತೃತೀಯಕ್ಕೆ ತಾನಿಷ್ಕ್, ಗ್ರಾಹಕರಿಗೆ ಅಗತ್ಯವಾದ ಆಭರಣಗಳನ್ನು ಕಾಲಕ್ಕೆ ಅನುಗುಣವಾಗಿ ರಿಯಾಯಿತಿ ದರದಲ್ಲಿ ನೀಡಲಿದೆ ಎಂದು ತಾನಿಷ್ಕ್ ಉಪಾಧ್ಯಕ್ಷ ಸಂದೀಪ್ ಕುಲ್ಹಳ್ಳಿ ತಿಳಿಸಿದರು. ಖರೀದಿಗಾಗಿ ಡಿಡಿಠ://ಢಿಢಿಢಿ. ಡಿಛಟ್ಝಿಝಠಿ.್ಛ್ಟ .್ಝಟಿ ತಾಣಕ್ಕೆ ಭೇಟಿ ನೀಡಬಹುದು.


ಪ್ಯಾಕೆಟ್ ಇಂಟರ್‌ನೆಟ್ 24 ಬಿಡುಗಡೆ

ಇಂಟರ್‌ನೆಟ್ ವಿಸ್ತರಣೆಯಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿರುವ ಏರ್‌ಸೆಲ್ ಟೆಲಿಕಾಂ ಸಂಸ್ಥೆ ಪ್ಯಾಕೆಟ್ ಇಂಟರ್‌ನೆಟ್ 24ಅನ್ನು ಬಿಡುಗಡೆಗೊಳಿಸಿದೆ. ಈ ವಿನೂತನ ಉತ್ಪನ್ನ 24ಕ್ಕೆ 30ದಿನಗಳ ಹೆಚ್ಚಿನ ಅವಧಿ ಹೊಂದಿದೆ. ಗ್ರಾಹಕರಿಗೆ ತಮ್ಮ ಮೊಬೈಲ್ ಫೋನ್‌ನಲ್ಲಿ ಯುಕ್ತದರದಲ್ಲಿ ದಿನಕ್ಕೆ 1ಕ್ಕಿಂತ ಕಡಿಮೆ ವೆಚ್ಚದಲ್ಲಿ ಇಂಟರ್‌ನೆಟ್ ಸೇವೆ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ಮೊಬೈಲ್ ಇಂಟರ್‌ನೆಟ್ ಬಳಕೆದಾರರ ಸಲುವಾಗಿ ರೂಪಿಸಿರುವ ಪ್ಯಾಕೆಟ್ ಇಂಟರ್‌ನೆಟ್ 24 ಜನಪ್ರಿಯ ಸರ್ಚ್ ಎಂಜಿನ್ ಮತ್ತು ಸಾಮಾಜಿಕ ವೆಬ್‌ತಾಣದ ಬಳಕೆಯನ್ನು ಹೆಚ್ಚಿಸಲಿದೆ. ಗ್ರಾಹಕರು ಇದರ ಮೂಲಕ ಅಪ್ಲಿಕೇಶನ್‌ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ನೆಟ್ ಸರ್ಫ್ ಮಾಡಬಹುದು.  ಈ ಕುರಿತಂತೆ ಏರ್‌ಸೆಲ್ ಕರ್ನಾಟಕ ವೃತ್ತದ ಮುಖ್ಯಸ್ಥ ಕೆ. ಕದಿವರನ್ ಮಾತನಾಡಿ, ಭಾರತ ವಿಶ್ವದಲ್ಲಿ 3ನೇ ಅತಿದೊಡ್ಡ ಇಂಟರ್‌ನೆಟ್ ಬಳಕೆದಾರ ರಾಷ್ಟ್ರವಾಗಿದೆ. ವರ್ಷಕ್ಕೆ 70 ದಶಲಕ್ಷ ಇಂಟರ್‌ನೆಟ್ ಬಳಕೆದಾರರು ಸೇರ್ಪಡೆಯಾಗುತ್ತಿದ್ದಾರೆ. ಈ ಪ್ರಬಲ ಬೆಳವಣಿಗೆಯ ಹೊರತಾಗಿಯೂ ಗ್ರಾಹಕರಿಗೆ ಹೆಚ್ಚು ಅನುಭವದ ಕೊರತೆ ಇದೆ. ಪ್ಯಾಕೆಟ್ ಇಂಟರ್‌ನೆಟ್ ಮೂಲಕ ಈ ವಲಯದಲ್ಲಿ ಮುಂಚೂಣಿಗೆ ಬರುವ ಗುರಿ ಹೊಂದಿದ್ದೇವೆ ಎಂದರು. ಪ್ಯಾಕೆಟ್ ಇಂಟರ್‌ನೆಟ್ 24 ಏರ್‌ಸೆಲ್‌ನ ಡಾಟಾ ಖಾತೆಯನ್ನು ಹೊಂದಿದೆ. ಕರ್ನಾಟಕದಲ್ಲಿ 100ಎಂಬಿ ಡಾಟಾ 24ಕ್ಕೆ ಸಿಗುತ್ತದೆ. ಒಂದು ಸಲ 100ಎಂಬಿ ಡಾಟಾ ಬಳಕೆಯಾದ ನಂತರ  1ಪಿ/10ಕೆಬಿ ದರ ಕಡಿತದಲ್ಲಿ ಶೇ. 90ರಷ್ಟು ಡಾಟಾ ಪಟ್ಟಿಯೊಂದಿಗೆ ಪಡೆಯಬಹುದು. ಈ ಡಾಟಾ ಇಂಟರ್‌ನೆಟ್ ಪ್ಯಾಕ್ 2ಜಿ ಮತ್ತು 3ಜಿ ಹ್ಯಾಂಡ್ ಸೆಟ್‌ನ್ನು ಬೆಂಬಲಿಸುತ್ತದೆ.

ಡೇಟಾಮ್ಯಾಟಿಕ್ಸ್ ಗ್ಲೋಬಲ್ ಸಿಬ್ಬಂದಿಗೆ ಪ್ರಶಸ್ತಿ
ಡೇಟಾಮ್ಯಾಟಿಕ್ಸ್ ಗ್ಲೋಬಲ್‌ನ 4ನೇ ವಾರ್ಷಿಕ ಮಹಿಳಾ ಮುಂದಾಳುಗಳ ಸ್ಪರ್ಧೆಯಲ್ಲಿ ಸಂಸ್ಥೆಯ ಉದ್ಯೋಗಿಗಳು ಎರಡು ಪ್ರಶಸ್ತಿಗಳನ್ನು ಪಡೆದಿದ್ದು, ಇತ್ತೀಚಿಗೆ ಮುಂಬೈನಲ್ಲಿ  ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು. ಡೇಟಾಮ್ಯಾಟಿಕ್ಸ್‌ನ ಮಾರುಕಟ್ಟೆ ಸಂವಹನ ಮುಖ್ಯಸ್ಥೆ ವರದ್ ಕೆ.ಅರೋರಾ ಅವರು ಪ್ರಮುಖ ಮಹಿಳಾ ಮಾರುಕಟ್ಟೆ ಅಧಿಕಾರಿ ಪ್ರಶಸ್ತಿ ಪಡೆದಿದ್ದಾರೆ. 2ನೇ ಪ್ರಶಸ್ತಿ ಪ್ರಮುಖ ಮಹಿಳಾ ಸ್ವಾಮ್ಯದ ನಾವೀನ್ಯತೆಯ ಯೋಜನೆಯ ಪ್ರಶಸ್ತಿಯನ್ನು ಕಾನೂನು ಮತ್ತು ಕಂಪನಿ ಕಾರ್ಯದರ್ಶಿಯೂ ಆಗಿರುವ ಉಪಾಧ್ಯಕ್ಷೆ ದಿವ್ಯ ಕುಮಟ್ ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿದ ಡೇಟಾಮ್ಯಾಟಿಕ್ಸ್‌ನ ಉಪಾಧ್ಯಕ್ಷ ಮತ್ತು ಸಿಇಓ ರಾಹುಲ್ ಕನೋಡಿಯ, ಇಬ್ಬರು ಅತ್ಯಂತ ಪ್ರತಿಭಾಶಾಲಿಗಳಾದ ವರ್ಚಸ್ವೀ ಮಹಿಳೆಯರು ಕಂಪನಿಯ ಪ್ರಮುಖ ಕಾರ್ಯಭಾರ ನಿರ್ವಹಿಸಿ ತಮ್ಮ ಅನುಕ್ರಮ ಕ್ಷೇತ್ರಗಳಲ್ಲಿ ಅತ್ಯುತ್ತಮ ಫಲಿತಾಂಶ ತಂದಿದ್ದಾರೆ. ಇಂತಹ ಮಹಿಳೆಯರನ್ನು ಹೊಂದಿರುವ ಡೇಟಾಮ್ಯಾಟಿಕ್ಸ್ ಈ ಪ್ರಶಸ್ತಿಗೆ ಅರ್ಹ ಅಭ್ಯರ್ಥಿಯಾಗಿತ್ತು ಎಂದರು.



ಡೊಕೊಮೋ ಡಾಟಾ ರೀಚಾರ್ಜ್ ಸೌಲಭ್ಯ
ಟಾಟಾ ಟೆಲಿಸರ್ವೀಸಸ್ ಕಂಪನಿ ಜನಪ್ರಿಯ ದೂರಸಂಪರ್ಕ ಬ್ರಾಂಡ್ ಆಗಿರುವ ಟಾಟಾ ಡೊಕೊಮೋ ಕರ್ನಾಟಕದ 3ಜಿ ಪ್ರೀಪೇಯ್ಡ್ ಗ್ರಾಹಕರಿಗೆ ಕೈಗೆಟುಕುವ ದರದ ಡಾಟಾ ರೀಚಾರ್ಜ್ ಸೌಲಭ್ಯ ಪರಿಚಯಿಸಿದೆ. ಈ ಕೈಗೆಟುವಂತಹ 20ರ ರೀಚಾರ್ಜ್ ಸೌಲಭ್ಯ ಪಡೆದುಕೊಳ್ಳಲು ಗ್ರಾಹಕರು ಟಾಟಾ ಡೊಕೊಮೊದ ಹೊಸದಾದ ಡೇಟಾ ಸಿಮ್ ಕಾರ್ಡ್ ಖರೀದಿಸಬೇಕಿದೆ. ಹೊಸ ಸಿಮ್‌ಕಾರ್ಡ್ ಮೂಲಕ ಮಾಡಿಕೊಳ್ಳುವ ರೀಚಾರ್ಜ್ 30ದಿನಗಳ ಸೇವಾವಧಿ ಹೊಂದಿದೆ. ಈ ವಿಶೇಷ ಸಿಮ್‌ಕಾರ್ಡ್ ಬೆಲೆ 499. ಇದರಲ್ಲಿ ರೀಚಾರ್ಜ್ ಮಾಡಿಸಿದರೆ ಟಾಟಾ ಡೊಕೊಮೊ ಗ್ರಾಹಕರು ಮಿತಿಯಿಲ್ಲದಷ್ಟು 3ಜಿಬಿ ಡಾಟಾ ಸೌಲಭ್ಯವನ್ನು 30 ದಿನಗಳ ಅವಧಿಗೆ ಪಡೆದುಕೊಳ್ಳುವರು. 30 ದಿನಗಳ ಕಾಲಾವಧಿಯಲ್ಲಿ ನಂತರದ ಐದು ರೀಚಾರ್ಜ್‌ಗಳಿಗೆ 1ಜಿಬಿಯಷ್ಟು ಉಚಿತ ಡಾಟಾ ಸೌಲಭ್ಯ ಪಡೆಯಬಹುದು. ಈ ಬಗ್ಗೆ ಪ್ರತಿಕ್ರಿಯಿಸಿದ ಟಾಟಾ ಡೊಕೊಮೊ ದಕ್ಷಿಣ ವಲಯದ ಮುಖ್ಯಸ್ಥ ಯತೀಶ್ ಮೆಹ್ರೋತ್ರಾ, ಹೊಸತಾದ 3ಜಿ ಮೊದಲ ರೀಚಾರ್ಜ್ ಕೊಡುಗೆ ಮೂಲಕ ಟಾಟಾ ಡೊಕೊಮೊ 3ಜಿ ಸೇವೆಗಳ ಮಾರ್ಗದಲ್ಲಿದ್ದ ಎಲ್ಲ ಕೃತಕ ಮಿತಿಗಳನ್ನು ಮೀರಿ ಮುನ್ನಡೆದಂತಾಗಿದೆ ಎಂದರು.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ