ವಾಣಿಜ್ಯ

ಸೆಪ್ಟೆಂಬರ್ ಸಾಧನೆ: ಒಳ್ಳೆಯ ಸೂಚನೆ

ರಿಸರ್ವ್ ಬ್ಯಾಂಕ್ ಪ್ರಕಟಿಸಿರುವ ಸೆಪ್ಟೆಂಬರ್‌ನ ಅಂತಾರಾಷ್ಟ್ರೀಯ ವ್ಯವಹಾರದ ವರದಿಯಂತೆ ಭಾರತದ ಸಾಧನೆ ಗಮನಾರ್ಹ. ರಫ್ತು- ಆಮದುಗಳ ನಡುವಣ ಕೊರತೆಯ ಪ್ರಮಾಣ ಕಡಿಮೆಯಾಗಿದೆ.
ವಿತ್ತಮಂತ್ರಿ ಪಿ. ಚಿದಂಬರಮ್ ಅವರು ಒಂದು ರೀತಿಯಲ್ಲಿ ಇದನ್ನು ನಿರೀಕ್ಷಿಸಿದ್ದರು. ಹಲವಾರು ಭಾಷಣಗಳಲ್ಲಿ ಪ್ರಸ್ತಾಪಿಸಿದ್ದರು. ಈ ಪ್ರವೃತ್ತಿ ಹೀಗೇ ಮುಂದುವರಿದರೆ, ದೇಶದ ವಿತ್ತೀಯ ವ್ಯವಹಾರದಲ್ಲಿ ಚಾಲ್ತಿ ಲೆಕ್ಕದ ಕೊರತೆಯನ್ನು ನಿಯಂತ್ರಿಸುವುದು ಸಾಧ್ಯವಾಗಬಹುದು.
ಬಹುಕಾಲದ ಅನಂತರ (ಎರಡೂವರೆ ವರ್ಷ) ಇಂಥ ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಸೆಪ್ಟೆಂಬರ್‌ಗೆ ಮುಗಿದ ತ್ರೈಮಾಸಿಕ ಅವಧಿಯಲ್ಲಿ (ಜುಲೈ- ಸೆಪ್ಟೆಂಬರ್) ಪೇಟೆ ಪ್ರಕರಣದಲ್ಲಿ ಸಿಕ್ಕಿದ ಲಾಭ ಕಡಿಮೆ. ಅತೃಪ್ತಿಕರ. ಡಿಸೆಂಬರ್‌ನಲ್ಲಿ ಪರಿಸ್ಥಿತಿ ಸುಧಾರಿಸಲೂಬಹುದು. ಅಮೆರಿಕ ಈಗಿನ ಆಂತರಿಕ ಸ್ಥಗಿತ ವ್ಯವಹಾರವನ್ನು ಯಾವ ರೀತಿ ಬಗೆಹರಿಸಿಕೊಳ್ಳಲಿದೆ ಎನ್ನುವುದು ಅಂದಾಜಿಗೇ ಸಿಗುತ್ತಿಲ್ಲ.
ಕೆಲವರ ಪ್ರಕಾರ, ಭಾರತದ ಸ್ಥಿತಿ ಈಗ ಚಕ್ರದ ಕೆಳಗಡೆ ಮಧ್ಯದಲ್ಲಿರುವಂತೆ, ಚಕ್ರ ಯಾವ ದಿಕ್ಕಿನಲ್ಲಿ ತಿರುಗಿದರೂ ನಮ್ಮ ಸ್ಥಿತಿ ಮೇಲೇರಲೇಬೇಕು. ಇದು ಆಲಿವರ್ ಗೋಲ್ಡ್‌ಸ್ಮಿತ್‌ನ ಮಾತು. ವ್ಯಾಪಾರಿ ಪ್ರಕರಣಕ್ಕೆ ಅನ್ವಯಿಸಬಹುದೋ ಇಲ್ಲವೋ ಗೊತ್ತಿಲ್ಲ.
ಪೇಟೆಯ ಆಟಗಾರರು ತಮ್ಮ ಬಂಡವಾಳ ಹೊಡಿಕೆಯ ಯೋಜನೆಗಳನ್ನೂ ಮುಂದೂಡುವುದು ಒಳಿತೆಂದು ಪಂಡಿತರು ಭಾವಿಸಿರುವಂತಿದೆ. ಆದರೆ, ಬಹಿರಂಗವಾಗಿ ಅವರು ಮೌನವಾಗಿದ್ದಾರೆ.

ನವರಾತ್ರಿ- ದೀಪಾವಳಿ
ನವರಾತ್ರಿ-ದೀಪಾವಳಿ... ನಮ್ಮಲ್ಲಿ ಬೊಂಬಾಟ್ ವ್ಯವಹಾರ ಸಮಯ. ಸಾಲ ಮಾಡಿಯಾದರೂ ಸ್ವಂತಕ್ಕೆ- ಬೇಕಾದವರಿಗೆ ಕೊಡಲಿಕ್ಕೆ ಏನಾದರೂ ಕೊಳ್ಳುವ ಹಂಬಲ ಮಧ್ಯಮ ವರ್ಗದ್ದು.
ಈಗೀಗ ಇಂಥ 'ವ್ಯವಹಾರಕ್ಕೆ' ಬ್ಯಾಂಕ್‌ಗಳು ಸಾಲ ನೀಡುವುದು ಸ್ವಲ್ಪ ಕಷ್ಟ. ಬ್ಯಾಂಕ್‌ಗಳು ಸಾಲ ನೀಡುವುದು ಸ್ವಲ್ಪ ಕಷ್ಟ. ಬ್ಯಾಂಕ್‌ಗಳಿಂದ ಕ್ರೆಡಿಟ್ ಕಾರ್ಡ್ ಪಡೆದವರು ಈ ಸಮಯದಲ್ಲೇ ದೊಡ್ಡ ರೀತಿಯಲ್ಲಿ ವ್ಯವಹರಿಸಲಿ ಎನ್ನುವ ಉದ್ದೇಶ. ಈ ಬಾರಿ ಬ್ಯಾಂಕ್ ಸಾಲದ ಮಾರ್ಗದಲ್ಲಿ ವಸ್ತುಗಳಿಗೆ ಹೆಚ್ಚು ಬೇಡಿಕೆಯನ್ನು ಸೃಷ್ಟಿಸುವ ನೀತಿಗೆ ರಿಸರ್ವ್ ಬ್ಯಾಂಕಿನ ಒಲವು ಪ್ರಕಟವಾಗಿದೆ. (ಅದು ಕಳೆದ ವಾರದಲ್ಲೇ ಆಗಿತ್ತು).
ಆ ನೀತಿಯಂತೆ, ರಿಸರ್ವ್ ಬ್ಯಾಂಕ್ ತನ್ನ ಬ್ಯಾಂಕ್‌ಗಳಿಗೆ ಕೊಡುವ ಸಾಲದ ಮಿತಿಯನ್ನು ಮೀರಿ ಸಾಲ ಕೊಡುವ ವ್ಯವಸ್ಥೆ- ಮಾರ್ಜಿನಲ್ ಸ್ಪೆಷಲ್ ಫೆಸಿಲಿಟಿ- ವ್ಯವಸ್ಥೆಯಲ್ಲಿ ಸಿಗುವ ಸಾಲದ ಪ್ರಮಾಣವನ್ನೂ ಹೆಚ್ಚಿಸಿ ಬಡ್ಡಿದರವನ್ನೂ ಸ್ವಲ್ಪ ಇಳಿಸಿದರೆ ಇದರಿಂದ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಅಧಿಕ ಸಾಲ (ಷರತ್ತುಗಳಿಗೆ ಬದ್ಧವಾಗಿ) ಕೊಡುವುದು ಸಾಧ್ಯವಾಗಬಹುದು. ಆದರೆ, ಇಂಥ ವ್ಯವಸ್ಥೆ ಪಂಡಿತರಿಗೆ ಹಿಡಿಸಿಲ್ಲ. ಕೆಲವು ಸರ್ಕಾರಿ ಬ್ಯಾಂಕ್‌ಗಳು ಈಗಾಗಲೇ ತಮ್ಮ ಅಲ್ಪಾವಧಿ ಸಾಲಗಳ ಬಡ್ಡಿದರವನ್ನು ಸ್ವಲ್ಪ ಮಟ್ಟಿಗೆ ಇಳಿಸಿವೆ.

ಕೊನೆಮಾತು
ಇದ್ದಕ್ಕಿದ್ದಂತೆ ಬ್ಯಾಂಕ್‌ಗಳಿಗೆ ಕಾರುಗಳ ಸಾಲ ಕೊಡುವುದರಲ್ಲಿ ವಿಪರೀತ ಆಸಕ್ತಿ ಹುಟ್ಟಿದ್ದೇಕೆ? ಕಾರು ತಯಾರಕರ ಒತ್ತಾಯ.

- ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಬರ ಎಫೆಕ್ಟ್: ರೈತರ ನೆರವಿಗೆ ಧಾವಿಸಿದ ಸರ್ಕಾರ; 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ..!