ವಾಣಿಜ್ಯ

ತಿಂಗಳು ಕಾಯಿರಿ...

ಹಣದ ಅತಿ ಪ್ರಸರಣದ ಹೆಚ್ಚಳದ ದರದ ವಿಚಾರದಲ್ಲಿ ನಿಮ್ಮ- ನಮ್ಮಂಥವರಿಗೆ ಯಾವ ಚಿಂತೆಯೂ ಇಲ್ಲ. ಆದರೆ ಆ ಪ್ರಕ್ರಿಯೆಯ ಪರಿಣಾಮವಾಗಿ..

ಹಣದ ಅತಿ ಪ್ರಸರಣದ ಹೆಚ್ಚಳದ ದರದ ವಿಚಾರದಲ್ಲಿ ನಿಮ್ಮ- ನಮ್ಮಂಥವರಿಗೆ ಯಾವ ಚಿಂತೆಯೂ ಇಲ್ಲ. ಆದರೆ ಆ ಪ್ರಕ್ರಿಯೆಯ ಪರಿಣಾಮವಾಗಿ, ಬೀದಿ ಬದಿಯ ಅಂಗಡಿಗಳಿಂದ ಹಿಡಿದು ಬೃಹತ್ ಮಾಲ್‌ಗಳವರೆಗೆ ಹೆಚ್ಚು ಕಡಿಮೆ ಎಲ್ಲ ವಸ್ತುಗಳ ಬೆಲೆಯೂ ಏರಿದಾಗ, ಮೈ- ಕೈ ಪರಚಿಕೊಳ್ಳುವಂತಾಗುತ್ತದೆ. ವಾರದಿಂದ ವಾರಕ್ಕೆ ಬೆಲೆಗಳು ಹೆಚ್ಚುತ್ತಲೇ ಇರುವಾಗ ಒಂದು ಕಡೆ ರಿಸರ್ವ್‌ಬ್ಯಾಂಕ್ ಗವರ್ನರ್ ರಘುರಾಮನ್ ರಾಜನ್ ಇನ್ನೊಂದು ಕಡೆ ಯೋಜನಾ ಆಯೋಗದ ಉಪಾಧ್ಯಕ್ಷ (ಅಧ್ಯಕ್ಷರು ಪ್ರಧಾನಿ) ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ವಾರಕ್ಕೊಮ್ಮೆ ಇನ್ನು ಒಂದೇ ತಿಂಗಳಷ್ಟೇ, ಈ ಪ್ರವೃತ್ತಿ ಬದಲಾಗಲೇಬೇಕು, ಬದಲಾಗುತ್ತಿದೆ ಎನ್ನುವ ಹೇಳಿಕೆಯನ್ನು ಪ್ರಕಟಿಸುತ್ತಾರೆ.
ಈಚಿನ ದಿನಗಳಲ್ಲಿ ಜನರೂ ಅವರ ಮಾತನ್ನು ನಂಬುತ್ತಿಲ್ಲ. ಅವರನ್ನು ಆಗಿಂದ್ದಾಗ್ಗೆ ಭೇಟಿ ಮಾಡುವ ಪತ್ರಕರ್ತರೂ ಪ್ರಶ್ನೆ ಕೇಳುವುದನ್ನು ಬಿಟ್ಟಿದ್ದಾರೆ.
ಇನ್‌ಫ್ಲೇಶನ್ ವಿರುದ್ಧ ಗ್ರಾಹಕರ ಸಾಲಕ್ಕೆ (ಬಾಂಡ್) ಮೌಲ್ಯದ ರಕ್ಷಣೆ ನೀಡುವ ಬಾಂಡ್‌ಗಳ ಮಾರಾಟ ಇನ್ನೂ ಜನಪ್ರಿಯವಾಗಿಲ್ಲ. ಸರ್ಕಾರಿ ಪಂಡಿತರು ಏನಾದರೂ ಹೇಳಿಕೊಳ್ಳಲಿ, ಮಧ್ಯಮ ವರ್ಗದವರಿಗೆ ಇನ್‌ಫ್ಲೇಶನ್ ದರ ಕಡಿಮೆಯಾಗುವುದರಲ್ಲಿ ವಿಶ್ವಾಸ ಮೂಡಿಲ್ಲ.
ಈಗಿನ ಪರಿಸ್ಥಿತಿಯಲ್ಲಿ ಇನ್‌ಫ್ಲೇಶನ್ ಸೂಚ್ಯಂಕ ಆಧರಿತ ಬಾಂಡ್‌ಗಳನ್ನು ಸಗಟು ಪೇಟೆಯ ಬೆಲೆಗಳ ಸೂಚ್ಯಂಕಗಳ ಜತೆ ಜೋಡಿಸಲಾಗಿದೆ. ಮಧ್ಯಮ ವರ್ಗದ ಗ್ರಾಹಕರು ಸಗಟು ಪೇಟೆಯ ಗ್ರಾಹಕರಲ್ಲ, ಚಿಲ್ಲರೆ ಪೇಟೆಯ ದರಗಳ ಆಧಾರಿತ ಬಾಂಡ್‌ಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ರಘುರಾಮನ್ ರಾಜನ್ ಹೇಳಿದ್ದಾರೆ. ಸದ್ಯದಲ್ಲೇ ಅಂದರೆ ಯಾವಾಗ?

ಹಬ್ಬದ ಧಮಾಕಾ
ದೇಶದ ಮಾರುಕಟ್ಟೆಗಳಲ್ಲಿ (ಷೇರು ಪೇಟೆಯಲ್ಲಿ ಅಲ್ಲ) ಉತ್ಸಾಹವನ್ನು ತುಂಬುವುದಕ್ಕೆ ಕೇಂದ್ರ ಸರ್ಕಾರ ಈಗ ಮುಂದಾಗಿದೆ. ಸರ್ಕಾರದ ಬ್ಯಾಂಕ್‌ಗಳಿಗೆ ಈಗ ಅಧಿಕವಾಗಿ 14000 ಕೋಟಿ ರು.ಗಳನ್ನು ಬಂಡವಾಳ ನಿಧಿಯಾಗಿ ಒದಗಿಸಲಿದೆ. ಈ ಹಣದಿಂದ ಬ್ಯಾಂಕ್‌ಗಳು ತಮ್ಮ ಮಾಮೂಲಿ ಮೂಲಗಳಿಂದ ಹೆಚ್ಚಿನ ಸಾಲ ಪಡೆದು, ಪೇಟೆ ದರಕ್ಕಿಂತ ಸ್ವಲ್ಪ ಕಡಿಮೆ ದರದಲ್ಲಿ ಹಬ್ಬದ ಧಮಾಕಾ ಜನರಿಗೆ ಸಾಲ ಕೊಡಲಿದೆ.
ಇದರ ಪ್ರಯೋಜನವೇನು? ಪೇಟೆಯಲ್ಲಿ ವಸ್ತುಗಳ ಮಾರಾಟದ ಪ್ರಮಾಣ ಹೆಚ್ಚುತ್ತದೆ. ಅದರಿಂದ ಇಡೀ ವಾಣಿಜ್ಯ ಪ್ರಪಂಚದಲ್ಲಿ ಉತ್ಸಾಹ ಚಿಮ್ಮಲಿದೆ ಎನ್ನುವುದೊಂದು ನಂಬಿಕೆ.
ಆದರೆ, ಸುಲಭವಾಗಿ ಸಿಗುವ ಸಾಲದ ಆಸೆಗೆ ಬಲಿಯಾಗಿ, ಹಲವು 'ಕೊಳ್ಳುಬಾಕ' ಗ್ರಾಹಕರು ಮಾಲು ಕೊಂಡು, ಮುಂದೆ ಸಾಲ ತೀರಿಸಲಾಗದೇ ತಾವೂ ಪೇಚಿನಲ್ಲಿ ಬಿದ್ದು, ಬ್ಯಾಂಕ್‌ಗಳನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸುವ ಅಪಾಯವೂ ಇದೆ.

- ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!