ವಾಣಿಜ್ಯ

ಆಮೇಲಿನ್ನೇನು?

ಕಳೆದ ಎರಡು ದಶಕಗಳಿಂದ ನಾವು ದೇಶದ ಜನರ ಜೀವನ ಶೈಲಿಯಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮನಿಸುತ್ತಿದ್ದೇವೆ. ವಿಶೇಷವಾಗಿ ಉದ್ಯೋಗದಲ್ಲಿರುವವರಲ್ಲಿ ಖರೀದಿಸುವ ಶಕ್ತಿ ಹೆಚ್ಚುತ್ತಿದೆ. ಅದರೊಂದಿಗೆ ಖರ್ಚಿನ ವಿಚಾರವೂ ಹೆಚ್ಚಿದೆ.
ವೈದ್ಯಕೀಯ ರಂಗದಲ್ಲಿ ಆಗ ಸುಧಾರಣೆಗಳು ದೇಶದ ಜನರ ಜೀವಿಸುವ ಸಮಯ ಹೆಚ್ಚಿಸುವಲ್ಲಿ ನೆರವಾಗಿದೆ. ಕೆಲ ದಶಕಗಳ ಹಿಂದೆ ಸಂಬಳವನ್ನೇ ನೆಚ್ಚಿಕೊಂಡು ಜೀವಿಸುವ ವ್ಯಕ್ತಿ 60ನೇ ವರ್ಷಕ್ಕೆ ನಿವೃತ್ತಿಯಾಗುತ್ತಿದ್ದ. 67ನೇ ವರ್ಷಕ್ಕೆ ಕೊನೆಯುಸಿರೆಳೆಯುತ್ತಿದ್ದ. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಿವೃತ್ತಿ ನಂತರವೂ ವ್ಯಕ್ತಿಯೊಬ್ಬ 20-30 ವರ್ಷಗಳ ಕಾಲ ಆತ ಜೀವಿಸಲು ಸಾಧ್ಯವಿದೆ.

ಶೇ.7ರ ಹಣದುಬ್ಬರ ದರದಲ್ಲಿ ವ್ಯಕ್ತಿಯೊಬ್ಬ ಪ್ರತಿ ತಿಂಗಳು 25 ಸಾವಿರ ವೆಚ್ಚ ಮಾಡುತ್ತಾನೆ ಎಂದಾದರೆ, 25 ವರ್ಷಗಳ ಬಳಿಕ ಆ ಮೊತ್ತ 1,36,000ಕ್ಕೆ ಏರಿದಂತಾಗುತ್ತದೆ. ಅದಕ್ಕೆ ವೈದ್ಯಕೀಯ ವೆಚ್ಚವನ್ನು  ಹೆಚ್ಚುವರಿಯಾಗಿ ಸೇರಿಸಿಕೊಳ್ಳಬೇಕಾಗುತ್ತದೆ. 
ಸಣ್ಣ ಮತ್ತು ಅತಿ ಸಣ್ಣ ಕುಟುಂಬಗಳು ಹೆಚ್ಚುತ್ತಿರುವುದರಿಂದ ಆಯಾ ಕುಟುಂಬದಲ್ಲಿನ ಎಲ್ಲ ವಿಚಾರಗಳನ್ನು ಒಬ್ಬನೇ ನೋಡಿಕೊಳ್ಳಬೇಕಾಗುತ್ತದೆ. ಹೀಗಾಗಿಯೇ, ಆರೋಗ್ಯ ಮತ್ತಿತರ ಖರ್ಚುಗಳು ಸಹಜವಾಗಿಯೇ ಹೆಚ್ಚಾಗುತ್ತದೆ. ಇದರಿಂದಾಗಿ ಆರಂಭದಿಂದಲೇ ನಿವೃತ್ತಿಯ ಬಳಿಕದ ಜೀವನಕ್ಕೆ ಉಳಿತಾಯ ಮಾಡಲೇಬೇಕಾಗಿದೆ.

ಸಿದ್ಧತೆ ಯಾವಾಗಿನಿಂದ?
ಎಷ್ಟು ಶೀಘ್ರವೋ ಅಷ್ಟು ಶೀಘ್ರ. ಸಂಬಳವನ್ನೇ ಅವಲಂಬಿಸಿ ಬದುಕುವವರು ಆರಂಭದಿಂದಲೇ ಈ ಬಗ್ಗೆ ಚಿಂತಿಸಿದರೆ ಉತ್ತಮ. ಇದರಿಂದಾಗಿ ಉದ್ಯೋಗದಿಂದ ನಿವೃತ್ತಿ ಹೊಂದುವ ವೇಳೆ ಒಂದು ಗರಿಷ್ಠ ಮೊತ್ತ ನಮ್ಮಲ್ಲಿರುತ್ತದೆ. ಅದು ನಮ್ಮ ನಿವೃತ್ತಿ ಬಳಿಕದ ಜೀವನಕ್ಕೆ ನೆರವಾಗುತ್ತದೆ.

ಅದನ್ನು ನಾವು ಹೀಗೆ ವಿವರಿಸಬಹುದು:
ಇಲ್ಲಿ ಉಲ್ಲೇಖಿಸಿದ್ದು ಕೇವಲ ಉದಾಹರಣೆ ಮಾತ್ರ. ಈ ಮೊದಲೇ ಹೇಳಿದಂತೆ ಆರಂಭದಿಂದಲೇ ಉಳಿತಾಯಕ್ಕೆ ಯೋಜನೆ ರೂಪಿಸಿದಲ್ಲಿ ನಿವೃತ್ತಿಯಾಗುವ ವೇಳೆ ನಿರ್ದಿಷ್ಟ ಮೊತ್ತ ದೊರೆಯುತ್ತದೆ. ಮೇಲ್ಕಂಡ ಪಟ್ಟಿಯಲ್ಲಿ ವಿವರಿಸಿದಂತೆ ವಿಳಂಬವಾಗಿ ಉಳಿತಾಯಕ್ಕೆ ತೊಡಗಿದರೆ ಕೊಂಚ ಕಷ್ಟವಾಗಬಹುದು. ಆದರೆ ಶಿಸ್ತುಬದ್ಧವಾದ ಆರ್ಥಿಕ ಜೀವನ ರೂಢಿಸಿಕೊಂಡರೆ ಅಂಥ ಕಷ್ಟವೇನೂ ಆಗಲಾರದು.

ಯೋಜನೆ ಹೇಗೆ?
ಅದಕ್ಕೆ ಮೂರು ಸರಳ ಮಾರ್ಗಗಳಿವೆ.

ಮೊದಲ ಹಂತ: ನಿವೃತ್ತಿಯ ನಂತರದ ವೆಚ್ಚಗಳನ್ನು ಹೇಗೆ ಲೆಕ್ಕಾಚಾರ ಮಾಡುವ ಕ್ರಮ ಹೇಗೆ?
ಸದ್ಯ ವ್ಯಕ್ತಿಯೊಬ್ಬ ಆತನ ಕುಟುಂಬಕ್ಕಾಗಿ ವೆಚ್ಚ ಮಾಡುತ್ತಿರುವ ವೈದ್ಯಕೀಯ, ಪ್ರವಾಸ, ಕುಟುಂಬ ಸದಸ್ಯರಿಗೆ ಉಡುಗೊರೆ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನಿವೃತ್ತಿಯಾಗುವ ವೇಳೆ ಖರ್ಚು ವೆಚ್ಚಗಳಿಗೆ ಬೇಕಾಗುವ ಮೊತ್ತವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅದರ ಜತೆಗೆ ಬದಲಾಗಿರುವ ವೆಚ್ಚಗಳನ್ನೂ ಗಮನಿಸಬೇಕಾಗುತ್ತದೆ. ಸ್ವಂತ ಮನೆ ಇದ್ದರೆ ಬಾಡಿಗೆ ಕೊಡಬೇಕಾಗಿಲ್ಲ ಹಾಗೂ ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಭರಿಸಬೇಕಾಗಿಲ್ಲ.

ಎರಡನೇ ಹಂತ: ಯಾವ ರೀತಿಯ ಉಳಿತಾಯ ಯೋಜನೆ ಅನುಸರಿಸಬೇಕು?
ಖರ್ಚು ವೆಚ್ಚದ ಬಗ್ಗೆ ನಿಖರವಾದ ಮಾಹಿತಿ ಇರಬೇಕು. ಅದಕ್ಕೆ ಅನುಸಾರವಾಗಿ ನಮ್ಮ ವೆಚ್ಚ ಸರಿದೂಗಿಸಿಕೊಂಡು ಉಳಿತಾಯ ಮಾಡಬೇಕು.

ಮೂರನೇ ಹಂತ: ಎಷ್ಟು ಪ್ರಮಾಣದಲ್ಲಿ ಉಳಿತಾಯ ಮಾಡಬೇಕು?
ಆಯಾ ವ್ಯಕ್ತಿಯ ಹಣಕಾಸು ಪರಿಸ್ಥಿತಿಗೆ ಅನುಗುಣವಾಗಿ ಉಳಿತಾಯ ಮಾಡಬೇಕು. ಉದಾಹರಣೆಗೆ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ನಿವೃತ್ತಿಯ ಪ್ರತಿ ತಿಂಗಳು 50 ಸಾವಿರ ವೆಚ್ಚ ಬೇಕೆಂದು ಯೋಜನೆ ಹಾಕಿದ್ದರೆ ಆತ ಕೂಡಲೇ ಉಳಿತಾಯಕ್ಕೆ ಯೋಜನೆ ರೂಪಿಸಬೇಕು. ಈ ಮೊತ್ತ ಪಡೆಯಲು ಆತ ರು. 75 ಲಕ್ಷ ಕೂಡಿಡಬೇಕು. ಅದಕ್ಕಾಗಿ ಆತ ಪ್ರತಿ ತಿಂಗಳು ರು. 10 ಸಾವಿರವನ್ನು ಉಳಿತಾಯ ಮಾಡಲೇಬೇಕು.

ಹೇಗೆ ಆಯ್ಕೆ?

  •     ಪ್ರತಿ ಯೋಜನೆಯಲ್ಲಿರುವ ಅಂಶಗಳನ್ನು ವಿವರವಾಗಿ ಪರಿಶೀಲಿಸಿ
  •     ಹೆಚ್ಚು ವೆಚ್ಚದಾಯಕವಲ್ಲದ ಯೋಜನೆಗಳನ್ನು ಆಯ್ಕೆ ಮಾಡಿ
  •     ಹಣದುಬ್ಬರದ ಹೊರತಾಗಿಯೂ ಉತ್ತಮ ಲಾಭ ನೀಡುವ ಯೋಜನೆಗಳನ್ನು ಪರಿಗಣಿಸಿ
  •     ಮಾರುಕಟ್ಟೆಯ ಏರಿಳಿತಗಳಿಂದ ಹೂಡಿಕೆ ಮೊತ್ತ ರಕ್ಷಿಸಿಕೊಳ್ಳಬೇಕು
  •     ಉದ್ದೇಶಿತ ಮೊತ್ತ ಕೂಡಿಡಲು ವ್ಯವಸ್ಥಿತವಾಗಿ ಉಳಿತಾಯ ಮಾಡಬೇಕು. ಇದಕ್ಕಾಗಿ ಉತ್ತಮ ಹವ್ಯಾಸ ರೂಢಿಸಿಕೊಳ್ಳಿ
- ನೀರಜ್ ಶಾ,
ಐಸಿಐಸಿಐ ಪ್ರುಡೆನ್ಷಿಯಲ್ ಜೀವ ವಿಮೆ ಮುಖ್ಯಸ್ಥ ಮತ್ತು ಹಿರಿಯ ಉಪಾಧ್ಯಕ್ಷ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು