ವಾಣಿಜ್ಯ

ಕಮ್ಮಾರಿಕೆಯಲ್ಲಿ ತಂತ್ರಜ್ಞಾನ ಬಳಸಿದ ಸುರೇಶ್

ಜನಸಂಖ್ಯೆ ತುಂಬಿ ತುಳುಕುತ್ತಿದ್ದರೂ ಕೆಲವು ಶ್ರಮದಾಯಕ ಕೆಲಸಗಳಿಗೆ ಮಾನವ ಸಂಪನ್ಮೂಲ..

ಜನಸಂಖ್ಯೆ ತುಂಬಿ ತುಳುಕುತ್ತಿದ್ದರೂ ಕೆಲವು ಶ್ರಮದಾಯಕ ಕೆಲಸಗಳಿಗೆ ಮಾನವ ಸಂಪನ್ಮೂಲ ಲಭ್ಯವಾಗುತ್ತಿಲ್ಲ. ಈ ಕೊರತೆ ನೀಗಿಸಲು ಗ್ರಾಮೀಣ ಪ್ರತಿಭೆ ಸುರೇಶ್ ಕಮ್ಮಾರ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
ಕೃಷಿ ಪ್ರಧಾನವಾದ ಹಳ್ಳಿಗಳಲ್ಲಿ ಕಮ್ಮಾರಿಕೆ ಪ್ರಮುಖ ಕಸುಬು. ಈಗ ಕಮ್ಮಾರಿಕೆ ಮಾಡುವವರ ಸಂಖ್ಯೆ ವಿರಳವಾಗಿದೆ. ಏಕೆಂದರೆ, ಅದು ತುಂಬ ದೈಹಿಕ ಶ್ರಮ ಬೇಡುವ ಕೆಲಸ. ಕಬ್ಬಿಣ ಕಾಯಿಸುವುದು, ಕಾದ ಕಬ್ಬಿಣವನ್ನು ಬೇಕಾದ ಆಕಾರಕ್ಕೆ ತೀಡಲು ಸುತ್ತಿಗೆಯಿಂದ ಬಡಿಯಬೇಕಾಗುತ್ತದೆ. ಇದಕ್ಕೆ ಆಳುಗಳೇ ಸಿಗುವುದಿಲ್ಲ.
ಆದರೆ, ಲಕ್ಷ್ಮೇಶ್ವರ ಸಮೀಪದ ಶಿಗ್ಲಿ ಗ್ರಾಮದ ಯುವಕ ಸುರೇಶ್ ಕಮ್ಮಾರ, ತಮ್ಮ ಕುಲ ಕಸುಬಿಗೆ ಆಧುನಿಕತೆಯ ಸ್ಪರ್ಶ ನೀಡಿದ್ದಾರೆ. ಕಬ್ಬಿಣ ಕಾಯಿಸಲು, ಬಡಿಯಲು ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದಾರೆ. ಆಳುಗಳು ಸಿಗದೇ ಇರುವುದು ನನಗೆ ಲಾಭವೇ ಆಯಿತೆಂದು ಕಣ್ಣು ಮಿಟುಕಿಸುತ್ತಾರೆ!
ಕಬ್ಬಿಣದ ಆ್ಯಂಗ್ಲರ್ ಪಟ್ಟಿಗಳನ್ನು ಒಂದರ ಮೇಲೊಂದು ಜೋಡಿಸಿರುವ ಸುರೇಶ್, ಅದರ ಒಂದು ತುದಿಯಲ್ಲಿ ಭಾರವಾದ ಸುತ್ತಿಗೆಯನ್ನು ಕಟ್ಟಿದ್ದಾರೆ. ಇನ್ನೊಂದು ತುದಿಯಲ್ಲಿ ಇದಕ್ಕೆ ವಿದ್ಯುತ್ ಮೋಟರ್ ಅಳವಡಿಸಿದ್ದಾರೆ. ಮೋಟರ್ ಚಾಲೂ ಮಾಡಿ, ಕಬ್ಬಿಣ ಕಾಯಿಸಿ, ಈ ಸುತ್ತಿಗೆಯಿಂದ ಬಡಿದರೆ, ಬೇಕಾದ ಆಕಾರ, ಗಾತ್ರದ ಉಪಕರಣ ಸುಲಭವಾಗಿಯೇ ಸಿದ್ಧವಾಗುತ್ತದೆ.
ರಿಮೋಟ್ ಬಳಕೆ
ಮೋಟರ್‌ನ ವೇಗವನ್ನು ನಿಯಂತ್ರಿಸಲು ರಿಮೋಟ್‌ನಂತಹ ಸಾಧನ ಬಳಸುತ್ತಿದ್ದಾರೆ. ಕಬ್ಬಿಣವನ್ನು ಕಾಯಿಸಲು ತಿದಿ ಊದುವ ಅಗತ್ಯವಿಲ್ಲ. ಒಲೆಯಂತೆ ಇರುವ ಜಾಗೆಯಲ್ಲಿ ಕೊಳವೆ ಅಳವಡಿಸಿದ್ದಾರೆ. ವಿದ್ಯುತ್ ಚಾಲಿತ ಯಂತ್ರವೇ ಗಾಳಿ ಊದುತ್ತದೆ. ಕಮ್ಮಾರಿಕೆಯ ಕೆಲಸವೂ ಶ್ರಮದಾಯಕವಲ್ಲ ಎನ್ನುವಂತೆ ಸುರೇಶ್, ತಂತ್ರಜ್ಞಾನ ಬಳಸಿಕೊಂಡಿದ್ದಾರೆ. ಕೃಷಿ ಹಾಗೂ ದಿನಬಳಕೆಯ ಅನೇಕ ಉಪಕರಣಗಳನ್ನು ಸುರೇಶ್ ಕಮ್ಮಾರ ಹಾಗೂ ಅವರ ಸಹೋದರ ವಾಸು ಸೇರಿಕೊಂಡು, ತಯಾರಿಸುತ್ತ ಸೈ ಎನ್ನಿಸಿಕೊಂಡಿದ್ದಾರೆ.


ಕಾಲಕ್ಕೆ ತಕ್ಕ ಬದಲಾವಣೆ...
ಕಬ್ಬಿಣವನ್ನು ಬಡಿಯುವ ತ್ರಾಸದಾಯಕ ಕೆಲಸಗಳಿಗೆ ಎಷ್ಟೆ ಹಣ ಕೊಟ್ಟರೂ ಜನರು ಸಿಗಲ್ಲ. ಅದಕ್ಕಾಗಿ ಯಂತ್ರಗಳ ಮೊರೆ ಹೋಗಬೇಕಾಗಿದೆ. ಆಧುನಿಕ ಕಾಲದಲ್ಲಿ ನಮ್ಮನ್ನು ನಾವು ಬದಲಾಯಿಸಿಕೊಳ್ಳದಿದ್ದರೆ ಬೇರೆಯವರು ನಮ್ಮನ್ನು ಹಿಂದಿಕ್ಕಿ ಮುಂದಕ್ಕೆ ಹೋಗುತ್ತಾರೆ. ಬದುಕಿಗೆ ಬದಲಾವಣೆ ಅನಿವಾರ್ಯವಾಗಿದೆ.
- ಸುರೇಶ ಕಮ್ಮಾರ

- ಅಶೋಕ ಸೊರಟೂರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!