ವಾಣಿಜ್ಯ

ಸಕ್ಸಸ್ ಕ್ಲೇಮ್ ಸ್ಟೋರಿ

ವಿಮೆಗೆ ಸಂಬಂಧಿಸಿದಂತೆ ಕ್ಲೇಮುಗಳ ನಿರ್ವಹಣೆ ಅತ್ಯಂತ ಪ್ರಮುಖವಾದದ್ದು. ಬಜಾಜ್ ಅಲಯನ್ಸ್ ಲೈಫ್ ಇನ್ಷೂರೆನ್ಸ್ ...

ವಿಮೆಗೆ ಸಂಬಂಧಿಸಿದಂತೆ ಕ್ಲೇಮುಗಳ ನಿರ್ವಹಣೆ ಅತ್ಯಂತ ಪ್ರಮುಖವಾದದ್ದು. ಬಜಾಜ್ ಅಲಯನ್ಸ್ ಲೈಫ್ ಇನ್ಷೂರೆನ್ಸ್ ಈ ವಿಚಾರದಲ್ಲಿ ಮಹತ್ವದ ಸಾಧನೆ ಮಾಡಿದೆ. ಕ್ಲೇಮುಗಳ ನಿರ್ವಹಣೆಗಾಗಿ ವಿಶೇಷ ಆಸಕ್ತಿ ವಹಿಸಿದ್ದರಿಂದ ಶೇ.97.45ರಷ್ಟು ಸಾಧನೆ ಮಾಡಲಾಗಿದೆ. ಈ ಮೂಲಕ ಗ್ರಾಹಕರ ಹಿತಾಸಕ್ತಿಯೇ ಕಂಪನಿಯ ಆದ್ಯತೆ ಎಂದು ತೋರಿಸಿಕೊಟ್ಟಿದೆ. ಪ್ರಾಕೃತಿಕ ವಿಕೋಪಗಳ ಕ್ಲೇಮುಗಳಿಗೆ ಸಂಬಂಧಿಸಿದಂತೆ ಸರಳ ನಿಯಮಗಳನ್ನು ಅನುಸರಿಸಲಾಗಿದೆ.
2013-14ನೇ ಹಣಕಾಸು ವರ್ಷದಲ್ಲಿ ಬಜಾಜ್ ಅಲಯನ್ಸ್ ಲೈಫ್ ಇನ್ಷೂರೆನ್ಸ್ 1 ಲಕ್ಷಕ್ಕಿಂತ ಹೆಚ್ಚು ಕ್ಲೇಮುಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಈ ಮೂಲಕ ವಿಮೆ ಹೊಂದಿದವರಿಗೆ ರು. 651 ಕೋಟಿಯಷ್ಟು ಪರಿಹಾರವನ್ನೂ ನೀಡಿದೆ. ಇದರಲ್ಲಿ ವೈಯಕ್ತಿಕ ಮತ್ತು ಗುಂಪು ವಿಮೆಗಳೂ ಸೇರಿವೆ.
ವಾರಕ್ಕಿಂತ ಕಡಿಮೆ
ತ್ವರಿತವಾಗಿ ಕ್ಲೇಮುಗಳ ನಿರ್ವಹಣೆಯೇ ಈ ಸಾಧನೆಗೆ ಕಾರಣ. ವಾರಕ್ಕಿಂತ ಕಡಿಮೆ ಅವಧಿಯನ್ನು ಅವುಗಳ ನಿರ್ವಹಣೆಗೆ ತೆಗೆದುಕೊಳ್ಳಲಾಯಿತು. ಎಲೆಕ್ಟ್ರಾನಿಕ್ ಮೋಡ್ ಮೂಲಕ ಶೇ.77ರಷ್ಟು ಕ್ಲೇಮುಗಳಿಗೆ ಸಂಬಂಧಿಸಿದ ಹಣವನ್ನು ನೇರವಾಗಿ ವಿಮಾದಾರರ ಬ್ಯಾಂಕ್ ಖಾತೆಗೆ ಪಾವತಿಯಾಗುವಂತೆ ಮಾಡಲಾಗಿದೆ.
ಕ್ಲೇಮುಗಳ ನಿರ್ವಹಣೆಗಾಗಿ ಡಿಜಿಟಲ್ ತಂತ್ರಜ್ಞಾನ ಬಳಸಲಾಗಿದೆ. ಇಮೇಜ್ ಆಧಾರಿತ ದಾಖಲೀಕರಣ ಮಾಡಲಾಗಿದೆ. ವಿವಿಧ ಶಾಖೆಗಳಲ್ಲಿ ಇಂಥ ವ್ಯವಸ್ಥೆ ಜಾರಿಗೆ ತಂದಿದ್ದರಿಂದ ತ್ವರಿತವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು.
ಸರಳ ದಾಖಲೆಗಳು
ವಿಮೆ ಹೊಂದುವವರ ಅನುಕೂಲಕ್ಕಾಗಿ ಸರಳ ರೀತಿಯ ದಾಖಲೆಗಳನ್ನು ಒದಗಿಸುವ ವ್ಯವಸ್ಥೆ ಜಾರಿ ಮಾಡಿದ್ದು ತ್ವರಿತವಾಗಿ ವಿಮೆ ಹೊಂದಿ ಅದಕ್ಕೆ ಸಂಬಂಧಿಸಿದ ಕ್ಲೇಮುಗಳನ್ನು ಹೊಂದುವುದು ಸಾಧ್ಯವಾಗುವಂತಾಯಿತು. ಉತ್ತರಾಖಂಡ, ಹಿಮಾಚಲಪ್ರದೇಶದಲ್ಲಿನ ನೆರೆ ಪರಿಸ್ಥಿತಿಯಿಂದ ನೊಂದವರಿಗೆ ತ್ವರಿತವಾಗಿ ಪರಿಹಾರ ನೀಡಲಾಗಿದೆ. ಈ ಎರಡು ರಾಜ್ಯಗಳಲ್ಲಿ ಎಲ್ಲ ದಾಖಲೆಗಳು ಕಂಪನಿಯ ಕೈಸೇರಿದ ಎರಡು ದಿನಗಳಲ್ಲಿ ಪರಿಹಾರ ನೀಡಿದ್ದು ಒಂದು ದಾಖಲೆಯೇ ಸರಿ.
(ಲೇಖಕರು ಬಜಾಜ್ ಅಲಯನ್ಸ್ ಲೈಫ್ ಇನ್ಷೂರೆನ್ಸ್‌ನ ಕ್ಲೇಮುಗಳ ವಿಭಾಗದ ಮುಖ್ಯಸ್ಥರು)

ಪಿ. ರವಿ ಕುಟುಂಬ ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!