ವಾಣಿಜ್ಯ

ಎಚ್‌ಡಿಎಫ್‌ಸಿಗೆ ಶೇ.10 ಲಾಭ

ಅಡಮಾನ ಸಾಲ ನೀಡುವ ಖಾಸಗಿ ರಂಗದ ಬ್ಯಾಂಕು ಎಚ್‌ಡಿಎಫ್‌ಸಿ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.10ರಷ್ಟು ಅಂದರೆ 1,872.9 ಕೋಟಿ ರು. ಲಾಭ ಗಳಿಸಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬ್ಯಾಂಕು 1,707.1 ಕೋಟಿ ರು. ಲಾಭ ಗಳಿಸಿತ್ತು. 2013 ಜೂನ್‌ಗೆ ಹೋಲಿಸಿದಾಗ ಬ್ಯಾಂಕಿನ ಒಟ್ಟಾರೆ ಆದಾಯ 8,482.85 ಕೋಟಿ ರು.ನಿಂದ 10,056 ಕೋಟಿಗೆ ಹೆಚ್ಚಳವಾಗಿದೆ.

ಪೀಟರ್ ಇಂಗ್ಲೆಂಡ್ ಆಫರ್
ಪುರುಷರ ಸಿದ್ಧಉಡುಗೆಗಳ ಜನಪ್ರಿಯ ಬ್ರ್ಯಾಂಡ್ ಪೀಟರ್ ಇಂಗ್ಲೆಂಡ್ ತನ್ನ ಗ್ರಾಹಕರಿಗೆ '3 ಕೊಳ್ಳಿ, 2 ಉಚಿತ ಪಡೆಯಿರಿ' ಆಫರ್ ನೀಡಿದೆ. ಈ ಆಫರ್ ಬೆಂಗಳೂರಿನ ಪೀಟರ್ ಇಂಗ್ಲೆಂಡ್ ಮಳಿಗೆಗಳಲ್ಲಿ ಆಗಸ್ಟ್ 3ರವರೆಗೆ ಲಭ್ಯ.

ಹಿಮಾಲಯ ಫೇಸ್ ವಾಶ್
ಭಾರತದ ಹಿಮಾಲಯ ಹೆಲ್ತ್‌ಕೇರ್ ಸಂಸ್ಥೆಯು ಇದೀಗ ಪುರುಷರಿಗಾಗಿ ವಿಶೇಷವಾದ ಫೇಸ್ ಕ್ಲೀನಿಂಗ್ ಮತ್ತು ವಿವಿಧ ನಮೂನೆಯ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇನ್ಸ್‌ಟೆಂಟ್ ಆಯಿಲ್ ಕ್ಲಿಯರ್ ಲೆಮನ್ ಫೇಸ್‌ವಾಶ್ ಮತ್ತು ಪವರ್ ಗ್ಲೋ ಲೈಕೋರೈಸ್ ಫೇಸ್‌ವಾಶ್ ಮುಖದ ಕಾಂತಿ ದ್ವಿಗುಣಗೊಳಿಸಲಿವೆ. ಎಲ್ಲ ಪ್ರಮುಖ ಹಿಮಾಲಯ ಮಳಿಗೆಗಳಲ್ಲೂ ಲಭ್ಯವಿದೆ.

ಈವಾ ಲೈಟ್ ಫ್ಲಿಪ್‌ಫ್ಲಾಪ್
ಲಿಬರ್ಟಿಯು ಈವಾ ಲೈಟ್ ಶ್ರೇಣಿಯ ಫ್ಲಿಪ್‌ಫ್ಲಾಪ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಪುರುಷರಿಗೆ, ಮಹಿಳೆ ಮತ್ತು ಮಕ್ಕಳಿಗಾಗಿ ವಿವಿಧ ಬಣ್ಣಗಳಲ್ಲಿ ಲಭ್ಯವಿರುವ ಇವು ಬಹಳ ಹಗುರವಾಗಿವೆ. ಬೆಲೆ ರು. 299ರಿಂದ ಆರಂಭ.

ಪ್ರಿಕ್ಲಿ ಹೀಟ್ ಬೇಬಿ ಪೌಡರ್
ಹಿಮಾಲಯ ಹೆಲ್ತ್‌ಕೇರ್ ಸಂಸ್ಥೆಯು ಮಕ್ಕಳ ಮುಖದ ಕಾಂತಿ ಹೆಚ್ಚಿಸಲು ಪ್ರಿಕ್ಲಿ ಹೀಟ್ ಬೇಬಿ ಪೌಡರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೀಮ್ ಮತ್ತು ಖುಸ್‌ಖುಸ್ ಲೇಪಿತ ಪೌಡರ್ ಇದಾಗಿದ್ದು, ಚರ್ಮದ ಕೆರೆತ, ನವೆ, ಕೆಂಬಣ್ಣ ಸಮಸ್ಯೆಗಳನ್ನು ನಿವಾರಿಸುತ್ತದೆ. 50 ಗ್ರಾಂನ ಪ್ಯಾಕ್‌ಗೆ ರು. 40 ಮತ್ತು 100 ಗ್ರಾಂನ ಪ್ಯಾಕ್‌ಗೆ ರು. 70 ಇದ್ದು ಎಲ್ಲ ಪ್ರಮುಖ ಹಿಮಾಲಯ ಮಳಿಗೆಗಳಲ್ಲೂ ಲಭ್ಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ