ಮೈಕ್ರೋಸಾಫ್ಟ್ ಡಿವೈಸ್ ನೂತನ ಡ್ಯುಯಲ್ ಸ್ಮಾರ್ಟ್ಫೋನ್ ನೋಕಿಯಾ ಲೂಮಿಯಾ 530 ಮೊಬೈಲ್ ಫೋನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ದರ 7349 ರುಪಾಯಿ. ನೂತನ ಲೂಮಿಯಾ ಸ್ಮಾರ್ಚ್ಫೋನ್ ಬದಲಾಯಿಸಬಹುದಾದ ಕವರ್ ಶೆಲ್ಸ್ ಹೊಂದಿದ್ದು, ಕೇಸರಿ ಹಸಿರು, ಬೂದುಬಣ್ಣಗಳಲ್ಲಿ ಲಭ್ಯವಿದೆ.
ವಿಂಡೋಸ್ ಫೋನ್ 530 ಸ್ಮಾರ್ಟ್ 8.1 ಆಪರೇಟಿಂಗ್ ಸಿಸ್ಟಂ ಹಾಗೂ ಸ್ವೈಪ್ ನೋಟಿಫಿಕೇಶನ್ ಮತ್ತು ಫಾಸ್ಟ್ವರ್ಡ್ ಕೀ ಬೋರ್ಡ್ ಹೊಂದಿದೆ. ಸ್ಕೈಪ್ ಹಾಗೂ ಮೈಕ್ರೋಸಾಫ್ಟ್ನ ಪ್ರಿ ಲೋಡೆಡ್ ಅಪ್ಲಿಕೇಶನ್ ಪಡೆದುಕೊಳ್ಳಬಹುದು. 5 ಮೆಗಾ ಪಿಕ್ಸೆಲ್ ಕ್ಯಾಮೆರಾ, 4 ಜಿಬಿ ಆನ್ ಬೋರ್ಡ್ ಮೆಮೊರಿ, 128 ಜೆಬಿವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.