ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್‌ಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಇಂದು ರುಪಾಯಿ ಮೌಲ್ಯ ಡಾಲರ್ ಮುಂದೆ 5 ಪೈಸೆ ಕುಸಿತಕಂಡಿದೆ.
ವಿದೇಶಿ ಮಾರುಕಟ್ಟೆಯಲ್ಲಿ ಡಾಲರ್ ಮುಂದೆ ರುಪಾಯಿ 5 ಪೈಸೆ ಕುಸಿತ ಕಂಡುಕೊಂಡು ರು. 61.93ಗೆ ಇಳಿದಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್‌ಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರುಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ತಿಳಿದು ಬಂದಿದೆ. ಇಂದಿನ ವಹಿವಾಟು ಪ್ರಕಾರ ರುಪಾಯಿ ಮೌಲ್ಯ ಡಾಲರ್ ಮುಂದೆ 5 ಪೈಸೆ ಕಡಿಮೆಯಾಗಿದ್ದು, ರುಪಾಯಿ ಬೆಲೆ ರು. 61.93ಕ್ಕೆ ತಲುಪಿದೆ.
ವಿದೇಶದಲ್ಲಿ ಡಾಲರ್‌ಗೆ ಹೆಚ್ಚಿದ ಬೇಡಿಕೆ ಹಾಗೂ ದುರ್ಬಲ ಸ್ಥಳೀಯ ಷೇರುಗಳಿಂದಾಗಿ ರುಪಾಯಿ ಮೇಲೆ ಒತ್ತಡ ಹೆಚ್ಚಿದೆ ಎಂದು ಮಧ್ಯವರ್ತಿಗಳು ತಿಳಿಸಿದ್ದಾರೆ.