ನವದೆಹಲಿ: ವಾರದ ಆರಂಭಿಕ ದಿನದಲ್ಲೇ ರುಪಾಯಿ ಮೌಲ್ಯ ಡಾಲರ್ ಎದುರು ಕುಸಿತ ಕಂಡಿದೆ.
ವಿದೇಶಿ ಮಾರುಕಟ್ಟೆಯಲ್ಲಿ ಡಾಲರ್ ಮುಂದೆ ರುಪಾಯಿ 15 ಪೈಸೆ ಕುಸಿತ ಕಂಡುಕೊಂಡು ರು. 61.92ಗೆ ಇಳಿದಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್‌ಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರುಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ತಿಳಿದು ಬಂದಿದೆ. ಇಂದಿನ ವಹಿವಾಟು ಪ್ರಕರಾ ರುಪಾಯಿ ಮೌಲ್ಯ ಡಾಲರ್ ಮುಂದೆ 15 ಪೈಸೆ ಕಡಿಮೆಯಾಗಿದ್ದು, ರುಪಾಯಿ ಬೆಲೆ ರು. 61.92ಕ್ಕೆ ತಲುಪಿದೆ.
ವಿದೇಶದಲ್ಲಿ ಡಾಲರ್‌ಗೆ ಹೆಚ್ಚಿದ ಬೇಡಿಕೆ ಹಾಗೂ ದುರ್ಬಲ ಸ್ಥಳೀಯ ಷೇರುಗಳಿಂದಾಗಿ ರುಪಾಯಿ ಮೇಲೆ ಒತ್ತಡ ಹೆಚ್ಚಿದೆ ಎಂದು ಮಧ್ಯವರ್ತಿಗಳು ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ರುಪಾಯಿ ಮೌಲ್ಯ ಡಾಲರ್ ಮುಂದೆ ಏರಳಿತ ಬೆಲೆಯನ್ನು ಕಾಣುತ್ತಿದೆ. ವಾರದ ಆರಂಭಿಕ ದಿನದಲ್ಲಿ ರುಪಾಯಿ ಡಾಲರ್ ಮುಂದೆ ಕುಸಿದಿದ್ದು, ಮಾರುಕಟ್ಟೆಯ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಹೇಳಾಲಾಗುತ್ತಿದೆ.