ವಿದೇಶಗಳಿಗೂ ಬ್ರ್ಯಾಂಡ್ ನೇಪಾಳ, ಶ್ರೀಲಂಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಾರುತಿ ಕಾರು ಬ್ರ್ಯಾಂಡ್ ಆಗಿ ಹೋಗಿದೆ.
ಒಂದೇ ಒಂದು ಸಣ್ಣ ಕಾರು ದೇಶವನ್ನೇ ಆಳಲು ಸಾಧ್ಯ ಉಂಟೇ? ಸಾಧ್ಯ ಎಂದು ತೋರಿಸಿದ್ದು ಮತ್ತು ಉದ್ದಿಮೆ ಕ್ಷೇತ್ರವನ್ನೇ ಬದಲಿಸಿ ತೋರಿಸಿದ್ದು ಮಾರುತಿ 800. ಬರೋಬ್ಬರಿ ಮೂರು ದಶಕ ಕಾಲ ಸಣ್ಣ ಕಾರುಗಳ ರಾಜನಂತಿದ್ದ ಮಾರುತಿ ಕಾರು ಈಗ ಉತ್ಪಾದನೆ ನಿಲ್ಲಿಸಿದೆ. 2010ರ ಏಪ್ರಿಲ್‌ನಿಂದ ದೇಶದ 13 ನಗರಗಳಲ್ಲಿ ಮಾರುತಿ 800 ಕಾರಿನ ಮಾರಾಟವನ್ನು ನಿಲ್ಲಿಸಲು ಮಾರುತಿ-ಸುಜುಕಿ ನಿರ್ಧರಿಸಿತ್ತು.
ಅದೆಲ್ಲದಕ್ಕಿಂತ ಹೆಚ್ಚಾಗಿ 1980 ಡಿಸೆಂಬರ್‌ನಿಂದ 2014 ಫೆ.7ರ ವರೆಗೆ ಈ ಅವಧಿಯಲ್ಲಿ 'ಮಾರುತಿ 800' ಎಂಬ ಶಬ್ದ ದೇಶದ ಕಾರು ಉತ್ಪಾದನಾ ಕ್ಷೇತ್ರದಲ್ಲಿ ಮಾಡಿದ್ದ ಮ್ಯಾಜಿಕ್ ಮತ್ತು ಕ್ರಾಂತಿ ಅದು ನಿಜಕ್ಕೂ ಅದ್ಭುತವಾದದ್ದು. ಲಕ್ಷಾಂತರ ಮನೆ ಮತ್ತು ಮನಗಳನ್ನು ಬೆಳಗಿದ್ದು ಅದರ ಸಾಧನೆ.
ಹಿನ್ನೋಟ
ಹಾಗಿದ್ದರೆ ಲಕ್ಷಾಂತರ ಕುಟುಂಬಗಳ ಜತೆ ಹಾಸುಹೊಕ್ಕಾಗಿರುವ ಈ ಕಾರಿನ ಇತಿಹಾಸದ ಬಗ್ಗೆ ಕೊಂಚ ಗಮನ ಹರಿಸೋಣ. ಇದು ದೇಶದ ಮೊದಲ ತಲೆಮಾರಿನ ಕಾರು (ಫಸ್ಟ್ ಜನರೇಶನ್ ಕಾರ್) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಧ್ಯಮ ವರ್ಗಕ್ಕಾಗಿಯೇ ಕಾರು ಬೇಕೆಂಬ ಕನಸು ಹೊತ್ತದ್ದು ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ. ಇದಕ್ಕಾಗಿಯೇ ಪುತ್ರ ದಿ.ಸಂಜಯ ಗಾಂಧಿ ನೇತೃತ್ವದಲ್ಲಿ 'ಮಾರುತಿ ಉದ್ಯೋಗ್' ಎಂಬ ಸಂಸ್ಥೆ ಆರಂಭಿಸಲಾಯಿತು. ನಂತರ ಇದು ತೀವ್ರ ವಿವಾದಕ್ಕೆ ಗುರಿಯಾದದ್ದು ಬೇರೆ ವಿಚಾರ. ಸಂಜಯ ಗಾಂಧಿ ವೋಕ್ಸ್‌ವ್ಯಾಗನ್ ಜತೆ ತಾಂತ್ರಿಕ ಸಹಭಾಗಿತ್ವ ಬಯಸಿದ್ದರು. ಜತೆಗೆ ಜಪಾನ್‌ನ ಸುಜುಕಿ ಜತೆಗೆ ಕೂಡ ತಾಂತ್ರಿಕ ಸಹಭಾಗಿತ್ವ ಕೋರಲಾಗಿತ್ತು. ಭಾರತ ಸರ್ಕಾರದ ಗುತ್ತಿಗೆ ಗೆದ್ದೇ ಗೆಲ್ಲಬೇಕೆಂದಿದ್ದ ಸುಜುಕಿ ಹಲವು ರೀತಿಯಲ್ಲಿ ಲಾಬಿ ನಡೆಸಿತ್ತು. ಅಂತಿಮವಾಗಿ ಸುಜುಕಿ 'ದೇಶದ ಜನರಿಗಾಗಿನ ಕನಸಿನ ಕಾರಿ'ನ ಮಾದರಿಯನ್ನು ಸಿದ್ಧಗೊಳಿಸಿ ಕೊಟ್ಟಿತು. ಸಂಜಯ ಗಾಂಧಿ ಅವಧಿಯಲ್ಲಿ ಮಾರುತಿ ಉದ್ಯೋಗ್ ಯಾವುದೇ ಕಾರುಗಳನ್ನು ಉತ್ಪಾದಿಸಿರಲಿಲ್ಲ ಎನ್ನುವುದು ಗಮನಾರ್ಹ ವಿಚಾರ.
ನನಸಾಯಿತು
ಮೊದಲ ಮಾರುತಿ ಕಾರು ಉತ್ಪಾದನೆಯಾಗಿ ಗ್ರಾಹಕರಿಗೆ ಬಿಡುಗಡೆಯಾದದ್ದು 1980 ಡಿಸೆಂಬರ್‌ನಲ್ಲಿ. ಅಂದು ಅದರ ಬೆಲೆ 50 ಸಾವಿರ.
ಖಾಸಗಿ ಅಲ್ಲ ಸರ್ಕಾರಿ ಕಂಪನಿ
ಆರಂಭದಲ್ಲಿ ಖಾಸಗಿ ಕಂಪನಿಯಾಗಿದ್ದ ಮಾರುತಿ ಉದ್ಯೋಗ್ 1981ರಲ್ಲಿ ಸರ್ಕಾರಿ ಕಂಪನಿಯಾಗಿ ಪರಿವರ್ತನೆಗೊಂಡಿತು. ಮಾತ್ರವಲ್ಲದೆ ಜಪಾನ್ ಮೂಲದ ಸುಜುಕಿಗೆ ಮಾರುತಿ ಉದ್ಯೋಗ್‌ನಲ್ಲಿಯ ಷೇರು ಖರೀದಿಗೆ ಇಂದಿರಾ ಗಾಂಧಿ ಹಸಿರು ನಿಶಾನೆ ತೋರಿದರು. ಇದು ದೇಶದಲ್ಲಿ ಕಾರು ಉತ್ಪಾದನೆಯ ಗತಿಯನ್ನೇ ಬದಲಿಸಿತು. ಏಕೆಂದರೆ ಆಗ ದೇಶದ ರಸ್ತೆಯನ್ನು ಆಳುತ್ತಿದ್ದದ್ದೇ ಹಿಂದುಸ್ಥಾನ್ ಮೋಟರ್ಸ್ ಕಂಪನಿಯ ಅಂಬಾಸಿಡರ್ ಮತ್ತು ಪ್ರೀಮಿಯರ್ ಪದ್ಮಿನಿ ಕಾರುಗಳು. ಹೊಸ ಕಂಪನಿ ಕಾರುಗಳಿಗೆ ಜನರು ಬುಕಿಂಗ್ ಮಾಡಲು ಶುರು ಮಾಡಿದರು.
ಮೂಲೆ ಮೂಲೆಗಳಲ್ಲಿ ಮಾರುತಿ
ವರ್ಷಗಳು ಕಳೆದಂತೆ ಮಾರುತಿ ಕಾರಿನ ಜನಪ್ರಿಯತೆ ಬೆಳೆಯಲಾರಂಭಿಸಿತು. ಇದಾದ ನಂತರ ಹತ್ತು ವರ್ಷಗಳಲ್ಲಿ ಮಾರುತಿ ಬೆಳೆದದ್ದೇ ಬೆಳೆದದ್ದು. 1990ರ ದಶಕದಲ್ಲಿ ದಿ.ಪಿ.ವಿ.ನರಸಿಂಹ ರಾವ್ ಸರ್ಕಾರ ಹಣಕಾಸು ಕ್ಷೇತ್ರವನ್ನು ವಿಶ್ವಕ್ಕೆ ತೆರೆದಿಟ್ಟದ್ದು ಮಾರುತಿ ಉದ್ಯೋಗ್‌ಗೆ ಅನುಕೂಲವಾಗಿ ಪರಿಣಮಿಸಿತು. ಆರಂಭದಲ್ಲಿದ್ದ ಮಾಡೆಲ್‌ನ ಹೆಸರು 'ಮಾರುತಿ 800 ಡಿಎಕ್ಸ್' .
ಸಣ್ಣಪುಟ್ಟ ಬದಲು
ಅಂತೂ-ಇಂತೂ ವಿವಾದದಲ್ಲೇ ಆರಂಭಗೊಂಡಿದ್ದ 'ಮಾರುತಿ ಉದ್ಯೋಗ್' ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ಸು ಕಂಡಿತು. ಅದೇ ರೀತಿ ಕಾರಿನಲ್ಲಿ ತಾಂತ್ರಿಕವಾಗಿ ಬದಲಾವಣೆಯನ್ನೂ ಮಾಡಿಕೊಳ್ಳಲು ಆರಂಭಿಸಿತು. ಅದಕ್ಕೆ ಪೂರಕವಾಗಿ 1986ರಲ್ಲಿ ಎರಡನೇ ತಲೆಮಾರಿನ ಕಾರಿನ ಮಾದರಿಯನ್ನು ಮಾರುತಿ ಬಿಡುಗಡೆ ಮಾಡಿತು.
2005ರಲ್ಲಿ ದೇಶದ ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ಯೂರೋ 3ನೇ ಆವೃತ್ತಿ (ಮಾಲಿನ್ಯ ತಡೆ ಪದ್ಧತಿ), 2008ರಲ್ಲಿ ಎಲ್‌ಪಿಜಿಯಿಂದ ಓಡುವ ಮಾದರಿ ಬಿಡುಗಡೆಗೊಳಿಸಿತು. 2009ರಲ್ಲಿ ಯೂರೋ4 ನೇ ಮಾದರಿ ಕಾರನ್ನೂ ಬಿಡುಗಡೆ ಮಾಡಿತು. ಇದೇ ಸಮಯಕ್ಕಾಗಲೇ 'ಮಾರುತಿ800' ಹಂತ ಹಂತವಾಗಿ ಮಾರುಕಟ್ಟೆಯಿಂದ ಹಿಂಪಡೆಯುವ ಯೋಜನೆಗಳಿದ್ದವು. ಮಾರುತಿ-ಸುಜುಕಿ ಇನ್ನು ಯಾವುದೇ ಕಾರುಗಳನ್ನು ಮಾರುಕಟ್ಟೆಗೆ ಬಿಡಲಿ, ಆದರೆ ಮಾರುತಿ800 ಮಾತ್ರ ದೇಶದ ವಾಹನೋದ್ದಿಮೆಯಲ್ಲಿ ದಾಖಲೆಯನ್ನು ಮಾಡಿದ್ದಂತೂ ಸತ್ಯ.
ಅಂಕಿಅಂಶ ಮಾಹಿತಿ: ಮಾರುತಿ-ಸುಜುಕಿ
ಸುಜುಕಿ ಪಾಲೆಷ್ಟು?
ಆರಂಭದಲ್ಲಿ ಶೇ.26ರಷ್ಟಿದ್ದ ಜಪಾನ್ ಮೂಲದ ಸುಜುಕಿ ಕಂಪನಿಯ ಪಾಲು ಈಗ ಶೇ.56ಕ್ಕೆ ಏರಿಕೆಯಾಗಿದೆ. ಆದರೆ ಮುಂದಿನ 9-10 ವರ್ಷಗಳ ವರೆಗೆ ಮಾರುತಿ 800 ಕಾರಿಗೆ ಸಂಬಂಧಿಸಿದ ಬಿಡಿಭಾಗಗಳು ಯಾವುದೇ ರೀತಿಯಲ್ಲಿ ತೊಂದರೆ ಇರದಂತೆ ಸಿಗಲಿವೆ. ಮೂರು ದಶಕದ ಹಿಂದೆ ಇಂದಿರಾ ಗಾಂಧಿಯವರು 'ದೇಶದ ಮಧ್ಯಮ ವರ್ಗಕ್ಕೆ' ಕಾರು ಸಿಗುವಂತಾಗಬೇಕು ಎಂಬ ಧ್ಯೇಯವನ್ನೇ ಸದ್ಯ ಎಲ್ಲ ಬಹುರಾಷ್ಟ್ರೀಯ ಕಾರು ಕಂಪನಿಗಳು ಅನುಸರಿಸುತ್ತಿವೆ. ಅದಕ್ಕೆ ಪೂರಕವಾಗಿ ಎಲ್ಲ ಕಾರು ಕಂಪನಿಗಳೂ ಸಣ್ಣ ಕಾರುಗಳ ತಯಾರಿಕೆಯತ್ತ ಮನಸ್ಸು ಮಾಡುತ್ತಿವೆ. ಹಲವು ಹಿನ್ನಡೆಗಳನ್ನು ಕಂಪನಿ ಕಂಡಿದ್ದರೂ ಮಾರುತಿ-ಸುಜುಕಿ ಈಗಲೂ ದೇಶದಲ್ಲಿ ನಂ 1 ಕಾರ್ ಮೇಕರ್.
ಕಾರಿನ ಆರಂಭದ ಬೆಲೆ- 50,000
ಈಗಿನ ಬೆಲೆ 2, 51, 390 (ನಾನ್-ಮೆಟಾಲಿಕ್)
ರು. 2, 54, 829 (ಮೆಟಾಲಿಕ್(ಬೆಂಗಳೂರು)
369.34 ಬಿಲಿಯನ್ ಆದಾಯ (2012)
16.81
ಬಿಲಿಯನ್ ನಿವ್ವಳ ಆದಾಯ (2012)
= ಮಾರುತಿ ಜಿಪ್ಸಿ- 1985 ಡಿಸೆಂಬರ್, ಮಾರುತಿ1000- 1990 (ಇದು ದೇಶದ ಮೊದಲ ಲಕ್ಸುರಿ ಕಾರು ಎಂಬ ಹೆಗ್ಗಳಿಕೆ)
= ಮಾರುತಿ ಜೆನ್- 1993
= ಮಾರುತಿ ಎಸ್ಟೀಮ್-1994
= ದೇಶದ ಮೊದಲ 24 ಗಂಟೆಗಳ ರಸ್ತೆಯಲ್ಲೇ ದುರಸ್ತಿ ಕಾರ್ಯಾಗಾರ ಶುರು- 1996 ಮೇ
= ದೇಶದ ಮೊದಲ ಗ್ರಾಹಕ ಸೇವಾ ಕೇಂದ್ರ ಆರಂಭ- 2000
= ಮೊದಲ 'ಟ್ರು ವ್ಯಾಲ್ಯೂ' ಕೇಂದ್ರಗಳು- ಬೆಂಗಳೂರು ಮತ್ತು ನವದೆಹಲಿ- 2001
= ಮಾರುತಿ ಸ್ವಿಫ್ಟ್-2005
= ಮಾರುತಿ-ಸುಜುಕಿ ಎಂದು ಬದಲಾವಣೆ ಆದ ವರ್ಷ-2007
= 25ನೇ ವರ್ಷದ ಸಂಭ್ರಮ- 2008 ಡಿ.14
= ಈಗಿನ ಕಾರುಗಳು: ಆಲ್ಟೋ800, ವ್ಯಾಗನ್‌ಆರ್, ರಿಟ್ಜ್, ಸ್ವಿಫ್ಟ್, ಸ್ಟಿಂಗ್ರಿ, ಡಿಸಾಯರ್, ಎಸ್4, ಓಮ್ನಿ, ಎರ್ಟಿಗಾ, ಈಕೋ, ಗ್ರಾಂಡ್ ವಿಟಾರ,
= ಉತ್ಪಾದನಾ ಘಟಕ- ಮಾನೆಸರ್ ಮತ್ತು ಗುರ್‌ಗಾಂವ್
= 1.9 ಮಿಲಿಯನ್ ಕಳೆದ ಹಣಕಾಸು ವರ್ಷದಲ್ಲಿ ಮಾರಾಟವಾದ ಕಾರುಗಳು (ಮಾರುತಿ-ಸುಜುಕಿ ಕಂಪನಿಯ ಎಲ್ಲ ರೀತಿ ಕಾರುಗಳು)
ಜಾಣ್ಮೆಯಿಂದ ಹೂಡಿದರೆ ಅಧಿಕ ಲಾಭ
ಮಧ್ಯಮ ವರ್ಗದ ಜನರ ಕಾರಿನ ಕನಸು ನನಸಾಗಿದ ಮಾರುತಿ 800 ಉತ್ಪಾದನೆ ನಿಂತಿದೆ. ಮೂರು ದಶಕದಲ್ಲಿ ಸಣ್ಣ ಕಾರು ಮಾಡಿದ ಕ್ರಾಂತಿ ಮಾತ್ರ ಸಣ್ಣದಲ್ಲ.
ಮಾರಾಟ ಮಾಡುವುದೇ ಇಲ್ಲ
ಬಾಂಧವ್ಯ ಎಂದರೆ ಅಂಥದ್ದು. ನಮ್ಮ ದೇಶದ ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ಮಾರುತಿ 800 ಮತ್ತು ಇತರ ವಾಹನಗಳ ವಿನ್ಯಾಸ ಮಾಡಲಾಗಿದೆ. ಮತ್ತು ಅದರ ಇಂಧನ ಕ್ಷಮತೆ ಕೂಡ ವಾಹನ ಪ್ರಿಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ, ಒಮ್ಮೆ ಮಾರುತಿ ಕೊಂಡುಕೊಂಡವರು ಅದನ್ನು ಮಾರಾಟ ಮಾಡುವುದೇ ಇಲ್ಲ. ಅದನ್ನು ಇರಿಸಿಕೊಂಡೇ ಮತ್ತೊಂದು ಹೊಸ ಕಾರು ಕೊಂಡವರೇ ಅಧಿಕ.
= ಸದಾಶಿವ ಕೆ.
ಝಞಛಟಿಜ್ಝ್ಜಜ29ಅ್ಜಟಛ್ಝಟ.್ಛ್ಟಟ