ವಾಣಿಜ್ಯ

ಆನ್‌ಲೈನ್‌ನಲ್ಲಿ ಅಗ್ಗದ ವಿಮೆ

ಮೊದಲ ಬಾರಿಗೆ ನಿಜವಾದ ಆನ್‌ಲೈನ್ ವಿಮೆ ಪ್ರಾರಂಭಿಸಿದ ಸಂಸ್ಥೆಯಾದ ಉದ್ಯೋಗಿಯಾಗಿದ್ದ ನಾನು ಮನೆಯಿಂದ ಕೆಲವು ಪ್ರಶ್ನೆಗಳನ್ನು ಎದುರಿಸಿದ್ದೆ. ಸ್ನೇಹಿತರಿಂದಲೂ ಆನ್‌ಲೈನ್ ವಿಮಾ ಯೋಜನೆಯ ಕುರಿತಾಗಿ ತಮ್ಮ ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಇದು ಸಾಧ್ಯವಾ? ಏನು ಗ್ಯಾರಂಟಿ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು. ಅಂತರ್ಜಾಲ ವಿಮೆ ಪಾಲಿಸಿ ಪ್ರಾರಂಭಿಸಿದಕ್ಕೆ ಬೆನ್ನು ತಟ್ಟುತ್ತಾರೆ ಎಂದುಕೊಂಡಿದ್ದ ನಾನು ಭ್ರಮ ನಿರಸನಗೊಂಡಿದ್ದೆ. ಅದರ ಬಗ್ಗೆ ಅಂಥ ಅನುಮಾನ, ಪ್ರಶ್ನೆಗಳನ್ನು ವ್ಯಕ್ತಪಡಿಸುತ್ತಾರೆ ಎಂಬ ಅರಿವೇ ಇರಲಿಲ್ಲ. ಅಷ್ಟು ಸುಲಭದಲ್ಲಿ ಆನ್‌ಲೈನ್ ವಿಮಾ ಸೇವೆಯನ್ನು ಒಪ್ಪಿಕೊಳ್ಳಲು ಗ್ರಾಹಕರಿಗೆ ನಿರ್ದಿಷ್ಟ ಸಮಯ, ವಿಮಾ ಫಲಾನುಭವಿಯ ಉದಾಹರಣೆ ಮುಖ್ಯವಾಗಿ ಬೇಕಿತ್ತು. ಗ್ರಾಹಕರಿಗೆ ಆನ್‌ಲೈನ್ ವಿಮೆಯಿಂದ ಅನುಕೂಲ ಪಡೆದ ಒಂದಷ್ಟು ಪ್ರಸಂಗದ ಉದಾಹರಣೆಗಳ ಅಗತ್ಯವಿತ್ತು. ನಂತರದ ದಿನಗಳಲ್ಲಿ ಆನ್‌ಲೈನ್ ವಿಮೆ ಸುಲಭ ಮತ್ತು  ಅನುಕೂಲಕರವಾಗಿದೆ ಎಂಬ ಅರಿವು ಹೆಚ್ಚಾಗದಂತೆ ಗ್ರಾಹಕರ ಸಂಖ್ಯೆ ಹೆಚ್ಚುತ್ತಾ ಹೋಯಿತು.
ಆನ್‌ಲೈನ್ ವಿಮೆಗಿಂತ ದೊಡ್ಡ ಸೇವಾ ಯೋಜನೆ ಮತ್ತೊಂದಿಲ್ಲ. ಪ್ರತಿಯೊಬ್ಬ ವಿಮಾದಾರನಿಗೂ ಮೂಲಭೂತ ಜವಾಬ್ದಾರಿ ವಿಮಾ ಪಾವತಿಯಲ್ಲಿರಬೇಕು. ಯಾವ ಕಂಪನಿಯೂ ಹಂತ ಹಂತವಾಗಿ ಯೋಜಿತ ವಿಮೆಯನ್ನು ಪಾವತಿಸದಿದ್ದರೆ ಅದರ ಜವಾಬ್ದಾರಿಯನ್ನು ಹೊರಲು ತಯಾರಿರುವುದಿಲ್ಲ. ಅದರಿಂದ ಮೊದಲಿಗೆ ಕಟ್ಟಿದ ಕೆಲವು ಕಂತುಗಳು ವಿಮಾದಾರರ ಕೈ ಸೇರದೆ ಇರಬಹುದು. ಪ್ರತಿ ಕಂತುಗಳನ್ನು ಜವಾಬ್ದಾರಿಯುತವಾಗಿ ಪಾವತಿ ಮಾಡುವುದು ಅಗತ್ಯ. ವಿಮೆ ಎಂಬುದೊಂದು ದೀರ್ಘಾವಧಿಯ ಯೋಜನೆ. ಇಲ್ಲಿ ವ್ಯವಹಾರ ಮಾಡಲು ತಾಳ್ಮೆ ಮತ್ತು ನಂಬಿಕೆ ಅತ್ಯಗತ್ಯ. ತಾಳ್ಮೆ ಮತ್ತು ನಂಬಿಕೆಯನ್ನು ಕೊನೆಯ ಕಂತಿನವರೆಗೆ ಉಳಿಸಿಕೊಂಡು ಹೋದರೆ ಪೂರಕವಾದ ಫಲ ಸಿಗುತ್ತದೆ.
ಆನ್‌ಲೈನ್ ವಿಮಾ ಯೋಜನೆಯು ಸಾಮಾನ್ಯ ವಿಮಾ ಯೋಜನೆಗಿಂತ ಅಗ್ಗದಲ್ಲಿ ಕೈಗೆಟುತ್ತದೆ ಎಂದು ಸಿಂಪಲ್ ಆಗಿ ಹೇಳಬಹುದು. ಅದು ಹೇಗೆ? ಎಂಬ ಪ್ರಶ್ನೆ ಕೇಳದೆ ಇರುತ್ತೀರಾ? ಅದಕ್ಕೆ ಇಲ್ಲಿದೆ ಉತ್ತರ.
=     ಹಣಕಾಸಿನ ವ್ಯವಹಾರದಲ್ಲಿ ಉಳಿತಾಯವಾಗುತ್ತದೆ. ಯಾವ ಮಧ್ಯವರ್ತಿಗೂ ಕಮಿಷನ್ ಕೊಡಬೇಕಾಗಿಲ್ಲ.
=     ಹೆಚ್ಚಿನ ವಿಮಾ ಪ್ರಕ್ರಿಯೆ ಆನ್‌ಲೈನ್‌ನಲ್ಲೇ ಜರುಗುತ್ತದೆ. ಪೇಪರ್ ಕಡಿಮೆ ಬಳಕೆಗೆ ಬರುತ್ತದೆ. ಅರ್ಜಿಗಳಿಗಾಗಿ ಪ್ರತ್ಯೇಕ ಹಣ ನೀಡಬೇಕಾಗಿಲ್ಲ.  ಅರ್ಜಿ ತುಂಬಿಸುತ್ತಾ ಕೂರುವ ಅಗತ್ಯವೂ ಇರುವುದಿಲ್ಲ.
=     ಪ್ರೊಫೈಲ್ ಆನ್‌ಲೈನ್‌ನಲ್ಲೇ ಇರುವುದರಿಂದ ದೀರ್ಘವಾಗಿ ಲಭ್ಯವಿರುತ್ತದೆ. ಕಳೆದು ಹೊಗುವ, ಹರಿದು ಹೋಗುವ ಯಾವ ಅಪಾಯವೂ ಇರುವುದಿಲ್ಲ. ತರ್ಕಬದ್ಧವಾಗಿ ತಮ್ಮ ವ್ಯವಹಾರದ ಫಲಿತಾಂಶವನ್ನು ಯಾರ ಸಹಾಯವೂ ಇಲ್ಲದೆ ಕಂಡುಕೊಳ್ಳಬಹುದು.
ಇದೆಲ್ಲದರ ಉತ್ತರವಾಗಿ ಆಫ್‌ಲೈನ್ ವಿಮೆಗಿಂತ ಆನ್‌ಲೈನ್ ವಿಮೆ ಅತ್ಯಂತ ಅಗ್ಗ ಮತ್ತು ಸುಲಭ ಎಂದೆನಿಸುತ್ತದೆ. ಆನ್‌ಲೈನ್ ವಿಮೆ ಹೆಸರಿನಲ್ಲಿ ವ್ಯವಹರಿಸುತ್ತಿರುವ ಯೋಜನೆ ಬಹಳಷ್ಟು ಪರಿಣಾಮಕಾರಿಯಾಗಿ ಬಳಕೆಗೆ ಬರುತ್ತಿದೆ. ಇದರಿಂದ ದಿನದಲ್ಲಿ ಸಾವಿರಾರು ಮಂದಿಯ ಹಣಕಾಸಿನ ಭದ್ರತೆ ನೀಡುವಲ್ಲಿ ಯಶಸ್ವಿಯಾಗುತ್ತಿದೆ. ಗ್ರಾಹಕರ ನಂಬಿಕಾರ್ಹವಾಗಿ ಕೆಲಸ ನಿರ್ವಹಿಸುತ್ತಿದೆ. ಆನ್‌ಲೈನ್ ವಿಮೆ ಮಾಡಿಸೋದು ಅಷ್ಟು ಕಷ್ಟ ಕೆಲಸ ಎಂದುಕೊಳ್ಳಬೇಡಿ. ಅತ್ಯಂತ ಸಿಂಪಲ್. ಮೊದಲಿಗೆ ನಿಮಗೆ ಸಮರ್ಪಕ ಎನಿಸುವ ಯೋಜನೆಯನ್ನು ಆರಿಸಿಕೊಳ್ಳಿ. ಇದರಲ್ಲಿ ಒಂದು ಕಂತಿನಲ್ಲಿ ಎಷ್ಟು ಕಟ್ಟಬಹುದು, ಎಷ್ಟನ್ನು ಗಿಟ್ಟಿಸಬಹುದು ಎಂಬ ಆಲೋಚನೆ ಇರಲಿ. ನಂತರ ಆನ್‌ಲೈನ್‌ನಲ್ಲಿ ಕೇಳಲಾಗುವ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸಿ. ಮೊದಲ ಕಂತಿನ ಹಣ ಪಾವತಿ ಮಾಡಿ. ಹಣ ಉಳಿಸುವ ದಾರಿಯಲ್ಲಿ ಸಾಗುತ್ತಾ ಹೋಗಿ. ನಿಮ್ಮ ಮನೆಯವರಿಗೆ ವಿಮೆ ಕುರಿತಾದ ಮಾಹಿತಿ ನೀಡಿ ನಿರಾಳರಾಗಿ. ಇನ್ನು ನಿಮ್ಮ ಕುಟುಂಬಕ್ಕೆ ಒಂದು ರಕ್ಷಣಾ ಯೋಜನೆ ಮಾಡಿದ ಹೆಮ್ಮೆಯಿಂದ ಬೀಗಬಹುದು.
(ಲೇಖಕರು ಎಇಜಿಒಎನ್ ರೆಲಿಗೇರ್ ಲೈಫ್ ಇನ್ಶೂರೆನ್ಸ್‌ನ ಚೀಫ್ ಆಪರೇಟಿವ್ ಆಫಿಸರ್)

= ಯತೀಶ್ ಶ್ರೀವಾಸ್ತವ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ