ಬೆಂಗಳೂರು: ಏರ್ಸೆಲ್ನಿಂದ ಪ್ರಿಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಡಿಸೈನ್ ಯುವರ್ ಪ್ಲ್ಯಾನ್ನ್ನು ಯೋಜನೆ ಜಾರಿ ಮಾಡಿದೆ. ಗ್ರಾಹಕರು ಈಗ ತಮ್ಮ ಅಗತ್ಯಕ್ಕೆ ತಕ್ಕಂತೆ ಮಾಸಿಕ ಪ್ಲ್ಯಾನ್ಗಳನ್ನು ರೂಪಿಸಿಕೊಳ್ಳಬಹುದು. ಡಿಸೈನ್ ಯುವರ್ ಪ್ಲ್ಯಾನ್ ರೂಪಿಸಿಕೊಳ್ಳಲು ಗ್ರಾಹಕರು www.aircel.com ಲಾಗಾನ್ ಆಗಿ ಅಗತ್ಯಕ್ಕೆ ತಕ್ಕಂತೆ ಆಯ್ಕೆಯನ್ನು ಕರೆ, ಎಸ್ಎಂಎಸ್ ಹಾಗೂ ಸರ್ಫಿಂಗ್ ಪ್ಲ್ಯಾನ್ಗಳನ್ನು ಪ್ಲ್ಯಾನ್ ಡಿಸೈನರ್ ಟೂಲ್ ಮೂಲಕ ರೂಪಿಸಿಕೊಳ್ಳಬಹುದು. ಸರ್ವೀಸ್ ಏರ್ಸೆಲ್ ಮತ್ತು ನಾನ್ ಏರ್ಸೆಲ್ ಮತ್ತು ಏರ್ಸೆಲ್ ಗ್ರಾಹಕರಿಗೆ ಲಭ್ಯ. ಹೊಸ ಗ್ರಾಹಕರು ಈ ಪ್ಲಾನ್ಗಳನ್ನು ಏರ್ಸೆಲ್ ಕಸ್ಟಮರ್ ಎನ್ರೋಲ್ಮೆಂಟ್ ಫಾರಂ ಭರ್ತಿ ಮಾಡಿ ಹತ್ತಿರದ ಏರ್ಸೆಲ್ ಮಳಿಗೆಗಳಲ್ಲಿ ಸಲ್ಲಿಸುವ ಮೂಲಕ ಆಕ್ಟಿವೇಟ್ ಮಾಡಬಹುದು. ಪ್ರಸ್ತುತ ಇರುವ ಗ್ರಾಹಕರು ವ್ಯಾಲ್ಯೂ ಪ್ಯಾಕ್ಗಳನ್ನು ಆನ್ಲೈನ್ನಲ್ಲಿ ರೀಚಾರ್ಜ್ ಮಾಡುವ ಅಥವಾ ಡಿಸೈನ್ ಟೂಲ್ ಬಳಸಿ ಹೊಸ ಪ್ಲಾನ್ ಆಯ್ಕೆ ಮಾಡಬಹುದು.
ಪೆಪೆ ಜೀನ್ಸ್ ಕೊಡುಗೆ
ಪೆಪೆ ಜೀನ್ಸ್ನ ಮಾರಾಟ ಜು.11ಕ್ಕೆ ಪ್ರಾರಂಭವಾಗಿದೆ. ಸ್ಟೈಲಿಶ್ ಉಡುಗೆ, ತೊಡುಗೆಗಳು ಕೊಳ್ಳುವ ಹಾಗೂ ಇತ್ತೀಚಿನ ಫ್ಯಾಷನ್ವುಳ್ಳ ವಿನ್ಯಾಸದ ಮೇಲೆ ಆಕರ್ಷಕ ಕೊಡುಗೆಗಳಿರುತ್ತದೆ. ಅತ್ಯಂತ ಕಡಿಮೆ ದರಗಳಲ್ಲಿ ಲಭ್ಯವಿದ್ದು ಪುರುಶರ ಹಾಗೂ ಮಹಿಳೆಯರ ಸಿದ್ಧ ಉಡುಪುಗಳು ಇತರೆ ತೊಡುಗೆಗಳಿಗೆ ಶೇ.50ವರೆಗೆ ರಿಯಾಯಿತಿ ಪಡೆಬಯಹುದು. 4ಸಾವಿರ ವೆರೆಗಿನ ಖರೀದಿಗೆ ಶೇ.20, ರು. 4001ರಿಂದ 6999ರವರೆಗೆ ಶೇ.30, 7ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಖರೀದಿಗೆ 40ರಷ್ಟು ರಿಯಾಯಿತಿ ದೊರೆಯಲಿದೆ. ಮಹಿಳೆಯರ ಜೀನ್ಸ್ ಖರೀದಿಯ ಮೇಲೆ ವಿವರಿಸಿರುವ ಶ್ರೇಣಿಯ ರಿಯಾಯಿತಿಗಳು ಅನ್ವಯಿಸುತ್ತವೆ.
-ಚಿಕನ್ ಖೀಮಾ ಪರಿಚಯ
ಗೋದ್ರೆಜ್ ಟೈಸನ್ ಜನಸಾಮಾನ್ಯರ ನಿತ್ಯದ ಆಹಾರದಲ್ಲಿ ಪ್ರೋಟಿನ್ ಅಂಶ ಲಭ್ಯವಾಗಲು ರಿಯಲ್ ಗುಡ್ ಚಿಕನ್ ಖೀಮಾ ಪರಿಚಯಿಸಿದೆ. ನೂತನ ಉತ್ಪನ್ನವಾದ ಚಿಕನ್ ಖೀಮಾವನ್ನು 68ದರದಲ್ಲಿ 300ಗ್ರಾಂ ತೂಕದ ಪ್ಯಾಕ್ನ್ನು ಮಾರುಕಟ್ಟೆಗ ಬಿಡುಗಡೆ ಮಾಡಿದೆ. ಭಾರತದಲ್ಲಿನ ಪ್ರೋಟಿನ್ ಯುಕ್ತ ಆಹಾರದ ಕೊರತೆಯ ನಡುವೆ ಇರುವಂತಹ ಅಂತರವನ್ನು ಕಡಿಮೆ ಮಾಡುವ ಕಡೆಗೆ ಪ್ರಯತ್ನಿಸಲಾಗಿದೆ. ದೇಶಾದಾದ್ಯಂತ ಇರುವ ಸುಮಾರು 4000ಸಾವಿರಕ್ಕೂ ಹೆಚ್ಚು ರೀಟೇಲ್ ಮಳಿಗೆಗಳಲ್ಲಿ ಲಭ್ಯವಾಗಲಿದೆ. ರಿಯಲ್ಗುಡ್ ಚಿಕನ್ ಇದೀಗ ದೇಶಾದ್ಯಂತ 60ಪ್ರಮುಖ ನಗರಗಳಲ್ಲಿ ತಲುಪಿದೆ.
ರಿಯಾಯಿತಿ ಮಾರಾಟ
ಶಾಪರ್ಸ್ ಸ್ಟಾಪ್ನಲ್ಲಿ ಹೋಮ್ ಸ್ಟಾಪ್, ಮದರ್ಕೇರ್, ಶಾಪರ್ಸ್ ಸ್ಟಾಪ್ ಹಾಗೂ ಢಿಢಿಢಿ.ಝ್ಟಠಠಜ್ಠಡಡಡ್ಟಿಠ.್ಛ್ಟಟನಲ್ಲಿ ಶೇ.51ರಷ್ಟು ರಿಯಾಯಿತಿ ದೊರೆಯಲಿದೆ. ಶಾಪರ್ಸ್ ಸ್ಟಾಪ್ನ ಗೋಲ್ಡನ್ ಗ್ಲೋವ್ ಫರ್ಸ್ಟ್ ಸಿಟಿಜನ್ ಸದಸ್ಯರು ಹೆಚ್ಚುವರಿ ಶೇ.5ರಷ್ಟು ರಿಯಾಯಿತಿ ಪಡೆಯಬಹುದು. ಶಾಪರ್ಸ್ ಸ್ಟಾಪ್ನ ಮಳಿಗೆಗಳು ಭನ್ನೇರುಘಟ್ಟ ರಸ್ತೆ, ಗರುಡಾಮಾಲ್, ಮಗ್ರಾತ್ ರಸ್ತೆ, ಕೋರಮಂಗಲ, ಗೋಪಾಲನ್ ಮಾಲ್, ಮಂತ್ರಿ ಸ್ಕ್ವೇರ್ ಮಲ್ಲೇಶ್ವರ, ವಿಮಾನ ನಿಲ್ದಾಣದಲ್ಲಿರುವ ಮಾಲ್ಗಳಲ್ಲಿ ಲಭ್ಯವಿದೆ.
ಶೇ.51 ರಿಯಾಯಿತಿ
ಸೆಂಟ್ರಲ್ ಮಳಿಗೆಗಳಲ್ಲಿರುವ 500ಕ್ಕೂ ಹೆಚ್ಚು ಬ್ರ್ಯಾಂಡ್ಗಳ ಮೇಲೆ ಶೇ.51ರಷ್ಟು ರಿಯಾಯಿತಿ ದೊರೆಯಲಿದೆ. ಅಪರೆಲ್ ಹ್ಯಾಂಡ್ ಬ್ಯಾಗ್, ಪಾದರಕ್ಷೆಗಳು, ವಾಚ್ ಙಗಳು, ಕಾಸ್ಮೆಟಿಕ್ ಉತ್ಪನ್ನಗಳು ಇನ್ನಿತರ ಉತ್ಪನ್ನಗಳ ಮೇಲೆ ರಿಯಾಯಿತಿ ಇರಲಿದೆ. ಲೇಡಿಸ್ ಎಥ್ನಿಕ್, ವೆಸ್ಟರ್ನ್ ಹಾಗೂ ಪಾರ್ಟಿ ವೇರ್ ಬ್ರ್ಯಾಂಡ್ಗಳಾದ ದೇಸಿ ಬೆಲ್ಲೆ, ಫ್ಯೂಷನ್ ಬೀಟ್ಸ್, ರಂಗಮಂಚ, ರಿಗ್ ಸ್ಕಲ್ಲರ್, ಹನಿ ಯಿಂದ ಪುಟಾಣಿ ಮಕ್ಕಳಿಗೆ ಗಿಣಿ ಅಂಡ್ ಜಾನಿ, ಲಿಲ್ಲಿಪುಟ್, ಚಾಕ್, ಬೇರ್ ಕಿಡ್ಸ್ ಇತ್ಯಾದಿ ಬ್ರ್ಯಾಂಡ್ಗಳ ಮೇಲೆ ರೋಮಾಂಚನಕಾರಿ ಆಫರ್ಗಳು ಲಭ್ಯವಾಗಲಿದೆ. ಆರೋ, ವ್ಯಾನ್ ಹುಸೇನ್, ಸ್ಕಲ್ಲರ್, ಜಾನ್ ಮಿಲ್ಲರ್, ಪ್ರೋವೋಗ್, ಇಂಡಿಗೋ ನೇಷನ್, ಅಲೆನ್ ಸೋಲಿಯಂತಹ ಬ್ರ್ಯಾಂಡ್ಗಳಲ್ಲಿ ಅದ್ಭುತ ಆಫರ್ಗಳನ್ನು ಕಂಡುಕೊಳ್ಳಬಹುದು. ಸ್ಪೋರ್ಟ್ಸ್ ಬ್ರ್ಯಾಂಡ್ಗಳಾದ ನೈಕಿ, ಅಡಿಡಾಸ್, ಕಲ್ವರ್ಸ್, ಸ್ಪೀಡೋ, ಸ್ಕ್ರೆಚರ್, ಪೆಪ್, ಲೆವಿಸ್, ರಿಗ್ ಇತ್ಯಾದಿ ಬ್ರ್ಯಾಂಡ್ಗಳ ಮೇಲೆ ಶೇ.51ರಷ್ಟು ರಿಯಾಯಿತಿ ದೊರೆಯುತ್ತದೆ.
ರಾಹುಲ್ ರಾಣಾ ನೇಮಕ
ಪೋಬ್ಯಾಕ್ ಇಂಡಿಯಾದ ನೂತನಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿ ರಾಹುಲ್ ರಾಣಾ ನೇಮಕವಾಗಿದ್ದಾರೆ.ರಾಹುಲ್ ರಾಣಾ ಅವರು ಪ್ರಧಾನ ಕಾರ್ಯ ನಿರ್ವಹಣಾ ಅಧಿಕಾರಿಯಾಗಿ 2001ರಲ್ಲಿ ಪೇ ಬ್ಯಾಕ್ ಸಂಸ್ಥೆಯನ್ನು ಸೇರಿಕೊಂಡರು. ಅಂದಿನಿಂದ ಲ್ಲಿಯವರೆಗೂ ಗಮನಾರ್ಹ ಸೇವೆ ಸಲ್ಲಿಸಿರುವ ರಾಹುಲ್ ರಾಣಾ ಸಂಸ್ಥೆಯ ವ್ಯಪ್ತಿ ವಿಸ್ತರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಭಾರತದ ಅಗ್ರಮಾನ್ಯ ರೀಟೆಲ್ ಉದ್ಯಮ ಸಂಸ್ಥೆಯಾದ ಫ್ಯೂಚರ್ ಗ್ರೂಪ್ಸ್ಜತೆಗಿನ ಒಪ್ಪಂದವನ್ನು ತಂದುಕೊಟ್ಟಿದ್ದಾರೆ. ವಿಜಯ್ ಬೊಬ್ಬ ಇತರೆ ಕಾರ್ಯಗಳ ಸಲುವಾಗ ಸ್ಥಾನವನ್ನು ತ್ಯಜಿಸುತ್ತಿದ್ದು ಈ ಸಥಾನಕ್ಕೆ ರಾಹುಲ್ ರಾಣಾ ನೇಮಕವಾಗಿದ್ದಾರೆ., ರಾಹುಲ್ ರಾಣಾ ಮೊದಲು ಅಮೇರಿಕಾ ಎಕ್ಸ್ಪ್ರೆಸ್ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿ ಹಾಗೂ ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ವಿಶೇಷತೆ ಕ್ಲಿನಿಕ್
ಅಪೊಲೋ ಕ್ಲಿನಿಕ್ಸ್ ಭಾನುವಾರದ ವಿಶೇಷತೆಯ ಕ್ಲಿನಿಕ್ನ್ನು ಪರಿಚಯಿಸಿದೆ. ವಿಶೇಷಜ್ಞರ ಜತೆ ಕೂತು ಸಮಾಲೋಚನೆ ನಡೆಸಿ ರೋಗ ಲಕ್ಷಣ ಪತ್ತೆ ಹಚ್ಚುವಿಕೆ, ತಡೆಗಟ್ಟುವ ಆರೋಗ್ಯ ತಪಾಸಣೆ ಹಾಗೂ 24ಗಂಟೆಗಳೂ ತೆರೆದಿರುವ ಔಷಧಾಲಯವನ್ನು ಒದಗಿಸುತ್ತಿದೆ. ಇತರೆ ಸೌಕರ್ಯಗಳನ್ನು ಒದಗಿಸುತ್ತಿದ್ದು ಈಗ ಭಾನುವಾರಗಳಂದೂ ಆರೋಗ್ಯ ಆರೈಕೆ ಸೇವೆಗಳನ್ನು ಒದಗಿಸಲು ಆರಂಭಿಸಿದೆ. ಮಕ್ಕಳ ರೋಗ ಶಾಸ್ತ್ರ, ಮೂಲೆರೋಗಶಾಸ್ತ್ರ, ಹೃದಯರೋಗ, ನರರೋಗಶಾಸ್ತ್ರ, ಮೂತ್ರರೋಗಶಾಸ್ತ್ರ, ಸ್ತ್ರೀರೋಗ ಶಾಸ್ತ್ರ ವಿವಿಧ ವಿಭಾಗಗಳಲ್ಲಿ ಭಾನುವಾರ ಕ್ಲಿನಿಕ್ನಲ್ಲಿ ವಿಶೇಷಜ್ಞರ ಜತೆ ಸಮಾಲೋಚನೆ ಸೌಲಭ್ಯ ಸಿಗಲಿದೆ. ಕ್ಲಿನಿಕ್ ಸೇವೆಗಳು ಜೂನ್ನಿಂದಲೇ ಲಭ್ಯವಾಗುತ್ತಿದೆ.
ಗೊದ್ರೆಜ್ನಿಂದ ಆರೈಕೆ ಉತ್ಪನ್ನ
ಗೊದ್ರೆಜ್ ಪ್ರೊಟೆಕ್ಟ್ ಶ್ರೇಣಿಯ ವೈಯಕ್ತಿಕ ಆರೈಕೆಯ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಮಾಸ್ಟರ್ಬ್ಲಾಸ್ಟರ್ ಹ್ಯಾಂಡ್ ವಾಶ್ ನಿಸರ್ಗದಿಂದ ಪಡೆದ ಟ್ರಿಕ್ಲೊಸಾನ್ ಮುಕ್ತವಾಗಿದ್ದು ಶೇ.100ರಷ್ಟು ಮರುಬಳಕೆ ಬಾಟಲಿ ಹೊಂದಿದ್ದು ರೋಗಾಣುಗಳನ್ನು ನಿವಾರಿಸುವುದಲ್ಲದೆ ಕೈಗಳನ್ನು ಮೃದುವಾಗಿರಿಸುತ್ತದೆ. ಹ್ಯಾಂಡ್ವಾಶ್ ಊಟದ ನಂತರ ಕೈಗಳನ್ನು ಯಾವುದೇ ವಾಸನೆ ಇಲ್ಲದೆ ಅಂಟಿಲ್ಲದೆ, ಕೀಟಾಣುವಿಲ್ಲದೆ ಸ್ವಚ್ಛಗೊಳಿಸುತ್ತದೆ. ಗೊದ್ರೆಜ್ ಪ್ರೊಟೆಕ್ಟ್ ಬಝ್ ಆಫ್ ಆಂಟಿ ಮಸ್ಕಿಟೋ ಮಗುವಿನ ಚರ್ಮಕ್ಕೆ ಸ್ಪ್ರೇ ಮಾಡಿದರೆ ಸೊಳ್ಳೆಯ ಕಾಟವನ್ನು ಎಂಟು ಗಂಟೆಗಳ ಕಾಲ ತಪ್ಪಿಸಬಹುದು. ಸಾಮಾನ್ಯ ಹ್ಯಾಂಡ್ ವಾಶ್ಗಳು ನೀವು ಮತ್ತೊಂದು ವಸ್ತು ಮುಟ್ಟಿದ ಕೂಡಲೆ ಕೆಲಸ ನಿಲ್ಲಿಸುತ್ತದೆ. ಅದರಲ್ಲಿನ ಮದ್ಯ ಕೈಗಳನ್ನು ಒಣಗಿಸುತ್ತದೆ. ಆದರೆ ಸ್ಯಾನಿಟೈಝರ್ 8ಗಂಟೆ ಕಾಲ ಕೀಟಾಣುಗಳಿಂದ ರಕ್ಷಿಸುತ್ತದೆ. ಇವು ಉತ್ತಮ ಪರಿಮಳಗಳಲ್ಲೂ ಲಭ್ಯವಿದೆ. ನೀರು ರಹಿತ ಕೈ ಸ್ವಚ್ಛಗೊಳಿಸುವ ಸ್ಪ್ರೇಯನ್ನು ಕೂಡ ಗೋದ್ರೆಜ್ ಬಿಡುಗಡೆ ಮಾಡಿದೆ. ಪ್ರವಾಸಗಳಿಗೆ ಹೋಗುವ ಸಂದರ್ಭದಲ್ಲಿ ಇದು ಹೆಚ್ಚು ಉಪಕಾರಿ.