ತಾಂತ್ರಿಕ ಕ್ಷೇತ್ರದ ದಿಗ್ಗಜ ಎಲ್ ಆ್ಯಂಡ್ ಟಿ ಲಾಭ ಹೆಚ್ಚಾಗಿದೆ. ಮಾರ್ಚ್ 31ಕ್ಕೆ ಮುಕ್ತಾಯಗೊಂಡ ತ್ರೈಮಾಸಿಕದಲ್ಲಿ ಕಂಪನಿ 2,723.5 ಕೋಟಿ ಲಾಭ ಮಾಡಿಕೊಂಡಿದೆ. ಇದರಿಂದ ಉತ್ಸಾಹಗೊಂಡಿರುವ ಕಂಪನಿ ಪ್ರಸಕ್ತ ಸಾಲಿನಲ್ಲಿ ಶೇ.20ರಷ್ಟು ಹೆಚ್ಚುವರಿ ಆರ್ಡರ್‌ಗಳನ್ನು ಸ್ವೀಕರಿಸುವ ಹುಮ್ಮಸ್ಸಿನಲ್ಲಿದೆ. ಮೂಲಸೌಕರ್ಯಗಳನ್ನು ನೀಡುವ ವಿಭಾಗದಲ್ಲಿ ಕಂಪನಿಗೆ ಶೇ.17ರಷ್ಟು ಏರಿಕೆಯಾಗಿದೆ ಅಂದರೆ 13,260 ಕೋಟಿ ರು.ಲಾಭ ಗಳಿಸಿದೆ.