ಜೀವ ವಿಮಾ ಯೋಜನೆಯಿಂದ ವಾರ್ಷಿಕವಾಗಿ ನೀವು ದುಡಿಯುವ ಸಂಬಳಕ್ಕಿಂತ ದುಪ್ಪಟ್ಟು ಸಿಗುತ್ತದೆ ಎಂದರೆ ನಂಬುತ್ತೀರಾ? ನಂಬಲೇ ಬೇಕು. ಅದೇ ಸತ್ಯ.
ನಿಮ್ಮ ಕನಸು ನನಸಾಗಿದೆ. ನೀವು ಬಯಸಿದ ಕಾರು ಶೋ ರೂಮಿನಲ್ಲಿ ನಿಮಗಾಗಿ ಕಾದಿದೆ. ಶೋ ರೂಮಿನಿಂದ ಎತ್ತಾಕಿಕೊಂಡು ಬರುವ ಮೊದಲು ಮರೆಯದೆ ವಿಮೆ ಮಾಡಿಸಿ. ನಿಮ್ಮ ಹೊಸ ಕಾರಿನಿಂದ ಏನೂ ಸಂಭವಿಸುವುದಿಲ್ಲ ಎಂದು ಚಿಂತಿಸಲು ಹೋಗಲೇ ಬೇಡಿ. ಹಾಗೆಂದ ಮಾತ್ರಕ್ಕೆ ಏನಾದರೂ ಸಂಭವಿಸಬಹುದು ಎಂದು ಚಿಂತಿಸಬೇಕಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ವಿಮೆ ಮಾಡಿಸಿದರೆ ಸಾಕಷ್ಟು ಒಳಿತು. ಅದೊಂದು ಮುಂಜಾಗೃತಾ ಕ್ರಮವಷ್ಟೇ. ಅಪಾಯವನ್ನು ಆಹ್ವಾನಿಸುವುದು ಎಂಬ ದೂರಾಲೋಚನೆ ಬೇಡ.
ವಿಮೆ ಮಾಡಿಸುವುದು ಸಂಸಾರದ ಜವಾಬ್ದಾರಿ ಹೊತ್ತಿರುವ ನಿಮ್ಮ ಆದ್ಯ ಕರ್ತವ್ಯ. ಅಕಸ್ಮಾತ್ ಅಪಘಾತ ಸಂಭವಿಸಿತು. ಆಗ ನಿಮ್ಮ ಚಿಕಿತ್ಸೆಗೆ ತಗುಲುವ ವೆಚ್ಚವನ್ನು ಭರಿಸುವುದು ಯಾರು? ನಿಮ್ಮ ಮನೆಯವರಿಗೆ ಇಲ್ಲದ ಹೊರೆ ಹೊರಿಸಿದೆ ಎಂದು ಆಗ ಚಿಂತಿಸುವ ಬದಲು ಮೊದಲಿಗೇ ಅರಿತುಕೊಂಡರೆ ಒಳಿತು. ಮೊದಲೇ ವಿಮೆ ಮಾಡಿಸಿಕೊಂಡಿದ್ದರಿಂದ ವೆಚ್ಚದ ಬಗ್ಗೆ ನಿಶ್ಚಿಂತರಾಗಿ ನಿಮ್ಮ ಆರೋಗ್ಯದೆಡೆಗೆ ಹೆಚ್ಚಿನ ಮಹತ್ವ ನೀಡುವುದಿಲ್ಲವೇ? ಕ್ಷಮಿಸು ಎಂಬುದಕ್ಕಿಂತ ಸುರಕ್ಷಿತವೇ ಉತ್ತಮ. ಆ ಸುರಕ್ಷತೆಯನ್ನು ಮೊದಲೇ ಮಾಡಿಸಿ ಇಟ್ಟುಕೊಳ್ಳುವುದು ಕ್ಷೇಮ.
ಭಾರತದಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಸಮಸ್ಯೆ ಎಂದರೆ ವಿಮೆ ಮಾಡಿಸದಿರುವುದು. ಹೆಚ್ಚಿನ ಭಾರತೀಯರು ಮುಂಜಾಗ್ರತೆ ಮತ್ತು ಸುರಕ್ಷತೆ ಬಗ್ಗೆ ಚಿಂತಿಸದೇ ಇರುವುದು ದೊಡ್ಡ ಸಮಸ್ಯೆಯಾಗಿದೆ.
ಒಮ್ಮೆ ಈ ಅಂಕಿಗಳ ಮೇಲೆ ಕಣ್ಣಾಡಿಸಿ
ಐದು ಕುಟುಂಬದಲ್ಲಿ ಒಂದು ಕುಟುಂಬದ ಸದಸ್ಯರೊಬ್ಬರು ಅಪಘಾತದಲ್ಲಿ ಅಸುನೀಗುತ್ತಾರೆ ಅಥವಾ ಗಂಭೀರ ಗಾಯಗೊಳ್ಳುತ್ತಾರೆ. ಕುಟುಂಬಕ್ಕೆ ಆಧಾರವಾಗಿದ್ದವರು ಕೆಲಸ ಮಾಡಲಾಗದೆ ಮನೆಯಲ್ಲೇ ಮಲಗುವ ಸ್ಥಿತಿಯಲ್ಲಿರುತ್ತಾರೆ.
ಸಂಪ್ರದಾಯಬದ್ಧ ಭಾರತದ ಕುಟುಂಬವೊಂದು ತನ್ನ ಅರ್ಧದಷ್ಟು ಆದಾಯವನ್ನು ಗಂಭೀರ ಗಾಯ, ಅಪಘಾತಗಳಿಂದ ಕಳೆದುಕೊಳ್ಳುತ್ತಿದೆ. ಅಪಘಾತದಿಂದ ಪೋಷಕರೊಲ್ಲಬ್ಬರ ಸಾವಿನಿಂದಲೂ ಅದಾಯದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ.
ಶೇ.95ರಷ್ಟು ಜನ ಸೂಕ್ತ ರೀತಿಯ ವಿಮೆಯನ್ನೇ ಮಾಡಿಸಿರುವುದಿಲ್ಲ.
ಯಾರೂ ಅಪಾಯ ಬರಲಿ ಎಂದು ಬಯಸುವುದಿಲ್ಲ. ಆಕಸ್ಮಿಕವಾಗಿ ಆಗುವ ಅವಘಡಗಳನ್ನೂ ಯಾರು ಬಯಸಿರುವುದಿಲ್ಲ. ಆದರೂ ಕೆಲವೊಮ್ಮೆ ಸಂಭವಿಸುತ್ತದೆ. ಸಾವು ನೋವು ಉಂಟಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಮತ್ತಷ್ಟು ನೋವು ಆವರಿಸದೇ ಇರುವುದಕ್ಕೆ ಸಹಾಯಕ್ಕೆ ನಿಲ್ಲುವುದೇ ವಿಮೆ. ಆರ್ಥಿಕ ಮುಗ್ಗಟ್ಟಿಗೆ ಹೊರೆಯಾಗದಂತೆ ಹಣಕಾಸು ವ್ಯವಸ್ಥೆ ಹದಗೆಡದಂತೆ ಕಾಪಡಲು ನೆರವಾಗುವುದೇ ವಿಮೆ. ಹಣಕಾಸು ಯೋಜನೆಯಲ್ಲಿ ವಿಮೆ ಅತ್ಯಂತ ಮುಖ್ಯವಾದ ಒಂದು ಭಾಗ. ಉತ್ತಮ ಹಣಕಾಸು ವ್ಯವಸ್ಥೆಯ ಬಗೆಗೆ ಯೋಜನೆ ಹಾಕಿಕೊಂಡಿರುವ ಪ್ರತಿಯೊಬ್ಬನೂ ವಿಮೆ ಮಾಡಿಸಿಕೊಂಡಿರುವತ್ತಾನೆ. ವಿಮೆ ಮಾಡಿಸಿಕೊಳ್ಳುವುದರಿಂದ ಆದಾಯವನ್ನು ತರುವುದಕ್ಕಿಂತ ಅತ್ಯಂತ ಸುಲಭವಾಗಿ ಕಾಪಾಡಿಕೊಳ್ಳಬಹುದು. ಜೀವನದಲ್ಲಿ ಅತಿ ಮುಖ್ಯವೆನಿಸುವ ಸಂಗತಿಗಳಲ್ಲಿ ಒಂದು ಎಂದರೆ ವಿಮೆ. ನಿಮಗೆ ಎನ್ನುವುದಕಿಂತಲೂ ನಿಮ್ಮ ಪ್ರೀತಿ ಪಾತ್ರರಿಗೆ, ನಿಮ್ಮ ಸಂಗಾತಿಗೆ ನೀವು ನೀಡಬಹುದಾದ ಅತ್ಯಮೂಲ್ಯ ಸುರಕ್ಷೆ.
ಎಷ್ಟರ ವಿಮೆ ಅನುಕೂಲವೆನಿಸುತ್ತದೆ?
ಹಲವಾರು ವಿಧದ ವಿಮೆ ಯೋಜನೆಗಳಿವೆ. ಅದರಲ್ಲಿ ತಮಗೆ ಯಾವುದು ಸೂಕ್ತ ಮತ್ತು ಸುರಕ್ಷೆ ಎಂದೆನಿಸುತ್ತದೆ ಎಂಬುದನ್ನು ಆರಿಸಿಕೊಳ್ಳಬಹುದು.
ನೀವು ಸಾಲ ಮಾಡಿದ್ದರೆ ನೀವು ಆಕಸ್ಮಿಕವಾಗಿ ಸತ್ತರೆ, ಮಾಡಿರುವ ಸಾಲವನ್ನು ತೀರಿಸಲು ಎಷ್ಟು ಬೇಕಾಗಬಹುದು?
ಸಧ್ಯ ಜೀವನಕ್ಕೆ ವಿನಿಯೋಗಿಸುತ್ತಿರವ ವೆಚ್ಚಗಳೆಷ್ಟು?
ನಿಮ್ಮ ಮಕ್ಕಳ ಶಿಕ್ಷಣಕ್ಕೆ ಎಷ್ಟು ದುಡ್ಡು ಬೇಕಾಗಬಹುದು ಮತ್ತು ಆ ಮುನ್ನಲೆಯಲ್ಲಿ ಎಷ್ಟು ಉಳಿಸಬಹುದು?
ನೀವು ಇಲ್ಲದಿದ್ದರೆ ಮನೆಯವರ ಖರ್ಚಿಗೆ ಎಷ್ಟು ಬೇಕಾದೀತು?
ನೀವಿಲ್ಲದಾಗ ಮನೆಯ ದುರಸ್ಥಿ ಮತ್ತು ವಿನ್ಯಾಸಕ್ಕೆ ಎಷ್ಟು ವೆಚ್ಚ ತಗುಲಬಹುದು?
ಕ್ಯಾನ್ಸರ್ ಅಥವಾ ಮತ್ಯಾವುದೋ ಮಾರಣಾಂತಿಕ ಖಾಯಿಲೆ ಇದ್ದರೆ ಚಿಕಿತ್ಸೆಗೆ ತಗುಲುವ ಹಣ? ಆ ನಂತರದ ಜೀವನ ನಿರ್ವಹಣೆಗೆ ಎಷ್ಟು ಬೇಕಾಗಬಹುದು?
ಹೀಗೆ ಎಲ್ಲಾ ಸಾಧ್ಯತೆಗಳನ್ನು ನೆನದು ವಿಮೆ ಕುರಿತಾಗಿ ಆಲೋಚಿಸಬೇಕು. ಮೇಲಿನ ಪ್ರಶ್ನೆಗಳು ಗಾಬರಿ ಉಂಟು ಮಾಡಬಹುದು. ಆದರೆ ನಿಮ್ಮನ್ನೇ ಅವಲಂಬಿತರಾಗಿರುವ ಪ್ರೀತಿ ಪಾತ್ರರು ನಿಮ್ಮ ಅಗಲುವಿಕೆಯಲ್ಲೂ ಅಥವಾ ನಿಮ್ಮ ಅಶಕ್ತತೆಯ ನಡುವೆಯೂ ಚೆನ್ನಾಗಿ ಇರಬೇಕು ಎಂದಾದಲ್ಲಿ ಸೂಕ್ತ ರೀತಿಯ ವಿಮೆ ಮಾಡಿಸಲೇಬೇಕು. ನಿಮ್ಮ ಹಣಕಾಸು ಸಲಹೆಗಾರರಲ್ಲಿ ಗುರಿ ಮತ್ತು ಬಯಕೆಯನ್ನು ಸ್ಪಷ್ಟವಾಗಿ ತಿಳಿಸಿ. ಯಾವ ರೀತಿ ವಿಮೆಯಲ್ಲಿ ನಿಮ್ಮನ್ನು ತೊಡಗಿಸಿಕೊಂಡರೆ ಅನುಕೂಲವಾಗುತ್ತದೆ ಎಂಬುದನ್ನು ವಿವರಿಸುತ್ತಾರೆ. ಅವರ ಸಲಹೆ ಮೇರೆಗೆ ಸೂಕ್ತ ವಿಮಾ ಯೋಜನೆಯಲ್ಲಿ ತೊಡಗಿಸಿಕೊಳ್ಳಿ.
(ಲೇಖಕರು ಏಜಿಯಾನ್ ರೆಲಿಗೇರ್ ಲೈಫ್ ಇನ್ಶೂರೆನ್ಸ್ನ ಚೀಫ್ ಏಜೆನ್ಸಿ ಆಫೀಸರ್)
-ಅನಿಲ್ ಕುಮಾರ್ ರಾಯ್