ಲಂಡನ್ ಸ್ಟಾಕ್ ಮಾರುಕಟ್ಟೆಯಿಂದ ಹೊರ ಬಿದ್ದ ಬಳಿಕ ಇದೀಗ ಎಸ್ಸಾರ್ ಕಂಪನಿ ಭಾರತೀಯ ಷೇರು ಮಾರುಕಟ್ಟೆಯಿಂದಲೂ ಡಿ- ಲಿಸ್ಟ್ ಮಾಡಲು ಮನವಿ ಮಾಡಿಕೊಂಡಿದೆ. ರೂಯ್ಯಾ ಸಹೋದರ ಒಡೆತನದಲ್ಲಿರುವ ಎಸ್ಸಾರ್ ಗ್ರೂಪ್, ಬಾಂಬೆ ಷೇರು ಮಾರುಕಟ್ಟೆ ಹಾಗೂ ನ್ಯಾಷನಲ್ ಷೇರು ಮಾರುಕಟ್ಟೆಗೆ ಈ ಬಗ್ಗೆ ಮನವಿ ಮಾಡಿದ್ದು, ಉತ್ತೇಜನದಾರ ಎಸ್ಸಾರ್ ಹೋಲ್ಡಿಂಗ್ಸ್ ಲಿ. ಸ್ವಯಂವಾಗಿ ಷೇರು ಮಾರುಕಟ್ಟೆಯಿಂದ ಹೊರ ಬೀಳುವಂತೆ ವಿನಂತಿಸಿದೆ. ಹಾಗಾಗಿ, ಷೇರು ಮಾರುಕಟ್ಟೆಯಿಂದ ಹೊರ ಹೋಗುತ್ತಿದ್ದೇವೆ ಎಂದು ತಿಳಿಸಿದೆ.
ಹೀರೋಗೆ ಆಂಧ್ರ, ತೆಲಂಗಾಣ ಯತ್ನ
ದೇಶದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿ ಹೀರೋ ಮೋಟೋಕಾರ್ಪ್ ದಕ್ಷಿಣ ಭಾರತದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲು ಮುಂದಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳು ಘಟಕ ನಿರ್ಮಾಣಕ್ಕೆ ಜಾಗ ನೀಡಲು ಪೈಪೋಟಿ ನಡೆಸಿವೆ. ಬ್ರೆಜಿಲ್‌ನಲ್ಲಿ ಇತ್ತೀಚೆಗೆ ಹೀರೋ ಮೋಟೋಕಾರ್ಪ್ ವ್ಯವಸ್ಥಾಪಕ ನಿರ್ದೇಶಕ, ದಕ್ಷಿಣ ಭಾರತದಲ್ಲಿ ಘಟಕ ಆರಂಭಿಸುವ ಯೋಜನೆ ಇದೆ. ಇದಕ್ಕಾಗಿ ಜಾಗ ಶೋಧ ನಡೆದಿದೆ ಎಂದು ತಿಳಿಸಿದ್ದರು.
2 ಕೋಟಿ ಷೇರು ಖರೀದಿ!
ಅಮೆರಿಕ ಮೂಲದ ವ್ಯಾನ್ ಎಕ್ ಅಸೋಸಿಯೇಟ್ಸ್ ಕಾರ್ಪೊರೇಷನ್‌ನ ಎಂವಿ ಮಾರಿಷಿಸ್ ಕಂಪನಿ 6 ಕಂಪನಿಗಳಿಂದ 2 ಕೋಟಿ ಷೇರುಗಳನ್ನು ಖರೀದಿಸಿದೆ. ಯೂನಿಟೆಕ್, ಟಾಟಾ ಎಲೆಕ್ಸಿ, ಎಂಟಿಎನ್‌ಎಲ್ ಮತ್ತು ಅಶೋಕ್ ಲೈಲ್ಯಾಂಡ್, ಸ್ಪೈಸ್ ಜೆಟ್, ಪೂಂಜ್ ಲಾಯ್ಡ್, ಗೀತಾಂಜಲಿ ಜಮ್ಸ್ ಕಂಪನಿಗಳಿಂದ ಷೇರು ಖರೀದಿಸಲಾಗಿದ್ದು, ಇದಕ್ಕಾಗಿ ರು. 122.54 ಕೋಟಿ ವ್ಯಯಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ರು. 100 ಕೋಟಿ ಕ್ಲಬ್‌ಗೆ ಹಾಲಿ ಡೇ
ನಟ ಅಕ್ಷಯ್‌ಕುಮಾರ್ ಅಭಿನಯದ 'ಹಾಲಿ ಡೇ: ಎ ಸೋಲ್ಜರ್ ಈಶ್ ನೆವರ್ ಆಫ್ ಡ್ಯೂಟಿ' ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಿರುವ ಈ ಸಿನಿಮಾ ಇದೀಗ ರು. 100 ಕೋಟಿ ಚಿತ್ರಗಳ ಕ್ಲಬ್ ಸೇರಿದೆ. ಗುರುವಾರ ಹೊತ್ತಿಗೆ ರು. 99.71 ಕೋಟಿ ಗಳಿಕೆಯನ್ನು ಈ ಚಿತ್ರ ದಾಖಲಿಸಿದೆ. ಇದರೊಂದಿಗೆ 2014ರ ಅತಿ ಹೆಚ್ಚು ಗಳಿಸಿದ ಚಿತ್ರಗಳ ಸಾಲಿನಲ್ಲಿ ಸದ್ಯ 3ನೇ ಸ್ಥಾನದಲ್ಲಿದೆ.
ಇಮಾಮಿ ತೆಕ್ಕೆಗೆ ಅವಳು
ರಾಯಲ್ ಹೈಯಿಜಿನ್ ಕೇರ್‌ನ 'ಶಿ ಕಂಪರ್ಟ್' ಸ್ಯಾನಿಟರಿ ನ್ಯಾಪ್ಕಿನ್ ಕಂಪನಿಯನ್ನು ಇಮಾಮಿ ಲಿ. ಸ್ವಾಧೀನ ಮಾಡಿಕೊಂಡಿದೆ. ಆದರೆ, ಸ್ವಾಧೀನ ಮೊತ್ತವನ್ನು ಎರಡೂ ಕಂಪನಿಗಳು ಬಹಿರಂಗಪಡಿಸಿಲ್ಲ. ಇದರೊಂದಿಗೆ ಪ್ರೊಕ್ಟರ್ ಮತ್ತು ಗ್ಯಾಂಬೆಲ್ ಹಾಗೂ ಜಾನ್ಸನ್ ಆ್ಯಂಡ್ ಜಾನ್ಸನ್‌ನಿಂದ ನಿಯಂತ್ರಿ ಸಲ್ಪಟ್ಟಿರುವ 'ಮಹಿಳಾ ಸುರಕ್ಷಿತಾ' ಮಾರುಕಟ್ಟೆಗೆ ಇಮಾಮಿ ಕೂಡಾ ಲಗ್ಗೆ ಇಟ್ಟಿದೆ. 'ನಾವೀಗ ಬ್ರಾಂಡ್ ಮಾತ್ರ ಖರೀದಿಸಿದ್ದೇವೆ. ಯಾವುದೇ ಆಸ್ತಿಯನ್ನಲ್ಲ. ಬ್ರಾಂಡ್ ರು. 30 ಕೋಟಿಗೆ ಮಾರಾಟವಾಗಿದೆ' ಎಂದು ಇಮಾಮಿ ನಿರ್ದೇಶಕ ಹರ್ಷ ವಿ ಅಗರ್‌ವಾಲ್ ತಿಳಿಸಿದ್ದಾರೆ.