ಬೆಂಗಳೂರು: ಮೋಕ್ಷ ಅಗರಬತ್ತೀಸ್ ಗುಲಾಬಿ ಪರಿಮಳದ ಊದಿನ ಕಡ್ಡಿಗಳ ಐದು ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಸ್ವರ್ಣ ಲ್ಯಾವೆಂಡರ್, ಹೀನಾ, ಸ್ಯಾಂಡಲ್‌ವುಡ್, ಸ್ವರ್ಣ ಕಳಶ ಮತ್ತು ಸಿದ್ಧಿ ಶಕ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಗುಲಾಬಿ, ನೈಸರ್ಗಿಕ ಗುಲಾಬಿ ಸುಗಂಧ ಹೊಂದಿದ್ದು 2 ಆಯ್ಕೆಗಳಲ್ಲಿ ದೊರೆಯಲಿದ್ದು, 25 ಕಡ್ಡಿಗೆ 300, 10 ಕಡ್ಡಿ 150ಕ್ಕೆ ಲಭ್ಯ. ಸ್ವರ್ಣ ಲ್ಯಾವೆಂಡರ್, ನೈಸರ್ಗಿಕ ಲ್ಯಾವೆಂಡರ್ ಹೂವಿನ ಪರಿಮಳ ಹೊಂದಿದೆ.
ಡಿಜಿಟಲ್ ಹಣ ರವಾನೆ
ರೆಮಿಟ್2ಇಂಡಿಯಾ ಯುಎಇನಲ್ಲಿ ವಾಸವಿರುವ ಭಾರತೀಯರಿಗೆ ಡಿಜಿಟಲ್ ಹಣ ರವಾನೆ ಮಾಡುವ ಸೇವೆಯನ್ನು ಸಾದರಪಡಿಸಿದೆ. ಯುಎಇನಲ್ಲಿ ವಾಸವಾಗಿರುವ ಭಾರತೀಯರಿಗೆ ಸ್ಥಳೀಯವಾಗಿ ನೀಡಲಾದ ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ವರ್ಗಾವಣೆ ಮೂಲಕ ಭಾರತದಲ್ಲಿನ ಯಾವುದೇ ಬ್ಯಾಂಕ್ ಖಾತೆಗೆ ಹಣ ರವಾನೆ ಮಾಡಬಹುದಾದ ಸೇವೆಯನ್ನು ಪರಿಚಯಿಸಿದೆ. ದಿನವಿಡೀ, ವಾರಪೂರ್ತಿ ಸೇವೆ ಪಡೆಯಲು ಆಸಕ್ತಿ ಹೊಂದಿರುವ ಅನಿವಾಸಿ ಭಾರತೀಯರು ಭಾರತದಲ್ಲಿ ಹಣ ಸ್ವೀಕರಿಸುವವರ ಬ್ಯಾಂಕ್ ಖಾತೆ ದಾಖಲೆಯೊಂದಿಗೆ ಢಿಢಿಢಿ.್ಠಜಟ್ಝಡಿ2್ಝಟಿಜ್ಝಛ.್ಛ್ಟಟನಲ್ಲಿ ನೋಂದಾಯಿಸಬಹುದು. ಹಣ ರವಾನೆಯನ್ನು ಯುಎಇ ಕಾರ್ಡ್, ಬ್ಯಾಂಕ್ ವಿವರ ಮತ್ತು ರವಾನೆಯ ಮೊತ್ತ ದಾಖಲಿಸಿ ಹಣ ರವಾನೆ ಮಾಡಬಹುದು.
ಆನ್‌ಲೈನ್ ವಿಮಾ ಖರೀದಿಗೆ ಹಿಂದೇಟು
ಮ್ಯಾಕ್ಸ್ ಲೈಫ್ ಇನ್‌ಶ್ಯೂರೆನ್ಸ್ ಸಂಸ್ಥೆ ದೇಶದ ಇಂಟರ್‌ನೆಟ್ ಬಳಕೆದಾರರು ತಮ್ಮ ರಕ್ಷಣೆ ಮತ್ತು ಕುಟುಂಬದ ರಕ್ಷಣೆ ಬಗ್ಗೆ ಯಾವ ರೀತಿ ಕಾಳಜಿವಹಿಸುತ್ತಿದ್ದಾರೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸಿದೆ. ಸಮೀಕ್ಷೆಗೆ 1009 ಜನರನ್ನು ಒಳಪಡಿಸಲಾಗಿದ್ದು, ಜೀವವಿಮೆ ಮಾಡಿಸುವುದು ಅತ್ಯುತ್ತಮ ಎಂಬ ಅಭಿಪ್ರಾಯ ಹೊರಬಿದ್ದಿದ್ದು, ಆನ್‌ಲೈನ್‌ನಲ್ಲಿ ಜೀವವಿಮೆ ಖರೀದಿಸಲು ಮಾತ್ರ ಹಿಂದೇಟು ಹಾಕುತ್ತಿರುವ ಅಂಶವನ್ನು ಸಮೀಕ್ಷೆ ಪತ್ತೆ ಮಾಡಿದೆ. ದಕ್ಷಿಣ ಭಾರತೀಯರು ಸಾಂಪ್ರದಾಯಿಕ ಮಾರ್ಗದ ಮೂಲಕ ಜೀವವಿಮೆ ಪಾಲಿಸಿಗಳನ್ನು ಖರೀದಿಸಲು ಬಯಸುತ್ತಾರೆ. ಆನ್‌ಲೈನ್ ಬದಲಾಗಿ ನೇರವಾಗಿ ಕಂಪನಿಗಳಿಂದಲೇ ಪಾಲಿಸಿಗಳನ್ನು ಖರೀದಿಸುವ ಇಂಗಿತ ವ್ಯಕ್ತವಾಗಿದೆ. ಆನ್‌ಲೈನ್ ಪ್ರಶ್ನಾವಳಿಯನ್ನು ಸಿದ್ಧಪಡಿಸಿ ವಿವಿಧ ವರ್ಗದ ಇಂಟರ್‌ನೆಟ್ ಬಳಕೆದಾರರಿಗೆ ಕಳುಹಿಸಲಾಗಿತ್ತು. 28ರಿಂದ 35ವರ್ಷ ಮತ್ತು 45ರಿಂದ 50ವರ್ಷ ವಯೋವಾನದ ವಾರ್ಷಿಕ 5ಲಕ್ಷದಿಂದ 25ಲಕ್ಷದವರೆಗೆ ಆದಾಯ ಗಳಿಸುವ ವಾಣಿಜ್ಯೋದ್ಯಮಿಗಳು, ಸ್ವಯಂ ಉದ್ಯೋಗಿಗಳಿಗೆ ಪ್ರಶ್ನೆಗಳನ್ನು ಆನ್‌ಲೈನ್ ಮೂಲಕ ಕಳುಹಿಸಲಾಗಿತ್ತು.
ಹೇರ್ ಕಲರ್ ಕೊಂಡರೆ ಶಾಂಪೂ ಫ್ರೀ
ಇಂಡಿಕಾ 10ಮಿನಿಟ್ ಹರ್ಬಲ್ ಹೇರ್ ಕಲರ್‌ನ ಪ್ರತಿ ಖರೀದಿ ಮೇಲೆ 2 ಸ್ಯಾಚೆಟ್ ಮೀರಾ ಹೇರ್‌ಫಾರ್ ಕೇರ್ ಶಾಂಪೂವನ್ನು ಉಚಿತವಾಗಿ ನೀಡಲಾಗುತ್ತಿದೆ. ಕೇವಲ 15ರ ಬೆಲೆಗೆ ಇಂಡಿಕಾ 10ಮಿನಿಟ್ ಹರ್ಬಲ್ ಹೇರ್ ಕಲರ್ ಜತೆ ತಲಾ 2ರ 2ಸ್ಯಾಚೆಟ್ ಮೀರಾವನ್ನು ಗ್ರಾಹಕರಿಗೆ ಉಚಿತವಾಗಿ ದೊರೆಯುತ್ತಿದೆ. ತಮಿಳುನಾಡು, ಕರ್ನಾಟಕ ಹಾಗೂ ಪಾಂಡಿಚೇರಿಯಲ್ಲಿ ಎಲ್ಲಾ ರೀಟೇಲ್ ಔಟ್‌ಲೆಟ್‌ಗಳಲ್ಲಿ ವಿಶೇಷ ಕೊಡುಗೆಯಿದ್ದು ಸ್ಟಾಕ್ ಮುಗಿಯುವ ತನಕ ಆಫರ್ ಮುಂದುವರೆಯಲಿದೆ. ಇಂಡಿಕಾ 10ಮಿನಿಟ್ ಕಲರ್ ಹೇರ್ ಕಂಡೀಶನರ್ ಜತೆ ಕೇವಲ 10 ನಿಮಿಷದಲ್ಲಿ ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡಲಿದೆ. ಹೇರ್‌ಕಲರ್‌ನ್ನು ನೆಲ್ಲಿಕಾಯಿ ಮತ್ತು ಹೆನ್ನಾದಂತಹ ಗಿಡಮೂಲಿಕೆಯಿಂದ ತಯಾರಿಸಲಾಗಿದೆ.
ಥರ್ಮೋ ಫಿಷರ್‌ನಿಂದ ಗ್ರಾಹಕ ಅನುಭವಿ ಕೇಂದ್ರ
ಥರ್ಮೋ ಫಿಷರ್ ಸೈಂಟಿಫಿಕ್ ಇಂಕ್ ಸಂಸ್ಥೆ ನಗರದಲ್ಲಿ ನೂತನ ಗ್ರಾಹಕ ಅನುಭವಿ ಕೇಂದ್ರವನ್ನು (ಸಿಇಸಿ)ಪ್ರಾರಂಭಿಸಿದೆ. ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಸಾಧನೆ ಮಾಡಲು, ವಿಜ್ಞಾನಿಗಳಿಗೆ ಹೆಚ್ಚಿನ ಮುತುವರ್ಜಿ ಮತ್ತು ಪ್ರೋತ್ಸಾಹ ನೀಡಲು ಈ ಕೇಂದ್ರ ಸಹಾಯಕಾರಿ ಹಾಗೂ ಸುಮಾರು 40ಕ್ಕೂ ಅಧಿಕ ಮಂದಿ ವಿಜ್ಞಾನಿಗಳು ಕಾರ್ಯನಿರ್ವಹಿಸುವ ಕೇಂದ್ರದಲ್ಲಿ ವಿವಿಧ ರೀತಿಯ ಆವಿಷ್ಕಾರ, ಸಂಶೋಧನೆ ನಡೆಸಲು ಉಪಯುಕ್ತವಾಗಿದೆ ಎನ್ನುವುದು ಕಂಪನಿ ಹೇಳಿಕೆ.
ಜಿಕಾಂಗೆ ಪ್ರಶಸ್ತಿ
ಫ್ರಾಂಚೈಸ್ ಇಂಡಿಯಾ ಆಯೋಜಿಸಿದ್ದ ಸಮ್ಮೇಳನದಲ್ಲಿ ಜಿಕಾಂ ಗೆ ಭಾರತೀಯ ಚಿಲ್ಲರೆ ಮಾರುಕಟ್ಟೆ ಅತ್ಯುತ್ತಮ ಸುರಕ್ಷತಾ ಅಪ್ಲಿಕೇಶನ್ ಎಂಬ ಪ್ರಶಸ್ತಿಯನ್ನು ನೀಡಲಾಗಿದೆ. ಚಿಲ್ಲರೆ ಕ್ಷೇತ್ರದಲ್ಲಿ ವಹಿವಾಟು ಸಾಧನೆ ಮತ್ತು ನಾಯಕತ್ವದ ವಿಭಾಗದಲ್ಲಿ ಎಲ್ಲಾ ಬ್ರ್ಯಾಂಡ್‌ಗಳು ಮತ್ತು ಚಿಲ್ಲರೆ ಮಾರಾಟಗಾರರ ಸಾಧನೆಯನ್ನು ಪರಿಗಮಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಜಿಕಾಂ ಸಾಸ್ ಪ್ರೈವೇಟ್ ಲಿ. ಕಂಪನಿಯು ಭಾರತದಲ್ಲಿನ ಹೊಸ ತಲೆಮಾರಿನ ಸೆಕ್ಯುರಿಟಿ ಪೂರೈಕೆದಾರನಾಗಿದೆ. ಎಲೆಕ್ಟ್ರಾನಿಕ್ ಸೆಕ್ಯುರಿಸಿ ಆಸ್‌ಎ ಸರ್ವೀಸ್‌ನ್ನು ಸಂಸ್ಥೆಗಳಿಗೆ ಮತ್ತು ಹೌಸಿಂಗ್ ಸೊಸೈಟಿಗಳಿಗೆ ಪರಿಚಯಿಸಲಾಗಿದ್ದು, ಕ್ಲೌಡ್ ಆಧಾರಿತ ರಿಮೋಟ್ ಮಾನಿಟರಿಂಗ್ ವ್ಯವಸ್ಥೆ ಮತ್ತು ವಹಿವಾಟು ಬೆಂಬಲವನ್ನೂ ನೀಡಲಾಗಿದೆ. ರೀಟೇಲ್ ಶಾಪ್‌ಗಳು, ರೀಟೇಲ್ ಚೈನ್‌ಗಳು, ಬ್ಯಾಂಕ್ ಶಾಖೆಗಳು, ಎಟಿಎಂಗಳು, ಇತ್ಯಾದಿಗಳನ್ನು ಎಲೆಕ್ಟ್ರಾನಿಕ್ ಸೆಕ್ಯುರಿಟಿ ಸಲಕರಣೆಗಳನ್ನು ಬಳಸಿ ಸ್ವಯಂಚಾಲಿತವಾಗಿ ಇ ಸಾಸ್ ಮೇಲ್ವಿಚಾರಣೆ ನಡೆಸುತ್ತಿದೆ. ಜಿಕಾಂ ಕಮಾಂಡ್ ಸೆಂಟರ್‌ನ ಮೂಲಕ ಭದ್ರತೆಯನ್ನೂ ಕಲ್ಪಿಸುತ್ತದೆ.
ರಿಲಯನ್ಸ್ ಮೊಬೈಲ್ ಮಳಿಗೆ
ಆರ್‌ಕಾಂ ನಗರದಲ್ಲಿ ನಾಲ್ಕು ಹೊಸ ರಿಲಯನ್ಸ್ ಮೊಬೈಲ್ ಮಳಿಗೆಯನ್ನು ಆರಂಭಿಸಿದೆ. ಅಕ್ಟೋಬರ್ ವೇಳೆಗೆ ರಾಜ್ಯದಲ್ಲಿ 60 ಮಳಿಗೆಗಳಿಗೆ ಚಾಲನೆ ದೊರೆಯಲಿದೆ. ಆಧುನಿಕ ನೋಟವುಳ್ಳ ರಿಲಯನ್ಸ್ ಮೊಬೈಲ್ ಮಳಿಗೆಗಳು, ಜಿಎಸ್‌ಎಂ2ಜಿ ಹಾಗೂ 3ಜಿ ಮೊಬೈಲ್ ಹ್ಯಾಂಡ್‌ಸೆಟ್‌ಗಳ ಅವಶ್ಯಕತೆ ಹಾಗೂ ಸಿಡಿಎಂಎ ಆಕ್ಟಿವೇಷನ್‌ಗಳಿಗೆ ಸ್ಥಳದಲ್ಲೇ ಪರಿಹಾರಗಳನ್ನು ಒದಗಿಸುತ್ತದೆ. ಮಳಿಗೆಗಳಲ್ಲಿ ಡಾಂಗಲ್‌ಗಳು, ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಎಲ್ಲಾ ರೀತಿಯ ಕಸ್ಟಮರ್ ಕೇರ್ ಸೇವೆಗಳನ್ನು ಒದಗಿಸುತ್ತದೆ. ಹಾಗೂ ಎಲ್ಲಾ ದೂರಸಂಪರ್ಕ ಪರಿಹಾರಗಳನ್ನು ಒಂದೇ ಸೂರಿನಡಿ ಕಲ್ಪಿಸಲಾಗುತ್ತದೆ. ಎಂದು ರಿಲೈಯನ್ಸ್ ಕಮ್ಯುನಿಕೇಶನ್ ಮುಖ್ಯಸ್ಥ ಪ್ರದೀಪ್ ತಿಳಿಸಿದ್ದಾರೆ.