ವಾಣಿಜ್ಯ

ವಿಮಾ ಮುನ್ಸೂಚನೆ

ಭಾರತದಲ್ಲಿ ಬಹಳ ಕಾಲದಿಂದ ವಿಮೆಯನ್ನು ಆದಾಯ ತೆರಿಗೆ ಉಳಿಸುವ ವಿಧಾನವೆಂದೇ ಭಾವಿಸಲಾಗಿತ್ತು....

ಭಾರತದಲ್ಲಿ ಬಹಳ ಕಾಲದಿಂದ ವಿಮೆಯನ್ನು ಆದಾಯ ತೆರಿಗೆ ಉಳಿಸುವ ವಿಧಾನವೆಂದೇ ಭಾವಿಸಲಾಗಿತ್ತು. ವರ್ಷದ ಕಡೆಯವರೆಗೂ ಯಾವುದೇ ಹೂಡಿಕೆ ಮಾಡದೆ ಹೂಡಿಕೆ ಪ್ರಮಾಣ ಪತ್ರ ಸಲ್ಲಿಸುವ ಕಡೆಯ ಕೆಲವು ದಿನಗಳಲ್ಲಿ  ವಿಮಾ ಪ್ರತಿನಿಧಿಗಳಿಗೆ ಫೋನಿಸಿ, ವಿಮೆ ಖರೀದಿಸುವುದು ಸಾಮಾನ್ಯವಾಗಿತ್ತು.
ಕಡೇ ಗಳಿಗೆಯ ಧಾವಂತದಲ್ಲಿ ಕೊಂಡುಕೊಂಡ ವಿಮೆಯ ಲಾಭಗಳೇನು? ಮೊತ್ತ ಮತ್ತು ವ್ಯಾಪ್ತಿಯ ಬಗ್ಗೆ  ಆಲೋಚಿಸುವುದಿಲ್ಲ. ಯಾವುದೋ ವಿಮೆ ಕೊಂಡು ಮನಸ್ಸಿನಲ್ಲೇ ತಾನು ಸುಭದ್ರನೆಂದು ಭಾವಿಸುವುದು ಅಪಾಯಕರ. ನಮ್ಮಲ್ಲಿ ಹೆಚ್ಚಿನವರಿಗೆ ವಿಮೆ ಹೊಂದುವುದೇ ಸುರಕ್ಷೆಯ ಹೆಮ್ಮೆ. ಆದರೆ ನೆನಪಿಡಿ, ಸಾಕಷ್ಟು ಮತ್ತು ಅಸಮರ್ಪಕ ವಿಮೆ ಆಲೋಚನೆಯಿಲ್ಲದೆ ಹೊಂದುವುದು, ವಿಮೆ ಇದ್ದೂ ಇಲ್ಲದಂತೆ.
ವಿಮೆ ಎಂದರೆ ದೀರ್ಘಾವಧಿ ಸುರಕ್ಷೆ ಮತ್ತು ಉಳಿತಾಯ ಯೋಜನೆ. ವಿಮಾ ಒಪ್ಪಂದದ ಮುಖ್ಯ ಉದ್ದೇಶ ವಿಮಾದಾರರ ಕುಟುಂಬವನ್ನು ಭವಿಷ್ಯದಲ್ಲಿ ಆರ್ಥಿಕವಾಗಿ ಸುಭದ್ರಗೊಳಿಸುವುದು. ಉದಾಹರಣೆಗೆ, ಕುಟುಂಬದ ಅಧಾರ ಸ್ಥಂಭವೇ ಕಳಚಿಕೊಂಡಾಗ ವಿಮೆ ಹಣವು ಉಪಯೋಗಕ್ಕೆ ಬರುತ್ತದೆ. ಇದರಿಂದ ಕುಟುಂಬವು ಮನೆಯ ಯಜಮಾನನು ಗತಿಸಿದ ನಂತರವೂ ಉತ್ತಮ ಜೀವನ ನಿರ್ವಹಿಸಲು ಸಹಾಯವಾಗುತ್ತದೆ. ಆದ್ದರಿಂದ ಕುಟುಂಬದಲ್ಲಿ ಆದಾಯ ಗಳಿಸುವ ಪ್ರತೀ ಸದಸ್ಯನೂ ಅವಲಂಬಿತರನ್ನು ಸೇರಿಸಿ ಸಾಕಷ್ಟು ವಿಮೆ ಹೊಂದಬೇಕು. ಭಾರತದಲ್ಲಿ ಇದು ಕಷ್ಟವಾದರೂ ಕನಿಷ್ಠ ಕೆಲವು ಸುರಕ್ಷಾ ಯೋಜನೆಗಳನ್ನು ಹೊಂದಿರಬೇಕು .
ಸುರಕ್ಷಾ ಯೋಜನೆಗಳನ್ನು ಠೇವಣಿ ಯೋಜನೆಯೆಂದೂ ಹೇಳುತ್ತಾರೆ. ಇದು ಮಾರುಕಟ್ಟೆಯಲ್ಲಿರುವ ಸರಳ, ಕಡಿಮೆ ವೆಚ್ಚದ ವಿಮೆ. ಇದರಲ್ಲಿ ಕಡಿಮೆ ಕಂತುಗಳಲ್ಲೂ ಹೆಚ್ಚಿನ ಹಣ ಪಡೆಯಬಹುದು. ಇದರರ್ಥ ಠೇವಣಿಯ ಅವಧಿ ಮುಗಿಯುವಾಗ ವ್ಯಕ್ತಿ ಜೀವಂತವಾಗಿದ್ದರೆ, ಹಣ ಹಿಂಪಡೆಯಲು ಸಾಧ್ಯವಿಲ್ಲ. ಆದರೆ ವಿಮೆ ಮಾಡಿದ ವ್ಯಕ್ತಿಯ ನಿಧನದ ನಂತರಕ್ಕೆ ಹಿಂಪಡೆಯಬಹುದು.
ಇನ್ನು ವಿಮೆ ಖರೀದಿಸಲು ನಿರ್ಧರಿಸಿದ ನಂತರ ನಮಗೆ ಎಷ್ಟು ವಿಮೆಗಳು ಬೇಕಾಗಬಹುದು ಎನ್ನುವುದು ಊಹಿತ ಪ್ರಶ್ನೆ. ಅನೇಕ ಅಂಶಗಳನ್ನು ಪರಿಗಣಿಸಿ ವಿಮಾ ಪ್ರಮಾಣವನ್ನು ನಿರ್ಧರಿಸಬಹುದು. ವಿಮೆಯನ್ನು ಮಧ್ಯವರ್ತಿಗಳು ಅಥವಾ ನೇರವಾಗಿ ಇಂಟರ್‌ನೆಟ್ ಮೂಲಕ ಖರೀದಿಸಬಹುದು. ಹಲವು ಕಂಪನಿಗಳು ವಿಮಾ ಮೊತ್ತದೊಂದಿಗೆ ವಿವಿಧ ರೀತಿಯ ಉಪ-ಉಡುಗೊರೆಗಳನ್ನು ನೀಡುವುದರಿಂದ ಇಂಟರ್‌ನೆಟ್‌ನಲ್ಲಿ ಖರೀದಿಸುವುದರಿಂದ ಹೆಚ್ಚು ಲಾಭವಿದೆ.
ಒಟ್ಟಿನಲ್ಲಿ ನಿಮ್ಮ ಕುಟುಂಬದ ಅಗತ್ಯತೆಯನ್ನು ಅರಿತು ವ್ಯಾಪ್ತಿಯನ್ನು ನಿರ್ಧರಿಸಿ  ಸಾಕಷ್ಟು ವಿಮೆ ಮಾಡಿಸಿಕೊಳ್ಳುವುದು ಒಳಿತು. ಯಾಕೆಂದರೆ ಅಸಮರ್ಪಕ ವಿಮೆಯು ಕುಟ್ಟುಬಕ್ಕೆ ಸಹಾಯವಾಗದಿದ್ದರೆ ವಿಮೆ ಇದ್ದೂ ಇಲ್ಲದಂತೆ. <
(ಲೇಖಕರು ಏಜಾನ್ ರೆಲಿಗೇರ್ ಲೈಫ್ ಇನ್ಷೂರೆನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ)

- ಯತೀಶ್ ಶ್ರೀವಾಸ್ತವ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!