ಜೀವನದಲ್ಲಿ ಆರ್ಥಿಕ ಭದ್ರತೆ ಬಹುಮುಖ್ಯ. ಯಾವುದೇ ವ್ಯಕ್ತಿಯಾದರೂ ಆರ್ಥಿಕವಾಗಿ ಬಲವಾಗಿರಬೇಕೆಂದು ಬಯಸದೇ ಇರಲಾರ. ಇಂದಿನದ್ದು ಇಂದಿಗೆ, ನಾಳೆ ವಿಚಾರ ಮಾಡೋಣ ಎಂಬ ಮನೋಭಾವ ಉಳ್ಳವರು ತೀರಾ ವಿರಳ. ಜೀವನದ ಸಂಕಷ್ಟವನ್ನು ಅರಿತವರೇ ಹೆಚ್ಚು. ಹೀಗಾಗಿ ಅಚಾನಕ್ ಆಗಿ ಕಷ್ಟ ಎದುರಾದರೆ? ಅಥವಾ ತಾನೇ ಇಲ್ಲವಾದರೆ? ತನ್ನ ಕುಟುಂಬದ ಕಥೆ ಏನು ಎಂಬ ಬಗ್ಗೆ ಚಿಂತಿಸಿ ಬಹುತೇಕ ಮಂದಿ ಲೈಫ್ ಇನ್ಷೂರೆನ್ಸ್ (ಜೀವ ವಿಮೆ) ಮಾಡಿಸುತ್ತಾರೆ.
ಈಗಂತೂ ಕುಟುಂಬಗಳು ಚಿಕ್ಕ ಚಿಕ್ಕದಾಗಿ ಒಡೆದು ಹೋಗುತ್ತಿವೆ. ದೊಡ್ಡ ಸಂಸಾರಗಳು ಕಾಣದಾಗಿವೆ. ಹೀಗಾಗಿ ತನ್ನ ಚಿಕ್ಕ ಕುಟುಂಬಕ್ಕೆ ತಾನೇ ಆಸರೆ, ತನ್ನ ಜೀವ ಹೋದರೆ ನೋಡಲು ಯಾರೂ ಬರುವುದಿಲ್ಲ ಎಂಬುದು ಯಜಮಾನನಿಗೆ ಚೆನ್ನಾಗಿಯೇ ತಿಳಿದಿರುತ್ತದೆ. ಈ ಭಯವೇ ಜೀವವಿಮೆಯನ್ನು ಮಾಡಿಸಿಡುವಂತೆ ಮಾಡುತ್ತದೆ ಕೂಡಾ.
ದೀರ್ಘಕಾಲೀನ ವಿಮೆ ಮಾಡಿಸಿಕೊಂಡರೆ ತುಂಬಾ ಒಳ್ಳೆಯದು. ಆದರೆ, ಇಲ್ಲಿ ನೆನಪಿಡಬೇಕಾದ ಒಂದು ಅಂಶವೆಂದರೆ ಮಾರುಕಟ್ಟೆಯಲ್ಲಾಗುವ ದರಗಳ ಏರಿಳಿತವು ನಿಮ್ಮೆ ಪಾಲಿಸಿ ಮೇಲೆ ಯಾವುದೇ ಪರಿಣಾಮ ಬೀರಬಾರದು. ಅಂಥ ಪಾಲಿಸಿಯನ್ನು ನೀವು ಮಾಡಿಸಿಕೊಳ್ಳಬೇಕು. ಉದಾಹರಣೆಗೆ ದೀರ್ಘ ಕಾಲದ ಅಂದರೆ 10 ವರ್ಷದ ಯೂನಿಟ್ ಲಿಂಕ್‌ನಂಥ ಪಾಲಿಸಿಗಳನ್ನು ತೆಗೆದುಕೊಂಡಿದ್ದೀರ ಎಂದಿಟ್ಟುಕೊಳ್ಳೋಣ. ಆ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ದರ ಕುಸಿತವಾಗಿದ್ದರೆ ಮುಗಿದೇ ಹೋಯಿತು. ನಿಮ್ಮ ಲಾಭ ಹೋಗಲಿ, ಅಸಲು ಬರುವುದೂ ಕಷ್ಟ ಎಂಬಂತೆ ಆಗುತ್ತದೆ. ಹಾಗಾಗಿ ಈ ಬಗ್ಗೆ ಎಚ್ಚರವಹಿಸುವುದು ಉತ್ತಮ. ಇದಕ್ಕಾಗಿ ಮಾರುಕಟ್ಟೆ ಏರಿಳಿತಗಳಿಗೆ ಸಂಬಂಧಿಸದ ವಿಮೆ ಪಾಲಿಸಿ ಮಾಡಿಸುವುದು ಉತ್ತಮ.
ಈಗ ಹಲವು ವಿಮೆ ಕಂಪನಿಗಳು ಎರಡು ರೀತಿಯ ಉಪಯೋಗವಾಗುವಂಥ ಪಾಲಿಸಿ ಹೊರ ತಂದಿವೆ. ಅಂದರೆ ಸೂಕ್ತವಾದ ಹಣಕಾಸು ಭದ್ರತೆ ಮತ್ತು ನಿವೃತ್ತಿ ನಂತರ ಖಚಿತ ಹಣಪಾವತಿ ಇರುವಂಥ ವಿಮೆ ಪಾಲಿಸಿ ಮಾಡಿಸಿಕೊಳ್ಳಬೇಕು. ಇಂಥ ಪಾಲಿಸಿಯನ್ನು ಬಜಾಜ್ ಅಲೈಯನ್ಸ್ ಕಂಪನಿಯೂ ಹೊರತಂದಿದೆ. 10, 15 ಮತ್ತು 20 ವರ್ಷಗಳ ಪಾವತಿ ಅವಧಿ ಹೊಂದಿರುವಂಥ ಪಾಲಿಸಿ ಮಾಡಿಸುವುದು ಭವಿಷ್ಯಕ್ಕೆ ಉತ್ತಮ. ಒಂದು ವೇಳೆ ವಿಮಾ ಪಾವತಿದಾರ ಅರ್ಧ ಕಂತು ತುಂಬಿದಾಗ ಮೃತಪಟ್ಟರೆ, ಅವರ ಕುಟುಂಬದವರಿಗೆ ಪೂರ್ಣಾವಧಿಯ ಮೊತ್ತವೂ ತಲುಪಲಿದೆ. ಇದರಿಂದ ಕುಟುಂಬದಲ್ಲಿ ಯಾವುದಾದರೂ ಸಾಲ ಮಾಡಿಕೊಂಡಿದ್ದರೆ ಅಥವಾ ಇನ್ನಾವುದೋ ಬದ್ಧತೆಗೆ ಒಳಗಾಗಿದ್ದರೆ ಈ ಸಂದರ್ಭದಲ್ಲಿ ಬರುವ ಹಣದಿಂದ ಅನುಕೂಲವಾಗುತ್ತದೆ.
(ಲೇಖಕರು: ಬಜಾಜ್ ಅಲೆಯನ್ಸ್ ಲೈಫ್ ಇನ್ಶೂರೆನ್ಸ್‌ನ ಮಾರುಕಟ್ಟೆ ವ್ಯವಹಾರ ವಿಭಾಗದ ಮುಖ್ಯಸ್ಥ)
= ರಿತುರಾಜ್ ಭಟ್ಟಾಚಾರ್ಯ