ವಾಣಿಜ್ಯ

ಇನ್ನು ಎಸ್ಎಂಎಸ್ ಚೆಕ್ ಮಾಡ್ಕೊಳ್ಳಿ

Mainashree

- ವಹಿವಾಟಿಗೆ ಎಸ್ಎಂಎಸ್ ರವಾನೆ ಕಡ್ಡಾಯ

ಮುಂಬೈ:
ಇನ್ನು ಮುಂದೆ ಬ್ಯಾಂಕುಗಳಲ್ಲಿ ಚೆಕ್ ವಹಿವಾಟು ನಡೆಸಿದೊಡನೆ ಹಣ ಪಾವತಿಸಿದವನು, ಪಡೆದುಕೊಂಡವನು ಇಬ್ಬರಿಗೂ ಎಸ್ಸೆಮ್ಮೆಸ್ ಸಂದೇಶ ರವಾನೆಯಾಗಲಿದೆ.

ಚೆಕ್‌ಗೆ ಸಂಬಂಧಿಸಿದ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಇಂಥ ಹೊಸ ನಿಯಮ ಜಾರಿ ಮಾಡಿದೆ. ಚೆಕ್ ವಹಿವಾಟು ಆದೊಡನೆ ಇಬ್ಬರಿಗೂ ಎಸ್ಸೆಮ್ಮೆಸ್ ಸಂದೇಶ ಕಳುಹಿಸಬೇಕಾದ್ದು ಕಡ್ಡಾಯಗೊಳಿಸಿ ಆರ್‌ಬಿಐ ಆದೇಶ ಹೊರಡಿಸಿದೆ.

ದೃಢಪಡಿಸಿ: ಅತ್ಯಧಿಕ ಮೌಲ್ಯದ ಚೆಕ್ ಕ್ಲಿಯರೆನ್ಸ್‌ಗೆ ಬಂದಾಗ ಅಥವಾ ಯಾವುದಾದರೂ ಚೆಕ್ ಬಗ್ಗೆ ಅನುಮಾನ ವ್ಯಕ್ತವಾದಾಗ ಬ್ಯಾಂಕುಗಳು ತಕ್ಷಣ ಆಯಾ ಗ್ರಾಹಕನಿಗೆ ದೂರವಾಣಿ ಕರೆ ಮಾಡಿ ಈ ಬಗ್ಗೆ ದೃಢಪಡಿಸಬೇಕು ಎಂದೂ ಆರ್‌ಬಿಐ ಸುತ್ತೋಲೆಯಲ್ಲಿ ಸೂಚಿಸಿದೆ.

ಈವರೆಗೆ ಕಾರ್ಡ್‌ನ ವಹಿವಾಟುಗಳಿಗೆ ಮಾತ್ರ ಎಸ್ಸೆಮ್ಮೆಸ್ ಆರ್‌ಬಿಐ ಸುತ್ತೋಲೆಯಲ್ಲಿ ಸೂಚಿಸಿದೆ.

ಈವರೆಗೆ ಕಾರ್ಡ್‌ನ ವಹಿವಾಟುಗಳಿಗೆ ಮಾತ್ರ ಎಸ್ಸೆಮ್ಮೆಸ್ ಅಲರ್ಟ್ ಕಡ್ಡಾಯವಾಗಿತ್ತು. ಇನ್ನು ಚೆಕ್‌ಗಳಿಗೂ ಇದು ಅನ್ವಯ.

ಯಾವುದೇ ಕಾರಣಕ್ಕೂ ಗ್ರಾಹಕರ ಹೆಸರು, ಖಾತೆ ಸಂಖ್ಯೆ, ಸಹಿ, ಚೆಕ್‌ನ ಸೀರಿಯಲ್ ನಂಬರ್ ಮತ್ತಿತರ ರಹಸ್ಯ ವಿಚಾರಗಳೊಂದಿಗೆ ರಾಜಿ ಮಾಡಿಕೊಳ್ಳಲೇ ಬಾರದು ಎಂದೂ ಆರ್‌ಬಿಐ ತಿಳಿಸಿದೆ.

ಹೆಚ್ಚಿನ ಭದ್ರತೆ

  • ರು.2 ಲಕ್ಷಕ್ಕಿಂತ ಅಧಿಕ ಮೌಲ್ಯದ ಎಲ್ಲ ಚೆಕ್‌ಗಳನ್ನು ಅಲ್ಟ್ರಾವಯಲೆಟ್(ಅತಿನೇರಳೆ) ದೀಪದಿಂದ ಸ್ಕ್ಯಾನ್ ಮಾಡಬೇಕು. ಈ ಮೂಲಕ ಚೆಕ್‌ಗಳನ್ನು ಅಕ್ರಮವಾಗಿ ತಿದ್ದಲಾಗಿದೆಯೇ ಎಂಬುದನ್ನು ಪರೀಕ್ಷಿಸಬೇಕು.
  • ರು.5 ಲಕ್ಷಕ್ಕಿಂತ ಅಧಿಕ ಮೌಲ್ಯದ ಚೆಕ್‌ಗಳನ್ನು ಹಲವು-ಮಟ್ಟದಲ್ಲಿ ಪರೀಕ್ಷಿಸಬೇಕು
  • ಚೆಕ್ ಕ್ಲಿಯರ್ ಮಾಡುವ ಸಿಬ್ಬಂದಿ, ಸರಕರಣೆಗಳ ಮೇಲೆ ಹೆಚ್ಚಿನ ನಿಗಾ ಇಡಬೇಕು.
SCROLL FOR NEXT