ವಾಣಿಜ್ಯ

'ಮೇಕ್ ಇನ್ ಇಂಡಿಯಾ' ಪ್ರಚಾರ ಸರಿಯಾದ ನಡೆ: ಇಂದ್ರಾ ನೂಯಿ

Guruprasad Narayana

ಕೋಲ್ಕತ್ತ: ಉತ್ಪಾದನಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲು ಹಾಗು ಉದ್ಯೋಗಗಳನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ 'ಮೇಕ್ ಇನ್ ಇಂಡಿಯಾ' ಕರೆ ಸಹಕಾರಿಯಾಗಲಿದೆ ಎಂದು ಪೆಪ್ಸಿಕೋ ಅಧ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರ ಇಂದ್ರಾ ನೂಯಿ ಶನಿವಾರ ಹೇಳಿದ್ದಾರೆ.

"ಪ್ರಧಾನಿ 'ಮೇಕ್ ಇನ್ ಇಂಡಿಯಾ' ಕರೆ ಕೊಟ್ಟಿರುವುದು ಸರಿಯಾಗಿದೆ ಏಕೆಂದರೆ ನಾವು ಉತ್ಪಾದನಾ ಕ್ಷೇತ್ರದಲ್ಲಿ ತಳಪಾಯ ಹಾಕುತ್ತಿದ್ದೇವೆ ಹಾಗೆಯೆ ಉದ್ಯೋಗಗಳು ಹೆಚ್ಚಲಿವೆ" ಎಂದು ಐಐಎಮ್ ಕಲ್ಕತ್ತಾದ ಘಟಿಕೋತ್ಸವದಲ್ಲಿ ನೂಯಿ ವರದಿಗಾರರಿಗೆ ತಿಳಿಸಿದ್ದಾರೆ.

ಭಾರತದಲ್ಲಿ ಪೆಪ್ಸಿಕೋ ಯೋಜನೆಗಳ ಬಗ್ಗೆ ತಿಳಿಸಿದ ಅವರು "ಭಾರತದಲ್ಲಿ ನಾವು ಮಾರುವ ಉತ್ಪನ್ನಗಳನ್ನು ಇಲ್ಲೇ ಉತ್ಪಾದಿಸುತ್ತೇವೆ. ನೆನ್ನೆ ಆಂಧ್ರಪ್ರದೇಶದಲ್ಲಿ ದೇಶದ ಅತಿ ದೊಡ್ಡ ಪಾನೀಯ ಉತ್ಪಾದನಾ ಕೇಂದ್ರವನ್ನು ಉದ್ಘಾಟಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

"ನೆನ್ನೆ ಶ್ರೀ ನಗರದಲ್ಲಿ ದೇಶದ ಅತಿ ದೊಡ್ಡ ಪಾನೀಯ ಉತ್ಪಾದನಾ ಕೇಂದ್ರದ ಮೊದಲ ಘಟಕವನ್ನು ಉದ್ಘಾಟಿಸಿದ್ದೇವೆ. ಆಂದ್ರಪ್ರದೇಶ ಸರ್ಕಾರ ನಮಗೆ ಸಂಪೂರ್ಣ ಸಹಕಾರ ನೀಡಿದೆ ನಮಗೆ ಸರಿಯಾದ ಸಮಯಕ್ಕೆ ಅನುಮತಿ ನೀಡಿ, ಮೂಲಸೌಕರ್ಯಗಳನ್ನು ಚಂದ್ರಬಾಬು ನಾಯ್ಡು ಒದಗಿಸಿಕೊಟ್ಟಿದ್ದಾರೆ.. ಅಲ್ಲಿ ವಾತಾವರಣ ಆತ್ಮೀಯವಾಗಿದೆ" ಎಂದು ಅವರು ತಿಳಿಸಿದ್ದಾರೆ.

ಪೆಪ್ಸಿಕೋದ ೨೦೨೦ರ ಗುರಿಯ ಬಗ್ಗೆ ವಿವರಿಸಿದ ಅವರು ದೇಶಲ್ಲಿ ೩೩ಸಾವಿರ ಕೋಟಿ ಹೂಡಿಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

SCROLL FOR NEXT