ನವದೆಹಲಿ: ಜಿಎಸ್‍ಟಿ (ಸರಕು ಮತ್ತು ಸೇವಾ ತೆರಿಗೆ) ತಿದ್ದುಪಡಿ ವಿಧೇಯಕ ಶುಕ್ರವಾರ ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ.
ಈ ವಿಧೇಯಕವನ್ನು ಶುಕ್ರವಾರ ಮಂಡಿಸಿ, ಸೋಮವಾರ ಅಂಗೀಕಾರ ಪಡೆಯುವುದು ಕೇಂದ್ರದ ಉದ್ದೇಶ. ಮಂಡನೆ ವೇಳೆ ಎಲ್ಲ ಸದಸ್ಯರೂ ಹಾಜರಿರುವಂತೆ ಬಿಜೆಪಿ ವಿಪ್ ಜಾರಿ ಮಾಡಿದೆ.
ವಿತ್ತ ಸಚಿವ ಅರುಣ್ ಜೇಟ್ಲಿ ಬುಧವಾರವಷ್ಟೇ ರಾಜ್ಯಗಳ ಹಣಕಾಸು ಸಚಿವರೊಂದಿಗೆ ಜಿಎಸ್‍ಟಿ ಬಗ್ಗೆ ಮಾತುಕತೆ ನಡೆಸಿದ್ದರು. ತಮಿಳುನಾಡು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳು ವಿಧೇಯಕಕ್ಕೆ ಸಮ್ಮತಿಸಿವೆ.