ವಾಣಿಜ್ಯ

ಆರ್‌ಬಿಐ ನೀತಿ ದರದಲ್ಲಿ ಬದಲಾವಣೆ ಇಲ್ಲ: ರಘುರಾಮ್ ರಾಜನ್

Srinivas Rao BV

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ  ನೀತಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಆರ್.ಬಿ.ಐ ಗೌರ್ನರ್ ರಘುರಾಮ್ ರಾಜನ್ ತಿಳಿಸಿದ್ದಾರೆ. ಹಣದುಬ್ಬರ ದರ ಏರಿಕೆಯು ಮಟ್ಟದಲ್ಲೇ ಸಾಗುತ್ತಿದ್ದು ಕಳೆದ ಬಾರಿಯ ನೀತಿ ದರ ಕಡಿತದ ಲಾಭ ಬ್ಯಾಂಕ್ ಗಳಿಗೆ ಇನ್ನಷ್ಟೇ ತಲುಪಬೇಕಿದೆ ಎಂದು ರಾಜನ್ ತಿಳಿಸಿದ್ದಾರೆ.
2015 ರ ಸಾಲಿನಲ್ಲಿ ಒಟ್ಟು 3 ಬಾರಿ ನೀತಿ ದರಗಳನ್ನು ಕಡಿತಗೊಳಿಸಿದ್ದ ಆರ್.ಬಿ.ಐ,  ಪ್ರತಿ ಬಾರಿ 25 ಬೇಸಿಸ್‌ ಪಾಯಿಂಟ್‌ನಷ್ಟು ತಗ್ಗಿಸಿತ್ತು. ಆರ್ಥಿಕ ದೂರದೃಷ್ಟಿಯಿಂದ ದರ ಇಳಿಕೆ ಕ್ರಮವನ್ನು ಜೂನ್ ನಿಂದ ಕೈಗೊಳ್ಳಲಾಗಿದ್ದು ಪ್ರಸ್ತುತದ ಹಂತದಲ್ಲಿ, ಹಣಕಾಸು ನೀತಿಯನ್ನು ಬದಲಾವಣೆ ಮಾಡದೆ ಇರುವುದು ಸೂಕ್ತ ಎಂದು ಆರ್.ಬಿ.ಐ ನ ಪ್ರಸಕ್ತ ಸಾಲಿನ ತೃತೀಯಾರ್ಧ ವಾರ್ಷಿಕ ನೀತಿಯನ್ನು ಪ್ರಕಟಿಸಿದ ರಾಜನ್ ಅಭಿಪ್ರಾಯಪಟ್ಟಿದ್ದಾರೆ.
ಆರ್.ಬಿ.ಐ ಇನ್ನಿತರ ವಾಣಿಜ್ಯ ಬ್ಯಾಂಕ್ ಗಳಿಗೆ ನಿಡುವ ಸಾಲದ ದರ (ರೆಪೋ) ದರದಲ್ಲಿ ಯಾವುದೇ ಬದಲಾವಣೆಯಾಗಾದೆ ಶೇ.7 .25 ರಲ್ಲೇ ಮುಂದುವರೆದಿದೆ. ಶೇ.4 ರಷ್ಟಿದ್ದ ನಗದು ಮೀಸಲು ಅನುಪಾತ (ಕ್ಯಾಷ್ ರಿಸರ್ವ್ ರೇಷಿಯೋ- ಸಿಆರ್ ಆರ್) ವೂ ಯಥಾ ಸ್ಥಿತಿಯಲ್ಲೇ ಮುಂದುವರೆದಿದೆ.
ವಿತ್ತೀಯ ನೀತಿ ಅಂಶಗಳ ಬಗ್ಗೆ ಇರುವ ಅನಿಶ್ಚಿತತೆಗಳನ್ನು ಮುಂಬರುವ ತಿಂಗಳುಗಳಲ್ಲಿ ಪರಿಹರಿಸಲಾಗುವುದು ಎಂದು ರಘುರಾಮ್ ರಾಜನ್ ಭರವಸೆ ನೀಡಿದ್ದಾರೆ.

SCROLL FOR NEXT