ವಾಣಿಜ್ಯ

ಕಾರ್ಪ್‌ಬ್ಯಾಂಕ್ ಲಾಭ ಇಳಿಮುಖ

Lingaraj Badiger

ನವದೆಹಲಿ: ಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಕಾರ್ಪೊರೇಷನ್ ಬ್ಯಾಂಕ್, 204.26 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ.

ಕಾರ್ಪೊರೇಷನ್ ಬ್ಯಾಂಕ್ ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ್ದ 231.47 ಕೋಟಿಗೆ ಹೋಲಿಸಿದರೆ ಶೇ.11.75ರಷ್ಟು ಇಳಿಮುಖ ಕಂಡಿದೆ.

ವಾಪಾಸಾತಿಯಾಗದ ಸಾಲಗಳನ್ನು ಕೈ ಬಿಟ್ಟಿರುವುದು ಮತ್ತು ಅನುತ್ಪಾದಕ ಆಸ್ತಿ ಪ್ರಮಾಣ ಹೆಚ್ಚಿದ್ದರಿಂದ ಲಾಭ ಇಳಿಮುಖ ಕಂಡಿದೆ ಎಂದು ಬ್ಯಾಂಕ್ ಹೇಳಿದೆ.

ಹಾಗಿದ್ದರೂ ಬ್ಯಾಂಕ್‌ನ ಒಟ್ಟಾರೆ ಆದಾಯ ಶೇ.23ರಷ್ಟು ಏರಿಕೆ ಕಂಡಿದ್ದು, 5,334.60 ಕೋಟಿ ರುಪಾಯಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 458.90 ಕೋಟಿ ಇದ್ದದ್ದು ಈ ವರ್ಷ 621.39 ಕೋಟಿಗೆ ಹೆಚ್ಚಿದೆ.

ಇದೇ ಸಂದರ್ಭದಲ್ಲಿ ಅನುತ್ಪಾದಕ ಆಸ್ತಿ ಪ್ರಮಾಣ ಶೇ. 3.96ರಿಂದ ಶೇ. 5.43ಕ್ಕೆ ಏರಿಕೆ ಕಂಡಿದೆ. ಈ ಬೆಳವಣಿಗೆಗಳು ಬ್ಯಾಂಕ್ ಲಾಭ ಕುಸಿಯಲು ಕಾರಣವಾಗಿದೆ.

SCROLL FOR NEXT