ವಾಣಿಜ್ಯ

ಬಿಎಸ್ಎನ್ಎಲ್ ಕೈಬಿಟ್ರು 2 ಕೋಟಿ ಮಂದಿ!

Srinivas Rao BV

ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್ಎನ್ಎಲ್ ಕಳೆದ ವಿತ್ತೀಯ ವರ್ಷದಲ್ಲಿ ಕಳೆದುಕೊಂಡ ಗ್ರಾಹಕರ ಸಂಖ್ಯೆ ಎಷ್ಟು ಗೊತ್ತಾ? ಬರೋಬ್ಬರಿ ಎರಡು ಕೋಟಿ

ಖಾಸಗಿ ದೂರಸಂಪರ್ಕ ಆಪರೇಟರ್ ಗಳು ನಡೆಸಿದ ಭಾರಿ ಮಾರ್ಕೆಟಿಂಗ್ ಗೆ ಪೈಪೋಟಿ ನೀಡಲು ಸಾಧ್ಯವಾಗದೇ ಬಿಎಸ್ಎನ್ಎಲ್ ಸೋತಿದೆ. ಕವರೇಜ್ ಹಾಗೂ ಸೇವೆಯ ಗುಣಮಟ್ಟವೂ ಗ್ರಾಹಕರ ಸಂಖ್ಯೆ ಕಡಿಮೆಯಾಗಲು ಮತ್ತೊಂದು ಕಾರಣ.

2014 ರ ಮಾರ್ಚ್ ನಿಂದ 2015 ರ ಮಾರ್ಚ್ ವರೆಗೆ ಬಿಎಸ್ಎನ್ಎಲ್ ಸುಮಾರು 1 .78 ಕೋಟಿ ಮೊಬೈಲ್ ಮತ್ತು 20 ಲಕ್ಷ ಲ್ಯಾಂಡ್ ಲೈನ್ ಗ್ರಾಹಕರನ್ನು ಕಳೆದುಕೊಂಡಿದೆ ಎಂದು ದೂರಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರಣವೇನು?

2008 - 12 ಅವಧಿಯಲ್ಲಿ ನೆಟ್ವರ್ಕ್ ಮೇಲ್ದರ್ಜೆಗೇರಿಸುವಲ್ಲಿ ಬಿಎಸ್ಎನ್ಎಲ್ ವಿಫಲ

ಮೊಬೈಲ್ ನೆಟ್ವರ್ಕ್ ಕವರೇಜ್ ಸಾಮಾರ್ಥ್ಯ ಮತ್ತಿತರ ಸಮಸ್ಯೆಗಳು

ಹೆಚ್ಚಿವನರು ಮೊಬೈಲ್ ನತ್ತ ಆಕರ್ಷಿತರಾದ ಕಾರಣ ಸ್ಥಿರ ದೂರವಾಣಿ ಸಂಪರ್ಕ ಕಡಿತ

ಸೇವಾ ಗುಣಮಟ್ಟದ ಸಮಸ್ಯೆ, ಗ್ರಾಹಕರ ಕೊರತೆ ನಿವಾರಿಸುವಲ್ಲಿ ಸಂಸ್ಥೆ ತೋರಿದ ನಿರ್ಲಕ್ಷ್ಯ ಗ್ರಾಹಕರನ್ನು ಕಳೆದುಕೊಳ್ಳಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

SCROLL FOR NEXT