ವಾಣಿಜ್ಯ

ಅನಿಯಮಿತ ಮಳೆ: ಧಾನ್ಯ ಉತ್ಪಾದನೆ ಇಳಿಮುಖ

Rashmi Kasaragodu

ನವದೆಹಲಿ: ಅನಿಯಮಿತ ಮಳೆಯಿಂದಾಗಿ ಕಳೆದ ಬೆಳೆ ವರ್ಷದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಶೇ.4.7ರಷ್ಟು ಇಳಿಮುಖ ಕಾಣುವ ನಿರೀಕ್ಷೆಗಳಿವೆ. ಕಳೆದ ವರ್ಷದಲ್ಲಿ ಮಳೆ ಕೊರತೆ ಮತ್ತು ಈ ವರ್ಷದ ಆರಂಭದಲ್ಲಿ ಅಕಾಲಿಕ ಮಳೆಯಾಗಿದ್ದರಿಂದ ಬೆಳೆ ನಾಶವಾಗಿದೆ.ಜೂನ್ ಅಂತ್ಯಕ್ಕೆ ದೇಶದ ಪ್ರಮುಖ ಬೆಳೆಗಳಾದ ಬತ್ತ, ಗೋದಿ, ಬೇಳೆ
ಕಾಳು, ಖಾದ್ಯ ತೈಲ ಬೀಜ, ಆಹಾರ ಧಾನ್ಯಗಳ ಉತ್ಪಾದನೆ 252.68 ದಶಲಕ್ಷ ಟನ್ ಇರಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಉತ್ಪಾದನೆಯಾಗಿದ್ದ 265.04 ದಶಲಕ್ಷ
ಟನ್‍ಗಳಿಗೆ ಹೋಲಿಸಿದರೆ ಇಳಿಮುಖ ಕಾಣಲಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳು ಹೇಳಿವೆ. ಕಳೆದ ವರ್ಷದ ಜೂನ್-ಸೆಪ್ಟೆಂಬರ್ ನಡುವಿನ ಮುಂಗಾರು ಅವಧಿಯಲ್ಲಿ ಮಳೆ ಪ್ರಮಾಣ ಶೇ.12ರಷ್ಟು ಕಡಿಮೆಯಾಗಿದೆ. ಈ ವರ್ಷದ ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ಅನಿರೀಕ್ಷಿತವಾಗಿ ಭಾರಿ ಮಳೆಯಾಯಿತು. ಇದರಿಂದ ಅಂದಾಜು 18.9 ದಶಲಕ್ಷ ಹೆಕ್ಟೇರ್ ನಲ್ಲಿನ ಬೆಳೆ ನಾಶವಾಯಿತು ಎಂದು ವರದಿಗಳು ವಿವರಿಸಿವೆ. ಅಕ್ಕಿ ಉತ್ಪಾದನೆ ಶೇ.1.7, ಗೋಧಿ ಶೇ.7.2, ಬೇಳೆ ಕಾಳು ಉತ್ಪಾದನೆ ಇಳಿಮುಖ ಕಾಣಲಿದೆ. ಖಾದ್ಯ ತೈಲ ಬೀಜ ಉತ್ಪಾದನೆ ಸಹ ಶೇ.6.07ರಷ್ಟುಇಳಿಯಲಿದೆ ಎಂದು ವರದಿ ವಿವರಿಸಿದೆ.

SCROLL FOR NEXT