ರು.2 ವರ್ಷಗಳಲ್ಲೇ ಕನಿಷ್ಠ
ಸೋಮವಾರದ ವಹಿವಾಟಿನಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಇನ್ನೂ 21 ಪೈಸೆ ಕುಸಿದು 65.21ಕ್ಕೆ ಕುಸಿದಿದೆ. ದೇಶೀಯ ಷೇರು...
ಮುಂಬೈ: ಸೋಮವಾರದ ವಹಿವಾಟಿನಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಇನ್ನೂ 21 ಪೈಸೆ ಕುಸಿದು 65.21ಕ್ಕೆ ಕುಸಿದಿದೆ. ದೇಶೀಯ ಷೇರು ಪೇಟೆ ದುರ್ಬಲವಾಗಿದ್ದರಿಂದ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಏರಿಕೆ ಕಂಡಿದ್ದರಿಂದ ಆಮದು ಕಂಪನಿಗಳು ಹೆಚ್ಚಿನ ಡಾಲರ್ ಖರೀದಿಯಲ್ಲಿ ತೊಡಗಿದ್ದರು. ಇದರಿಂದ ರುಪಾಯಿ ಮೌಲ್ಯ ಕಳೆದ ಎರಡುವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿಯಿತು. 65.21ಕ್ಕೆ ವಹಿವಾಟು ಮುಗಿಸುವ ಮುನ್ನ 65.12ರ ನಡುವೆ ವಹಿವಾಟು ಏರಿಳಿತ ಕಂಡಿತ್ತು. ಸೋಮವಾರ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಸಹ ನಷ್ಟದೊಂದಿಗೆ ದಿನದಂತ್ಯ ಕಂಡಿದೆ. ಕಳೆದ ಗುರುವಾರ
ರು. ಮೌಲ್ಯ 65.10ಕ್ಕೆ ಕುಸಿದಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.