ನವದೆಹಲಿ: ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಬಂಡವಾಳ ಮುಗ್ಗಟ್ಟನ್ನು ನಿಭಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಪ್ರಸಕ್ತ ಹಣಕಾಸು ಸಾಲಿನಲ್ಲಿ ರು. 1 ಲಕ್ಷ ಕೋಟಿ ಸಾಲ ಯೋಜನೆ ಜಾರಿಗೆ ತರುವ ಚಿಂತನೆ ನಡೆಸಿದೆ. ಮುದ್ರ ಯೋಜನೆ ಅಡಿಯಲ್ಲಿ ಸಾಲ ವಿತರಿಸಲು ಒಂದು ತಿಂಗಳ ಕಾಲ ಸಾಲ ಮೇಳ ಆಯೋಜಿಸಲಾಗುವುದು ಎಂದು ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ಹಷ್ಮುಖ್ ಅಧಿಯಾ ತಿಳಿಸಿದ್ದಾರೆ. ಸಾರ್ವಜನಿಕ ವಲಯ,ಖಾಸಗಿ, ಗ್ರಾಮೀಣ ಬ್ಯಾಂಕ್‍ಗಳು ಮತ್ತು ವಿದೇಶಿ ಬ್ಯಾಂಕ್‍ಗಳಿಗೆ ಟಾರ್ಗೆಟ್ ನಿಗದಿ ಪಡಿಸಲಾಗುವುದು. ಇದರಿಂದ ಈ ಕ್ಷೇತ್ರಕ್ಕೆ ಹೋಲಿಸಿದರೆ ದುಪ್ಪಟ್ಟಾಗಲಿದೆ ಎಂದು ಅವರು ಅಂದಾಜಿಸಿದ್ದಾರೆ.