ಮುಂಬೈ: ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರುಪಾಯಿ ಮೌಲ್ಯ ಭಾರಿ ಕುಸಿತ ಕಂಡಿದೆ. ಡಾಲರ್ ಎದುರು ರುಪಾಯಿ ಮೌಲ್ಯ 27 ಪೈಸೆಗೆ ಕುಸಿದಿದೆ. ಇದು ಎರಡು ವರ್ಷದಲ್ಲಿ ಕುಸಿದ ಕನಿಷ್ಠ ಮೊತ್ತ ಇದಾಗಿದೆ.
ಒಂದು ಡಾಲರ್ ಗೆ ರುಪಾಯಿ ಮೌಲ್ಯ 65.73 ಪೈಸೆಗೆ ಕುಸಿತ ಕಂಡಿದೆ. ಇಂದು ಬೆಳಿಗ್ಗೆ ಮುಂಬೈನಲ್ಲಿ ಶೇರು ಮಾರುಕಟ್ಟೆ ವಹಿವಾಟು ಪ್ರಾರಂಭವಾದಾಗ ಸೆನ್ಸೆಕ್ಸ್ 476 ಅಂಶಗಳಷ್ಟು ಏರಿಕೆಯಾಗಿದೆ. ನಿನ್ನೆ ರುಪಾಯಿ ಮೌಲ್ಯ ರು. 65.81 ಪೈಸೆ ಇತ್ತು. ಇಂದು 1 ಡಾಲರ್ 65 ರುಪಾಯಿ 77 ಪೈಸೆಗೆ ಸಮವಾಗಿದೆ.