ಸಾಂದರ್ಭಿಕ ಚಿತ್ರ 
ವಾಣಿಜ್ಯ

ಷೇರು ಮಾರುಕಟ್ಟೆ ಚೇತರಿಕೆ

ಸೋಮವಾರದ ಭಾರಿ ಕುಸಿತದಿಂದ ಚೇತರಿಸಿಕೊಂಡಿರುವ ಭಾರತದ ಷೇರು ಮಾರುಕಟ್ಟೆಗಳು ಮಂಗಳವಾರ ಗಣನೀಯ ಏರಿಕೆ ದಾಖಲಿಸಿದವು...

ಸೋಮವಾರದ ಭಾರಿ ಕುಸಿತದಿಂದ ಚೇತರಿಸಿಕೊಂಡಿರುವ ಭಾರತದ ಷೇರು ಮಾರುಕಟ್ಟೆಗಳು ಮಂಗಳವಾರ ಗಣನೀಯ ಏರಿಕೆ ದಾಖಲಿಸಿದವು. ಜಿಎಸ್‍ಟಿ ಮಸೂದೆ ಜಾರಿಗೆ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆಯಲಿದೆ ಎಂಬ ಆಶಾವಾದದೊಂದಿಗೆ ಹೂಡಿಕೆದಾರರು ರಿಯಾಲ್ಟಿ, ಲೋಹ, ಬ್ಯಾಂಕಿಂಗ್ ಷೇರುಗಳನ್ನು ಹೆಚ್ಚು ಖರೀದಿಸಿದರು. ಇದರಿಂದ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ 290.82 ಅಂಕ ಏರಿಕೆಯೊಂದಿಗೆ 26,032.38ಕ್ಕೆ ವಹಿವಾಟು ಮುಗಿಸಿತು. ದಿನದ ಮಧ್ಯಾವಧಿಯಲ್ಲಿ ಡಾಲರ್ ವಿರುದ್ಧ ರುಪಾಯಿ ಮೌಲ್ಯ 76 ಪೈಸೆ ಏರಿಕೆ ಕಂಡಿದೆ.

ವಹಿವಾಟು 826.35 ಅಂಕಗಳ ಏರಿಳಿತ ಕಂಡಿತು. ಅಂತಿಮವಾಗಿ 26 ಸಾವಿರಕ್ಕಿಂತಲೂ ಹೆಚ್ಚು ದಿನದಂತ್ಯ ಕಾಣುವಲ್ಲಿ ಸಫಲವಾಯಿತು. ಸೆನ್ಸೆಕ್ಸ್ ಗಳಿಕೆಯೊಂದಿಗೆ ವಹಿವಾಟು ಆರಂಭಿಸಿತು. ಒಂದು ಹಂತದಲ್ಲಿ ದಿನದ ಗರಿಷ್ಠ 26,124.83ರವರೆಗೂ ಏರಿಕೆ ಕಂಡಿತ್ತು. ನಂತರ ಕುಸಿಯುತ್ತಾ ಬಂದಿತು. ದಿನದ ಕನಿಷ್ಠ 25,298.42ರವರೆಗೂ ಇಳಿದಿತ್ತು. ದಿನದ ಮಧ್ಯಾವಧಿಯಲ್ಲಿ ಭಾರಿ ನೆಗೆತ ಕಂಡು ಗಳಿಕೆಯೊಂದಿಗೆ ವಹಿವಾಟು ಮುಗಿಯಿತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 71.70 ಅಂಕ ಏರಿಕೆಯೊಂದಿಗೆ 7,880.70ಕ್ಕೆ ತಲುಪಿತು. ಸೆನ್ಸೆಕ್ಸ್ ಗುಂಪಿನ ಷೇರುಗಳ ಪೈಕಿ ವೇದಾಂತ, ಟಾಟಾ ಮೋಟಾರ್ಸ್, ಕೋಲ್ ಇಂಡಿಯಾ ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಎನ್‍ಟಿಪಿಸಿ, ಟಾಟಾ ಸ್ಟೀಲ್, ಗೇಲ್, ಎಸ್ ಬಿಐ, ಆರ್‍ಐಎಲ್ ಸೇರಿದಂತೆ 22 ಷೇರುಗಳು ಗಳಿಕೆ ಕಂಡವು. ರಿಯಾಲ್ಟಿ, ಲೋಹ, ತೈಲ ಮತ್ತು ಅನಿಲ ಸಾರ್ವಜನಿಕ ವಲಯದ ಕಂಪನಿಗಳು ಮತ್ತು ಬ್ಯಾಂಕ್ ಸೂಚ್ಯಂಕಗಳು ಏರಿಕೆ ದಾಖಲಿಸಿದವು. ರಿಟೇಲ್ ಹೂಡಿಕೆದಾರರು ಮಧ್ಯಮ ಮತ್ತು ಸಣ್ಣ ಬಂಡವಾಳ ಷೇರುಗಳಲ್ಲಿ ಹಣ ಹೂಡಿಕೆ ಮಾಡಿದರು. ಇದರಿಂದ ಈ ಗುಂಪಿನ ಸೂಚ್ಯಂಕ ಶೇ.1.99ರಷ್ಟು ಏರಿತು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ