CMAI 
ವಾಣಿಜ್ಯ

ಸಿಎಂಎಐನಿಂದ ಪಾನ್ ಇಂಡಿಯಾ ಜಾಲ ಸ್ಥಾಪನೆ

ದ ಕ್ಲಾಥಿಂಗ್ ಮ್ಯಾನ್ಯುಫ್ಯಾಕ್ಚರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಎಂಎಐ) ಪೇಮಂಟ್ ಡಿಫಾಲ್ಟ್ ಸಮಿತಿ ರಾಷ್ಟ್ರಾದ್ಯಂತ 2015ರ ಜನವರಿ ತನಕ...

- ನೈಜ ಸಮಯದ ಆಧಾರದಲ್ಲಿ ವಸೂಲಿ ನಿಗಾವಹಿಸಲು ಎಪಿಪಿ ಯೋಜನೆ
- ವೇಗವಾಗಿ ಹಣ ವಸೂಲಿಗೆ ಪ್ರಾದೇಶಿಕ ಗಾರ್ಮೆಂಟ್ ಸಂಸ್ಥೆಗಳೊಂದಿಗೆ ಒಪ್ಪಂದ

ಬೆಂಗಳೂರು, ಆಗಸ್ಟ್ 31, 2015: ದ ಕ್ಲಾಥಿಂಗ್ ಮ್ಯಾನ್ಯುಫ್ಯಾಕ್ಚರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಎಂಎಐ) ಪೇಮಂಟ್ ಡಿಫಾಲ್ಟ್ ಸಮಿತಿ ರಾಷ್ಟ್ರಾದ್ಯಂತ 2015ರ ಜನವರಿ ತನಕ ತನ್ನ ಸದಸ್ಯರಿಂದ 400 ಕೋಟಿ ರೂ.ಗಳನ್ನು ವಸೂಲಿ ಮಾಡಿದೆ. ಪ್ರಸ್ತುತ ಭಾರತದ ಗಾರ್ಮೆಂಟ್ ವ್ಯಾಪಾರಿ ವಲಯದಲ್ಲಿ ಚಾಲ್ತಿಯಲ್ಲಿರುವ (90 ರಿಂದ 120 ದಿನ) ಸಾಲ ನೀಡುವ ಅವದಿಯನ್ನು 7 ರಿಂದ 10 ದಿನಗಳಿಗೆ ಕಡಿಮೆ ಮಾಡಬೇಕು ಎಂದೂ ಸಿಎಂಎಐ ತಿಳಿಸಿದೆ. ವಿಳಂಬವಾಗಿ ಪಾವತಿ ಮಾಡುವ ಪದ್ದತಿ ಭಾರತದಲ್ಲಿ ಮಾತ್ರ ಇದೆ. ಅಂತಿಮವಾಗಿ ಸಿಎಂಎಐ ಇದನ್ನು ಜೀರೋ ಕ್ರೆಡಿಟ್ ವ್ಯವಸ್ಥೆಗೆ ತರಬೇಕೆಂಬ ಗುರಿ ಹೊಂದಿದೆ.
ರಾಹುಲ್ ಮೆಹ್ತಾ. ಅಧ್ಯಕ್ಷ. ಸಿಎಂಎಐ ಇಂದು ಪ್ರೈಸ್ ವಾಟರ್ ಹೌಸ್ ಕೂಪರ್ (ಪಿಡಬ್ಲ್ಯುಸಿ) ಹಾಗೂ ವಾಜಿರ್ ಅಡ್ವ್ಯೆಜರ್ಸ್ ಅವರನ್ನು ಜಿಎಸ್‍ಟಿಯ ಅರ್ಹತೆ ಪಟ್ಟಿಯಲ್ಲಿ ಸಿದ್ದ ಉಡುಪು ಸೇರಿಸುವಂತೆ ಮನವಿ ಸೇರಿದಂತೆ ಕೈಗಾರಿಕೆಯ ವಿವರವಾದ ಯೋಜನೆಯನ್ನು ಕೇಂದ್ರ ಸರ್ಕಾರದ ಜವಳಿ ಸಚಿವಾಲಯಕ್ಕೆ ಸಲ್ಲಿಸಲು ಸಿದ್ದಪಡಿಸುವಂತೆ ತಿಳಿಸಿದರು. 2016 ರಲ್ಲಿ ಪರಿಚಯಿಸಲು ಉದ್ದೇಶಿಸಿರುವ ವಸ್ತುಗಳು ಹಾಗೂ ಸೇವಾ ತೆರಿಗೆ (ಜಿಎಸ್‍ಟಿ) ಶೇ. 20 ಮತ್ತು ಶೇ. 24 ರಷ್ಟು ಇಳಿಯದಂತೆ ತಡೆಯುತ್ತದೆ ಎಂದಿದ್ದಾರೆ.
ರಾಜೇಶ್ ಮಸಂದ್, ಉಪಾಧ್ಯಕ್ಷರು ಮತ್ತು ಅಧ್ಯಕ್ಷರು ಕನ್ಸಿಲಿಯೇಷನ್ ಮತ್ತು ಆರ್ಬಿಟ್ರೇಷನ್ ಉಪಸಮಿತಿ (ಪೇಮೆಂಟ್ ಡಿಫಾಲ್ಟ್ ಸಮಿತಿ) ಸಿಎಂಎಐ ಮಾತನಾಡಿ, ಸಮಿತಿಯು ಕಳೆದ ಏಳು ತಿಂಗಳ ಅವದಿಯಲ್ಲಿ ಶೇ. 35 ರಷ್ಟು ವಿಳಂಬ ಪಾವತಿ ಪ್ರಕರಣವನ್ನು ಇತ್ಯರ್ಥ ಪಡಿಸಿದೆ. ಈ ಉದ್ದೇಶಕ್ಕಾಗಿಯೇ ಮುಂಬೈಯಲ್ಲಿ ನೂತನ ಕಚೇರಿ ತೆರೆಯಲಾಗಿದೆ. ಸಮಿತಿ ಅಭಿವೃದ್ದಿ ಪಡಿಸುತ್ತಿರುವ ಆಪ್ ಭಾರತದೆಲ್ಲೆಡೆ  ಮುಂದಿನ ಆರು ತಿಂಗಳಲ್ಲಿ ಕಾರ್ಯನಿರ್ವಹಿಸಲಿದೆ. ಇದು ದೇಶೀಯ ಗಾರ್ಮೆಂಟ್ ಕೈಗಾರಿಕೆಯ ಯಾವುದೇ ರಿಟೇಲರ್ಸ್, ವಿತರಕರು ಏಜೆಂಟ್ ಹಾಗೂ ಉತ್ಪಾದಕರಿಗೆ ಸರಿಯಾದ ಮಾಹಿತಿಯನ್ನು ಒದೆಗಿಸುತ್ತದೆ ಎಂದರು
ಕೀರ್ತಿ ಶಾ. ಸಹ ಅಧ್ಯಕ್ಷ ಕನ್ಸಿಲಿಯೇಷನ್ ಮತ್ತು ಆರ್ಬಿಟ್ರೇಷನ್ ಉಪ ಸಮಿತಿ(ಪೇಮೆಂಟ್ ಡಿಫಾಲ್ಟ್ ಸಮಿತಿ) ಮಾತನಾಡಿ, ಹಣ ವಸೂಲಾತಿಗೆ ಪಾನ್ ಇಂಡಿಯಾ ಜಾಲವನ್ನು ಸ್ಥಾಪಿಸುವುದಾಗಿ ತಿಳಿಸಿದರು, ಅಹಮದಾಬಾದ್, ಕೊಲ್ಕತ, ಗೌಹಾಟಿ, ರಾಯ್‍ಪುರ, ಚೆನೈ, ಹೈದರಾಬಾದ್ ಬೆಂಗಳೂರು ಮೊದಲಾದ ನಗರಗಳಲ್ಲಿ ಸಿಎಂಐಗೆ ತಾವು ಎಲ್ಲಾರೀತಿಯ ನೆರವು ನೀಡುವುದಾಗಿ ಆಶ್ವಾಸನೆ ನೀಡಿವೆ ಎಂದರು.
12ನೇ ಪಂಚವಾರ್ಷಿಕ ಯೋಜನೆಯಲ್ಲಿ 35 ಸಾವಿರ ಮಂದಿಗೆ ಜವಳಿ ಸಚಿವಾಲಯದ ಸಮಗ್ರ ಕೌಶಲ ಅಭಿವೃದ್ದಿ ಯೋಜನೆ(ಐಎಸ್‍ಡಿಎಸ್)ಯಡಿ ತರಬೇತಿ ನೀಡುವ ಸಂಸ್ಥೆಗಳ ಪೈಕಿ ಸಿಎಂಎಐ ಸಹ ಒಂದಾಗಿದೆ, ಇದನ್ನು ಕೇಂದ್ರ ಸರ್ಕಾರವೇ ನೇಮಕ ಮಾಡಿದ್ದು ಸಿಎಂಎಐ ಈಗಾಗಲೇ ಆರು ತಿಂಗಳಲ್ಲಿ ಭಾರತದ ಅನೇಕ ಭಾಗದಲ್ಲಿ 50 ತರಬೇತಿ ಕೇಂದ್ರ ತೆರೆದಿದೆ ಎಂದರು. ಗಾರ್ಮೆಂಟ್ ಘಟಕಗಳ ಉತ್ಪಾದನೆ ಹೆಚ್ಚಾಗಲು ಇದು ನೆರವಾಗುತ್ತದೆ. ಅಂತಾರಾಷ್ಟ್ರೀಯ ಅಪೆರಲ್ ಫೆಡರೇಷನ್ (ಐಎಎಫ್)ನ ಚೇರ್ಮನ್ ಸಹ ಆಗಿರುವ ರಾಹುಲ್ ಮೆಹ್ತಾ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!