ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ ಬಡ್ಡಿ ದರವನ್ನು ಪ್ರಸಕ್ತ ಸಾಲಿಗೆ ಹೆಚ್ಚಿಸುವ ನಿರೀಕ್ಷೆಗಳಿವೆ.
ಸದ್ಯ ಬಡ್ಡಿದರ ಶೇ.8.75ರಷ್ಟಿದ್ದು ಬುಧವಾರ ಸಂಘಟನೆಯ ಟ್ರಸ್ಟಿಗಳ ಸಭೆ ನಡೆಯಲಿದ್ದು ಬಡ್ಡಿದರ ಹೆಚ್ಚಿಸುವ ಕುರಿತು ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈವರೆಗಿನ ಸಭೆಯ ಅಜೆಂಡಾದಲ್ಲಿ ಬಡ್ಡಿದರ ಏರಿಕೆ ವಿಷಯ ಇಲ್ಲ. ಆದರೂ ಸಭೆಯಲ್ಲಿ ಈ ವಿಷಯ ಚರ್ಚಿಸುವ ನಿರೀಕ್ಷೆಗಳಿವೆ ಎಂದು ಮೂಲಗಳು ಹೇಳಿವೆ.
ಇಪಿಎಫ್ ಒ ಸಂಘಟನೆಯನ್ನು ಪುನರ್ ರೂಪಿಸುವುದು ಸಭೆಯ ಪ್ರಮುಖ ಅಜೆಂಡಾ ಆಗಿದ್ದು, ಈ ವರ್ಷ ಗಳಿಸುವ ಆದಾಯದ ಕುರಿತೂ ಚರ್ಚೆ ನಡೆಸಲಾಗುವುದು ಎನ್ನಲಾಗಿದೆ.