ಭಾರತದ ರಫ್ತು ಸತತ 12 ನೇ ತಿಂಗಳಲ್ಲೂ ಇಳಿಮುಖ 
ವಾಣಿಜ್ಯ

ಭಾರತದ ರಫ್ತು ಸತತ 12 ನೇ ತಿಂಗಳಲ್ಲೂ ಇಳಿಮುಖ

ಸತತ 12 ನೇ ತಿಂಗಳಲ್ಲೂ ಭಾರತದ ವಾಣಿಜ್ಯ ರಫ್ತು ಕುಸಿತ ದಾಖಲಿಸಿದ್ದು, ಶೇ.24 .43 ರಷ್ಟು ಕುಸಿದಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶ ಹೇಳಿದೆ.

ನವದೆಹಲಿ: ಸತತ 12 ನೇ ತಿಂಗಳಲ್ಲೂ ಭಾರತದ ವಾಣಿಜ್ಯ ರಫ್ತು ಕುಸಿತ ದಾಖಲಿಸಿದ್ದು, ಶೇ.24 .43 ರಷ್ಟು( 20 .01 ಬಿಲಿಯನ್ ಡಾಲರ್ ಗೆ) ಕುಸಿದಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶ ಹೇಳಿದೆ.
ನವೆಂಬರ್ ತಿಂಗಳಲ್ಲಿ ರಫ್ತು ಪ್ರಮಾಣ ಮಾತ್ರ ಕುಸಿಯದೇ ಆಮದು ಪ್ರಮಾಣದಲ್ಲೂ ಕುಸಿತ ಉಂಟಾಗಿದ್ದು, ಶೇ.30 .26 ರಷ್ಟು (29 .79 ಬಿಲಿಯನ್ ಡಾಲರ್ ಗೆ) ಕುಸಿದಿದ್ದು, ಪ್ರಸಕ್ತ ಸನ್ನಿವೇಶದಲ್ಲಿ ತೈಲೋತ್ಪನ್ನಗಳ ಆಮದು ಶೇ.44 .99 ರಷ್ಟು ಕಡಿಮೆಯಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಇವೆಲ್ಲದರ ಪರಿಣಾಮ ವ್ಯಾಪಾರ ಕೊರತೆ 16 .236 ಬಿಲಿಯನ್ ಡಾಲರ್ ನಿಂದ 9.78 ಬಿಲಿಯನ್ ಡಾಲರ್ ಗೆ ಕುಸಿದಿದೆ. ನವೆಂಬರ್ ನಲ್ಲಿ ತೈಲೋತ್ಪನ್ನಗಳನ್ನು ಹೊರತುಪಡಿಸಿದ ಸರಕುಗಳ ಆಮದು ಪ್ರಮಾಣ ಶೇ.24 .7 ರಷ್ಟು( 31 .02 ಬಿಲಿಯನ್ ಡಾಲರ್ ನಿಂದ 23 .36 ಬಿಲಿಯನ್ ಡಾಲರ್) ಗೆ ಇಳಿಕೆಯಾಗಿದೆ.
ಪ್ರಸಕ್ತ ಆರ್ಥಿಕ ವರ್ಷದ ಮೊದಲ 8 ತಿಂಗಳಲ್ಲಿ ರಫ್ತು ದರ ಶೇ.18 .46 ರಷ್ಟು ಇಳಿಕೆಯಾಗಿದ್ದರೆ, ಆಮದು ಪ್ರಮಾಣ ಶೇ.17.೨೧ ರಷ್ಟು ಇಳಿಕೆಯಾಗಿತ್ತು. "ಜಾಗತಿಕ ಕುಸಿತದ ಪರಿಣಾಮ ಭಾರತದ ರಫ್ತು ಪ್ರಮಾಣ ಕುಸಿದಿದ್ದು ಶೀಘ್ರವೇ ಪರಿಸ್ಥಿತಿ ಉತ್ತಮಗೊಳ್ಳಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!