ಸಾಂದರ್ಭಿಕ ಚಿತ್ರ 
ವಾಣಿಜ್ಯ

ಜಿಡಿಪಿ ಅಂದಾಜು ಶೇ.7.5ಕ್ಕೆ ಇಳಿಕೆ

ಭಾರತದ ಆರ್ಥಿಕತೆ ಸುಸ್ಥಿರವಾಗಿದೆ, ಜಾಗತಿಕ ಆರ್ಥಿಕತೆ ಹಿಂಜರಿತದಲ್ಲಿರುವ ನಡುವೆಯೂ ವಿಶ್ದಲ್ಲೇ ಅತಿ ಹೆಚ್ಚಿನ ಆರ್ಥಿಕ ಅಭಿವೃದ್ಧಿ...

ಬೆಂಗಳೂರು: ಭಾರತದ ಆರ್ಥಿಕತೆ ಸುಸ್ಥಿರವಾಗಿದೆ, ಜಾಗತಿಕ ಆರ್ಥಿಕತೆ ಹಿಂಜರಿತದಲ್ಲಿರುವ ನಡುವೆಯೂ ವಿಶ್ದಲ್ಲೇ ಅತಿ ಹೆಚ್ಚಿನ ಆರ್ಥಿಕ ಅಭಿವೃದ್ಧಿ ಕಾಯ್ದುಕೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವರು, ಮುಖ್ಯ ಆರ್ಥಿಕ ಸಲಹೆಗಾರರು, ನೀತಿ ಆಯೋಗದ ಉಪಾಧ್ಯಕ್ಷರು ಅತೀವ ಭರವಸೆ ವ್ಯಕ್ತಪಡಿಸುತ್ತಾ ಬಂದಿದ್ದರು. 
ಆದರೆ ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾಗಿರುವ ಮಧ್ಯ ವಾರ್ಷಿಕ ಆರ್ಥಿಕ ಪರಿಸ್ಥಿತಿ ವರದಿ ಈ ಭರವಸೆಗಳನ್ನು ಹುಸಿಗೊಳಿಸಿದೆ. ಪ್ರಸಕ್ತ ಹಣಕಾಸು ಸಾಲಿನಲ್ಲಿ ಜಿಡಿಪಿ ಶೇ.8.1ರಿಂದ 8.5ರಷ್ಟು ಅಭಿವೃದ್ಧಿ ಕಾಣಲಿದೆ ಎಂಬ ಅಂದಾಜನ್ನು ಕೇಂದ್ರ ಸರ್ಕಾರ ಹೊಂದಿತ್ತು. ಈ ಅಂದಾಜು ಪರಿಷ್ಕರಿಸಿದ್ದು ಶೇ.7ರಿಂದ 7.5ಕ್ಕೆ ಇಳಿಸಿದೆ. 
ಮಳೆ ಕೊರತೆ, ಹೂಡಿಕೆ ಹಿನ್ನಡೆ, ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ಪನ್ನಗಳಿಗೆ ಬೇಡಿಕೆ ಇಳಿಮುಖ ಮತ್ತಿತರ ಅಂಶಗಳು ಇದಕ್ಕೆ ಕಾರಣವಾಗಿದೆ.
ಜಿಡಿಪಿ ಲೆಕ್ಕಾಚಾರ: ಎರಡು ಮಾದರಿಗಳಲ್ಲಿ ಜಿಡಿಪಿ ಲೆಕ್ಕಾಚಾರ ಮಾಡಲಾಗುತ್ತದೆ. ಮೊದಲನೆಯದು ಫ್ಯಾಕ್ಟರ್ ಕಾಸ್ಟ್ (ಕಾರ್ಖಾನೆಯಲ್ಲಿ ವಸ್ತುವೊಂದನ್ನು ತಯಾರಿಸಲು ತಗಲುವ ವೆಚ್ಚ) ಮತ್ತು ಎರಡನೆಯದು ಮಾರಕಟ್ಟೆ ದರದಲ್ಲಿ ವಸ್ತುಗಳ ಉತ್ಪಾದನೆ ವೆಚ್ಚ ಪದ್ಧತಿ (ಅಂದರೆ ಮಾರುಕಟ್ಟೆಯಲ್ಲಿನ ದರಗಳಿಗೆ ಅನುಸಾರವಾಗಿ ಲೆಕ್ಕ ಹಾಕುವುದು).
ಭಾರತದಲ್ಲಿ ವೆಚ್ಚ ಆಧಾರಿತ ಪದ್ಧತಿಯಲ್ಲಿ ಜಿಡಿಪಿ ಲೆಕ್ಕ ಹಾಕಲಾಗುತ್ತದೆ. ಇದರಲ್ಲಿ ಅನುಭೋಗ(ಕನ್ಸಪ್ಷನ್)+ಹೂಡಿಕೆ (ಸರ್ಕಾರಿ ಮತ್ತು ಖಾಸಗಿ)+ ಸರ್ಕಾರಿ ವೆಚ್ಚ(ಆಡಳಿತಾತ್ಮಕ, ಸಿಬ್ಬಂದಿ ವೇತನ ಮತ್ತಿತರ)+ ಆಮದು ಮತ್ತು ರಫ್ತು ಪ್ರಗತಿ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. 
ಲೆಕ್ಕಾಚಾರ ವಲಯ: 1. ಕೃಷಿ, ಅರಣ್ಯ ಮತ್ತು ಮೀನುಗಾರಿಕೆ, 2. ಗಣಿ ಮತ್ತು ಕಲ್ಲು ಕ್ವಾರಿ 
3.ತಯಾರಿಕೆ. 4 ವಿದ್ಯುತ್, ಅನಿಲ ಮತ್ತು ನೀರು ಸರಬರಾಜು 5. ನಿರ್ಮಾಣ, 6. ವಾಣಿಜ್ಯ, ಹೋಟೆಲ್, ಸಾರಿಗೆ ಮತ್ತು ದೂರ ಸಂಪರ್ಕ 7.ಹಣಕಾಸು, ವಿಮೆ, ರಿಯಲ್ ಎಸ್ಟೇಟ್ ಮತ್ತು ವಾಣಿಜ್ಯ ಸೇವೆಗಳು, 8 ಸಮುದಾಯ, ಸಮಾಜ ಮತ್ತು ವೈಯಕ್ತಿಕ ಸೇವೆಗಳು. 
ಈ ಕ್ಷೇತ್ರಗಳಲ್ಲಿ ಆಗಿರುವ ಹೂಡಿಕೆ, ವಹಿವಾಟು ಮತ್ತು ತೆರಿಗೆ ಸಂಗ್ರಹದ ಮೇಲೆ ಪ್ರಗತಿ ನಿರ್ಧರಿಸಲಾಗುವುದು. ಇದನ್ನು ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕವಾಗಿ ಲೆಕ್ಕಾಚಾರ ಮಾಡಲಾಗುವುದು. ಪ್ರಗತಿಯನ್ನು ಹಿಂದಿನ ವರ್ಷ, ಹಿಂದಿನ ವರ್ಷದ ಅದೇ ತ್ರೈಮಾಸಿಕ ಮತ್ತು ಹಿಂದಿನ ತಿಂಗಳೊಂದಿಗೆ ತಾಳೆ ಹಾಕಲಾಗುವುದು. 
ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಚಿವಾಲಯಗಳು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಭಾರತೀಯ ಅಂಕಿಅಂಶ ಕಚೇರಿ (ಸಿಎಸ್ ಒ) ಮಾಹಿತಿ ತರಿಸಿಕೊಳ್ಳಲಿದೆ. ಇದರ ನಂತರ ನಾಮಿನಲ್ ಗ್ರೌತ್ ಮತ್ತು ರಿಯಲ್ ಗ್ರೌತ್ ಲೆಕ್ಕ ಹಾಕಿ ದೇಶದ ಒಟ್ಟಾರೆ ಆರ್ಥಿಕ ಪ್ರಕತಿಯನ್ನು ಅಂದಾಜು ಮಾಡಲಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!