ಸ್ಟಾರ್ಟ್‍ಅಪ್‍ಗಳಲ್ಲಿ ಭಾರಿ ಹೂಡಿಕೆ
ದೇಶದ ಸ್ಟಾರ್ಟ್‍ಅಪ್‍ಗಳಿಗೆ 2015 ಸ್ಮರಣೀಯ ವರ್ಷವಾಗಿದೆ. ಈ ವರ್ಷದಲ್ಲಿ ದೇಶದ ಸ್ಟಾರ್ಟ್‍ಅಪ್‍ಗಳಲ್ಲಿ ವಿದೇಶಿ ಹೂಡಿಕೆದಾರರು...
ಮುಂಬೈ: ದೇಶದ ಸ್ಟಾರ್ಟ್‍ಅಪ್‍ಗಳಿಗೆ 2015 ಸ್ಮರಣೀಯ ವರ್ಷವಾಗಿದೆ. ಈ ವರ್ಷದಲ್ಲಿ ದೇಶದ ಸ್ಟಾರ್ಟ್‍ಅಪ್‍ಗಳಲ್ಲಿ ವಿದೇಶಿ ಹೂಡಿಕೆದಾರರು, ದೇಶದ ಉದ್ಯಮಿಗಳು ರು.54,641 ಟಿವರೆಗೂ ಬಂಡವಾಳ ಹೂಡಿಕೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು ಹೂಡಿಕೆ ಮತ್ತು ಕಾರ್ಯಾಚರಣೆ ಒಪ್ಪಂದಗಳು ಏರ್ಪಟ್ಟಿವೆ.
ಉದ್ಯಮಿಗಳಾದ ರತನ್ ಟಾಟಾ, ಎನ್. ಆರ್.ನಾರಾಯಣ ಮೂರ್ತಿ, ಆಲಿಬಾಬ ಮತ್ತು ಸಾಫ್ಟ್ ಬ್ಯಾಂಕ್ ಸೇರಿದಂತೆ ಹಲವಾರು ಜಾಗತಿಕ ಹೂಡಿಕೆ ಸಂಸ್ಥೆಗಳು ಬಂಡವಾಳ ತೊಡಗಿಸಿವೆ ಎಂದು ತಾಂತ್ರಿಕ ಮತ್ತು ಸ್ಟಾರ್ಟ್‍ಅಪ್ ಬ್ಲಾಗ್ ಸಂಸ್ಥೆ ಟ್ರಾಕ್ ಡಾಟ್ ಇನ್ ವರದಿ ಹೇಳಿದೆ.
2014ರಲ್ಲಿ 304 ಡೀಲ್‍ಗಳು ಏರ್ಪಟ್ಟು ರು.33,000 ಕೋಟಿ ಹೂಡಿಕೆಯಾಗಿತ್ತು. ಆದರೆ 2015ರಲ್ಲಿ 936 ಒಪ್ಪಂದಗಳು ಏರ್ಪಟ್ಟಿವೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.