ನವದೆಹಲಿ: ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಸ್ಕಿಲ್ ತರಬೇತಿ ನೀಡಲು 50 ದಶಲಕ್ಷ ಡಾಲರ್ ಸಾಲ ಒಪ್ಪಂದಕ್ಕೆ ವಿಶ್ವಬ್ಯಾಂಕ್ ಸಹಿ ಮಾಡಿದೆ.
ಕೇಂದ್ರ ಸರ್ಕಾರ ಕಳೆದ ಆಗಸ್ಟ್‍ನಲ್ಲಿ ಆರಂಭಿಸಿದ ಈ ಕುರಿತ `ನಯೀ ಮಂಜಿಲ್' ಯೋಜನೆಗೆ ಸಾಲದ ನೆರವು ನೀಡಲಾಗುವುದು ಎಂದು ವಿಶ್ವಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.
ಅವಕಾಶಗಳಿಲ್ಲದಿರುವ ಅಲ್ಪಸಂಖ್ಯಾತ ಸಮುದಾಯಗಳಲ್ಲಿನ ಮಕ್ಕಳಿಗಾಗಿ ಈ ಯೋಜನೆ ರೂಪಿಸಲಾಗಿದೆ. ಅವರನ್ನು ಶಾಲೆಗೆ ಸೇರಿಸುವುದು, ಶಿಕ್ಷಣ ಮುಗಿದವರಿಗೆ ವೃತ್ತಿ ತರಬೇತಿ ನೀಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ತರಬೇತಿ ನಂತರ ಉದ್ಯೋಗ ಕಲ್ಪಿಸುವ ಕೆಲಸವನ್ನೂ ಮಾಡಲಾಗುವುದು.