ವಾಣಿಜ್ಯ

ಬ್ಯಾಂಕಿಂಗ್ ವಂಚನೆ: ಡೆಕ್ಕನ್ ಕ್ರಾನಿಕಲ್ ಮಾಲೀಕರ ಸೆರೆ

ರು.1,200 ಕೋಟಿ ಬ್ಯಾಂಕಿಂಗ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆಂಗ್ಲ ದೈನಿಕ 'ಡೆಕ್ಕನ್ ಕ್ರಾನಿಕಲ್‌'ನ ಮಾಲೀಕ ಟಿ.ವೆಂಕಟ್ರಾಮ್ ರೆಡ್ಡಿ ಅವರನ್ನು ಬೆಂಗಳೂರಿನ ಸಿಬಿಐ...

ಹೈದ್ರಾಬಾದ್: ರು.1,200 ಕೋಟಿ ಬ್ಯಾಂಕಿಂಗ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆಂಗ್ಲ ದೈನಿಕ 'ಡೆಕ್ಕನ್ ಕ್ರಾನಿಕಲ್‌'ನ ಮಾಲೀಕ ಟಿ.ವೆಂಕಟ್ರಾಮ್ ರೆಡ್ಡಿ ಅವರನ್ನು ಬೆಂಗಳೂರಿನ ಸಿಬಿಐ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ಕೆನರಾ ಬ್ಯಾಂಕ್ ನೀಡಿದ್ದ ದೂರಿನ ಆಧಾರದಂತೆ ಅವರನ್ನು ಬಂಧಿಸಲಾಗಿದೆ. ಈ ಸಂಬಂಧ ಸಿಬಿಐನ ಬ್ಯಾಂಕ್ ಭದ್ರತೆಗಳ ಮತ್ತು ವಂಚನೆ ಘಟಕದ ಅಧಿಕಾರಿಗಳು ಆಂಧ್ರದ ಸಿಕಂದರಾಬಾದ್‌ನಲ್ಲಿರುವ ಡೆಕ್ಕನ್ ಕ್ರಾನಿಕಲ್ ಕಚೇರಿಯಲ್ಲಿ ರೆಡ್ಡಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ನಂತರ ಅವರನ್ನು ಕೋಟಿಯಲ್ಲಿರುವ ಸಿಬಿಐ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಸಂಜೆ 5 ಗಂಟೆಗೆ ಬಂಧಿಸಿದ್ದಾರೆ. ರೆಡ್ಡಿ ಅವರ ಡೆಕ್ಕನ್ ಕ್ರಾಮಿಕಲ್ ಹೋಲ್ಡಿಂಗ್ಸ್ ಲಿ. ಸಂಸ್ಥೆಯು ಡೆಕ್ಕನ್ ಕ್ರಾನಿಕಲ್, ಫೈನಾನ್ಷಿಯಲ್ ಕ್ರಾನಿಕಲ್ ಮತ್ತು ಏಷ್ಯನ್ ಏಜ್ ಆಂಗ್ಲ ದೈನಿಕಗಳು ಮತ್ತು ತೆಲುಗು ಪತ್ರಿಕೆ ಆಂಧ್ರ ಭೂಮಿಯ ಮಾಲೀಕತ್ವ ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ