ವಾಣಿಜ್ಯ

ಇನ್ಫಿ ಲಾಭ ಹೆಚ್ಚಳ: ಉದ್ಯೋಗಿಗಳಿಗೆ ಶೇ.100ರಷ್ಟು ಬೋನಸ್

Lingaraj Badiger

ಬೆಂಗಳೂರು: ಬೆಂಗಳೂರು ಮೂಲದ ದೇಶದ ಅತಿ ದೊಡ್ಡ ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್ ಈ ತ್ರೈಮಾಸಿಕ ಅವಧಿಯಲ್ಲಿ ಭರ್ಜರಿ ಲಾಭ ಗಳಿಸಿದ್ದು, ಇದಕ್ಕೆ ಕಾರಣರಾದ ತನ್ನ ಉದ್ಯೋಗಿಗಳಿಗೆ ಶುಕ್ರವಾರ ಶೇ.100ರಷ್ಟು ಬೋನಸ್ ಘೋಷಿಸಿದೆ.

ಮೂರನೇ ತ್ರೈಮಾಸಿಕ ಅವಧಿಗಾಗಿ ನಾವು ಶೇ.100ರಷ್ಟು ಬೋನಸ್ ಘೋಷಿಸಿದ್ದೇವೆ ಎಂದು ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಯು.ಬಿ. ಪ್ರವೀಣ್ ಅವರು ತಿಳಿಸಿದ್ದಾರೆ.

ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಇನ್ಫೋಸಿಸ್ ತನ್ನ ಲಾಭವನ್ನು ಶೇ.13ರಷ್ಟು ಹೆಚ್ಚಿಸಿಕೊಂಡಿದ್ದು, ಈ ತ್ರೈಮಾಸಿಕ ಅವಧಿಯಲ್ಲಿ 3,250 ಕೋಟಿ ರುಪಾಯಿ ನಿವ್ವಳ ಲಾಭ ದಾಖಲಿಸಿದೆ.

ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಒಟ್ಟಾರೆ ಆದಾಯ ಗಳಿಕೆ ಕೂಡಾ ನಿರೀಕ್ಷಿತ ಮಟ್ಟದಲ್ಲಿದೆ. ಎರಡನೇ ತ್ರೈಮಾಸಿಕದಲ್ಲಿ 13,026 ಕೋಟಿ ರು ಗಳಿಕೆ ಕಂಡಿದ್ದ ಕಂಪನಿ ಈ ತ್ರೈಮಾಸಿಕದಲ್ಲಿ 13,796 ಕೋಟಿ ರು ಆದಾಯ ಪಡೆದುಕೊಂಡಿದೆ. ತ್ರೈಮಾಸಿಕ ವರದಿ ಪ್ರಕಟಗೊಂಡ ಬೆನ್ನಲ್ಲೇ ಕಂಪನಿಯ ಷೇರುಗಳು ಶೇ. 5.9ರಷ್ಟು ಏರಿಕೆ ಕಂಡಿದೆ.

SCROLL FOR NEXT