ನವದೆಹಲಿ: ಆರ್ಥಿಕ ಸುಧಾರಣೆಯನ್ನೇ ಗುರಿಯಾಗಿಟ್ಟು ಕೊಂಡು ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಸುಧಾರಣೆಗೆ ಒತ್ತು ನೀಡುವ ನಿರ್ಧಾರಕ್ಕೆ
ಬಂದಿದೆ. ಗೃಹ ಸಾಲದ ಬಡ್ಡಿ ಮೇಲಿನ ತೆರಿಗೆ ವಿನಾಯ್ತಿಯನ್ನು ಪ್ರಸಕ್ತ ವರ್ಷ ರು. 50ಸಾವಿರದಷ್ಟು ಹೆಚ್ಚಿಸಲು ವಿತ್ತ ಸಚಿವ ಅರುಣ್ ಜೇಟ್ಲಿ ನಿರ್ಧರಿಸಿದ್ದಾರೆ ಎಂದು ಮೂಲಗಳು
ತಿಳಿಸಿವೆ. ಇದು ನಿಜವಾದರೆ ಗೃಹ ಸಾಲ ಪಡೆದುಕೊಂಡ ಲಕ್ಷಾಂತರ ಕುಟುಂಬಗಳಿಗೆ ಹೆಚ್ಚು ಹಣ ಉಳಿತಾಯವಾಗಲಿದೆ.
ಸದ್ಯಕ್ಕೆ ಗೃಹ ಸಾಲದ ಬಡ್ಡಿ ಮೇಲಿನ ತೆರಿಗೆವಿನಾಯ್ತಿ ರು. 2 ಲಕ್ಷವಿದೆ. ಇದನ್ನು ರು 2.5ಲಕ್ಷಕ್ಕೇರಿಸುವುದು ಜೇಟ್ಲಿ ಅವರ ಯೋಜನೆ. ಈ ಪ್ರಸ್ತಾಪವು ಜಾರಿಯಾದರೆ, 20 ವರ್ಷಗಳ ಅವಧಿಯ ರು 50 ಲಕ್ಷ ಮೊತ್ತದ ಗೃಹ ಸಾಲಪಡೆದವನಿಗೆ ವರ್ಷಕ್ಕೆ ಸರಿಸುಮಾರು ರು. 15 ಸಾವಿರದಷ್ಟು ಉಳಿತಾಯವಾಗಲಿದೆ. ಅಷ್ಟೇ ಅಲ್ಲದೆ ಇದು ಇನ್ನಷ್ಟು ಮಂದಿಗೆ ಮನೆ ಖರೀದಿಸಲು ಪ್ರೇರಣೆ ನೀಡಲಿದೆ. ಪರಿಣಾಮ ಸಾಲದ ಬೇಡಿಕೆ ಹೆಚ್ಚಲಿದೆ.
ದಿನಾಂಕ ನಿರ್ಧಾರ ಇಂದು: ಫೆ .23ರಿಂದ ಸಂಸತ್‍ನ ಬಜೆಟ್ ಅಧಿವೇಶನ ಆರಂಭವಾಗುವ ಸಾಧ್ಯತೆಯಿದೆ. ಬುಧವಾರ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯಸಭೆ ನಡೆಯಲಿದ್ದು, ಈ ವೇಳೆ ಅಧಿವೇಶನದ ದಿನಾಂಕ ನಿಗದಿಯಾಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯನಾಯ್ಡು ತಿಳಿಸಿದ್ದಾರೆ. ವಿಮೆ ಕ್ಷೇತ್ರದಲ್ಲಿ FDI ಮಿತಿ ಹೆಚ್ಚಳ, ಕಲ್ಲಿದ್ದಲು ಗಣಿಗಳ ಇ-ಹರಾಜು ಸೇರಿದಂತೆ ಮೋದಿ ಸರ್ಕಾರ ಜಾರಿ ಮಾಡಿರುವ ಎಲ್ಲ 8 ಸುಗ್ರೀವಾಜ್ಞೆಗಳು ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ.
ಕಾನೂನು ಪ್ರಕಾರ, ಸಂಸತ್ ಅಧಿವೇಶನ ಆರಂಭವಾದ 42 ದಿನಗಳೊಳಗೆ ಸುಗ್ರೀವಾಜ್ಞೆಗಳನ್ನು ಶಾಸನವನ್ನಾಗಿ ರೂಪಿಸಬೇಕು.ಇಲ್ಲದಿದ್ದರೆ ಅದರ ಅವಧಿ ಮುಗಿಯುತ್ತದೆ.
ಗುರಿ ತಪ್ಪಿದ ಡ್ರ್ಯಾಗನ್
ಒಂದು ಕಾಲದಲ್ಲಿ ಆರ್ಥಿಕ ಪ್ರಗತಿಯ ಹರ್ಷದಲ್ಲಿ ಮಿಂಚಿದ್ದ ಚೀನಾಗೆ ಚಿಂತೆ ಶುರುವಾಗಿದೆ. ಕಳೆದ 24 ವರ್ಷಗಳಲ್ಲೇ ಮೊತ್ತ ಮೊದಲ ಬಾರಿಗೆ ಚೀನಾ ಅತಿ ಕಡಿಮೆ ಆರ್ಥಿಕ ಪ್ರಗತಿ ದಾಖಲಿಸಿದೆ.ಆಸ್ತಿ ದರ ಕಡಿಮೆಯಾಗಿರುವುದು,ಸ್ಥಳೀಯ ಸರ್ಕಾರಗಳು ಮತ್ತು ಕಂಪನಿಗಳು ಭಾರಿ ಸಾಲದ ಹೊರೆಯಲ್ಲಿ ಮುಳುಗಿರುವುದು ಚೀನಾ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದೆ. 2014ರಲ್ಲಿ ಶೇ.7.5 ಆರ್ಥಿಕ ಪ್ರಗತಿಯ ಗುರಿ ಹಾಕಿಕೊಂಡಿದ್ದ ಚೀನಾ ಸ್ಥಾಪಿಸಿದ್ದು ಮಾತ್ರ ಶೇ.7.4ರಷ್ಟು. 1990ರಿಂದ ಆರ್ಥಿಕತೆ ಇಷ್ಟೊಂದು ಮಟ್ಟಕ್ಕೆತಲುಪಿರುವುದು ಇದೇ ಮೊದಲು.
ಇಷ್ಟೆಲ್ಲ ಆಗಿದ್ದರೂ `ಕೆಳಗೆ ಬಿದ್ದರೂಮೀಸೆ ಮಣ್ಣಾಗಿಲ್ಲ' ಎನ್ನುವಂತೆ ಚೀನಾ ಸರ್ಕಾರ, `ವೇಗದ ದರದ ಪ್ರಗತಿಅಂತ್ಯವಾದೊಡನೆ, ಚೀನಾದಆರ್ಥಿಕತೆಯ ಯುಗ ಮುಗಿಯಿತೆಂದುಅರ್ಥವಲ್ಲ' ಎಂದಿದೆ.