ವಾಣಿಜ್ಯ

ಷೇರು ಪೇಟೆ ಜಿಗಿತ, ಈಗ ಅತ್ಯಧಿಕ

Mainashree

ಮುಂಬೈ: ಷೇರು ಪೇಟೆಯಲ್ಲಿ ಸೆನ್ಸೆಕ್ಸ್ ನಾಗಾಲೋಟ ಮುಂದುವರಿದಿದೆ. ಸತತ ಆರನೇ ದಿನವಾದ ಬುಧವಾರ ಕೂಡ ಬಾಂಬೆ ಷೇರು ಪೇಟೆ ಸಂವೇದಿ ಸೂಚ್ಯಂಕ 104.19ರಷ್ಟು ಏರಿಕೆ ಕಂಡಿತ್ತು. ಹೀಗಾಗಿ ದಿನದ ಅಂತ್ಯಕ್ಕೆ ಸೂಚ್ಯಂಕ 28, 958 ಅಂಕಗಳಷ್ಟು ಏರಿಕೆಯಾಗಿದೆ. ಇದು ಈ ವರೆಗಿನ ಅತ್ಯಂತ ಸಾರ್ವಕಾಲಿಕ ದಾಖಲೆ. ಮುಂದಿನ ವರ್ಷ ಚೀನಾದ ಹಣಕಾಸು ವ್ಯವಸ್ಥೆಗಿಂತ ಭಾರತದ ಅರ್ಥ ವ್ಯವಸ್ಥೆ ಮುಂಚೂಣಿಯಲ್ಲಿರಲಿದೆ ಎಂಬ ಐಎಂಎಫ್ ವರದಿ, ವಿಶ್ವ ಮಾರುಕಟ್ಟೆಯಲ್ಲಿನ ಪೂರಕ ವಾತಾವರಣ ಸೆನ್ಸೆಕ್ಸ್ ಅತ್ಯಧಿಕ ಜಿಗಿತಕ್ಕೆ ಕಾರಣವಾಯಿತು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಭಾರ್ತಿ ಏರ್‌ಟೆಲ್, ಕೋಲ್ ಇಂಡಿಯಾ, ಇನ್ಫೋಸಿಸ್ ಷೇರುಗಳು ಬಾರಿ ಪ್ರಮಾಣದಲ್ಲಿ ಬಿಕರಿಯಾದವು. ನಿಷ್ಟಿ ಸೂಚ್ಯಂಕ ಕೂಡ ತನ್ನ ಸಾರ್ವಕಾಲಿಕ ದಾಖಲೆಯ ಏರಿಕೆ ಅಂದರೆ 8, 741.85ರಷ್ಟನ್ನು ದಾಖಲಿಸಿತು. ಅಂದರೆ 33.09ರಷ್ಟು ಅಂಕಗಳನ್ನು ಬುಧವಾರ ದಾಖಲಿಸಿತು.

SCROLL FOR NEXT