ವಾಣಿಜ್ಯ

75 ಅಂಕಗಳ ಕಡಿತದೊಂದಿಗೆ ಸೆನ್ಸೆಕ್ಸ್ ದಿನದ ವಹಿವಾಟು ಅಂತ್ಯ

Srinivasamurthy VN
ಮುಂಬೈ: ದಿನದಂತ್ಯದಲ್ಲಿ ಷೇರುದಾರ ನಿರಾಶಾದಾಯಕ ವಹಿವಾಟಿನಿಂದಾಗಿ ಮುಂಬೈ ಷೇರುಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 75 ಅಂಕಗಳನ್ನು ಕಳೆದುಕೊಂಡು ದಿನದ ವಹಿವಾಟನ್ನು ಪೂರ್ಣಗೊಳಿಸಿದೆ.
ಗುರುವಾರ ಆರಂಭಿಕ 2 ವಹಿವಾಟಿನಲ್ಲಿ ಏರಿಕೆ ಕಂಡಿದ್ದ ಸೆನ್ಸೆಕ್ಸ್ ದಿನದಂತ್ಯದ ವೇಳೆ ಷೇರುದಾರರ ನೀರಸ ವಹಿವಾಟಿನಿಂದಾಗಿ 75.07 ಅಂಕಗಳನ್ನು ಕಳೆದುಕೊಂಡು 27,945.80 ಅಂಕಗಳಿಗೆ ಸ್ಥಿರವಾಯಿತು. ನಿಫ್ಟಿ ಕೂಡ 8.15ರಷ್ಚು ಅಂಕಗಳನ್ನು ಕಳೆದುಕೊಂಡು 8,444.90ಕ್ಕೆ ಇಳಿಯಿತು.
ಬ್ಲೂಚಿಪ್ ಷೇರುಗಳ ಖರಿದೀಗೆ ಸಂಬಂಧಿಸಿದಂತೆ ಷೇರುದಾರರು ಎಚ್ಚರಿಕೆಯ ವಹಿವಾಟ ನಡೆಸಿದರ ಪರಿಣಾಮ ಭಾರತೀಯ ಷೇರುಮಾರುಕಟ್ಟೆ 75 ಅಂಕಗಳನ್ನು ಕಳೆದುಕೊಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಗ್ರೀಸ್ ಆರ್ಥಿಕ ಬಿಕ್ಕಟ್ಟಿನ ಕರಿ ನೆರಳಿನಲ್ಲಿಯೂ ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 28,115.96 ಅಂಕಗಳಿಗೆ ಏರಿಕೆಯಾಗುವ ಮೂಲಕ ಷೇರುದಾರರಲ್ಲಿ ಉತ್ಸಾಹ ಮೂಡಿಸಿತ್ತು. ಆದರೆ ದಿನದಂತ್ಯಕ್ಕೆ ಷೇರುದಾರರಲ್ಲಿನ ಈ ಉತ್ಸಾಹದ ಕೊರತೆಯಿಂದಾಗಿ ಮತ್ತು ಬ್ಲೂಚಿಪ್ ಷೇರುಗಳ ವ್ಯವಹಾರದಲ್ಲಿನ ಎಚ್ಚರಿಕೆಯ ವ್ಯವಹಾರದಿಂದಾಗಿ ಸೆನ್ಸೆಕ್ಸ್ 75 ಅಂಕಗಳನ್ನು ಕಳೆದುಕೊಂಡಿದೆ.
SCROLL FOR NEXT