ವಾಣಿಜ್ಯ

ಡೆಲಿವರಿ ಮಾಹಿತಿಗೆ ಅಂಚೆ ಇಲಾಖೆ ಎಸ್ಸೆಮ್ಮೆಸ್

Rashmi Kasaragodu

ನವದೆಹಲಿ: ಇನ್ನು ಮುಂದೆ ನೀವು ಅಂಚೆ ಮೂಲಕ ಯಾವುದಾದರೂ ಪಾರ್ಸೆಲ್, ಮೇಲ್, ಮನಿ ಆರ್ಡರ್ ಕಳುಹಿಸಿದರೆ ಅವುಗಳ ಸ್ಥಿತಿಗತಿ ಬಗ್ಗೆ ನಿಮಗೆ ಎಸ್ಸೆಮ್ಮೆಸ್ ಸಂದೇಶ ಬರುತ್ತಿರುತ್ತವೆ. ಸೆಪ್ಟೆಂಬರ್‍ನಿಂದ ಇಂತದೊಂದು ಸೌಲಭ್ಯ ಕಲ್ಪಿಸಲು ಇಲಾಖೆ ನಿರ್ಧರಿಸಿದೆ. ಡೆಲಿವರಿಗಳ ಸ್ಥಿತಿಗತಿ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವುದು ಇಲಾಖೆ ಉದ್ದೇಶ. ಇದೇ ವೇಳೆ, ಅಕ್ಟೋಬರ್‍ನಿಂದ ಜಿಪಿಎಸ್ ಆಧರಿತ ಸಾಧನದ ಮೂಲಕ ಪೋಸ್ಟ್ ಮ್ಯಾನ್  ಅನ್ನು ಟ್ರ್ಯಾಕ್ ಮಾಡುವ ಕೆಲಸವನ್ನೂ ಇಲಾಖೆ ಮಾಡಲಿದೆ. ಪಾರ್ಸೆಲ್ ಗಳನ್ನು ಡೆಲಿವರಿ ಮಾಡಲು ಹೋದ ಅಂಚೆಯಣ್ಣ ಯಾವ ಸ್ಥಳದಲ್ಲಿದ್ದಾನೆ ಎಂಬುದನ್ನು ಕಂಡುಹಿಡಿಯಲು ದೆಹಲಿಯಲ್ಲಿ ಈ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಯಾಗಲಿದೆ. ಇದಲ್ಲದೆ, ಪ್ರಸಕ್ತ ವರ್ಷ ದೇಶಾದ್ಯಂತ ಸಾವಿರ ಎಟಿಎಂಗಳನ್ನು ಸ್ಥಾಪಿಸುವ ಉದ್ದೇಶವನ್ನೂ ಇಲಾಖೆ ಹೊಂದಿದೆ. ಅಂಚೆ ಬ್ಯಾಂಕ್ ವಹಿವಾಟು ಆರಂಭಿಸಲು ನೆರವಾಗುವಂತೆ ಆರ್‍ಬಿಐ ಸೆಪ್ಟೆಂಬರ್‍ನೊಳಗೆ ಇಲಾಖೆಗೆ ಪರವಾನಗಿ ನೀಡುವ ನಿರೀಕ್ಷೆಯಿದೆ ಎಂದುಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

SCROLL FOR NEXT