ಪೆಟ್ರೋಲ್, ಡೀಸೆಲ್ ದರ ರು.2 ಇಳಿಕೆ
ಇರಾನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವೆ ಪರಣಾಣು ಒಪ್ಪಂದ ಜಾರಿಯಾಗುತ್ತಿದ್ದಂತೆ ವಿಶ್ವಾದ್ಯಂತ ಕಚ್ಛಾ ತೈಲ ಬೆಲೆ ಇಳಿದಿತ್ತು...
ನವದೆಹಲಿ: ಇರಾನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವೆ ಪರಣಾಣು ಒಪ್ಪಂದ ಜಾರಿಯಾಗುತ್ತಿದ್ದಂತೆ ವಿಶ್ವಾದ್ಯಂತ ಕಚ್ಛಾ ತೈಲ ಬೆಲೆ ಇಳಿದಿತ್ತು.
ಅದಕ್ಕೆ ಪೂರಕವಾಗಿ ದೇಶೀಯ ಮಾರುಕಟ್ಟೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ರು.2ರಷ್ಟು ಕಡಿಮೆಮಾಡಿದೆ.
ಈ ಮೊತ್ತಕ್ಕೆ ವಿಧಿಸುವ ತೆರಿಗೆಯೂ ಕಡಿತವಾಗುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅಂದಾಜು 2.50 ರೂ.ವರೆಗೂ ಇಳಿಯಲಿದೆ. ಆದರೆ ದೆಹಲಿ ವ್ಯಾಪ್ತಿಯಲ್ಲಿ ಆಪ್ ಸರ್ಕಾರ ವ್ಯಾಟ್ ಅನ್ನು ಹೆಚ್ಚಳ ಮಾಡಿದ್ದರಿಂದ ಅಲ್ಲಿಯ ಜನರಿಗೆ ದರ ಇಳಿಕೆಯ ಲಾಭ ಸಿಗದಂತಾಗಿದೆ.
ಬುಧವಾರ ಮಧ್ಯರಾತ್ರಿಯಿಂದ ಹೊಸ ದರ ಜಾರಿಗೆ ಬಂದಿದೆ. ದೇಶದ ಉಳಿದ ಭಾಗಕ್ಕೆ ಸಂಬಂಧಿಸಿದಂತೆ ಇದು ಎಱಡನೇ ಅತ್ಯಂತ ದೊಡ್ಡ ದರ ಇಳಿಕೆಯಾಗಿದೆ. ಸ್ಥಳೀಯವಾಗಿ ವಿಧಿಸಲಾಗುತ್ತಿರುವ ತೆರಿಗೆ ಅಥವಾ ವ್ಯಾಟ್ ಅನ್ನು ಆಧರಿಸಿ ವಿವಿಧ ರಾಜ್ಯ.ಗಳಲ್ಲಿ ಪೆಟ್ರೋಲ್, ಡೀಸೆಲ್ ದರ ವ್ಯತ್ಯಾಸಗೊಳ್ಳಲಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.