ಸಾಂದರ್ಭಿಕ 
ವಾಣಿಜ್ಯ

ಚಿನ್ನ, ಬೆಳ್ಳಿ ಆಮದು ದರ ಮತ್ತಷ್ಟು ಇಳಿಕೆ

ಚಿನ್ನ ಮತ್ತು ಬೆಳ್ಳಿ ಆಮದು ದರಗಳನ್ನು ಮತ್ತಷ್ಟು ಇಳಿಸಲಾಗಿದೆ. ಹತ್ತು ಗ್ರಾಂ ಚಿನ್ನ ಆಮದು ದರ 382 ಡಾಲರ್‍ಗಳಿಂದ 376...

ನವದೆಹಲಿ: ಚಿನ್ನ ಮತ್ತು ಬೆಳ್ಳಿ ಆಮದು ದರಗಳನ್ನು ಮತ್ತಷ್ಟು ಇಳಿಸಲಾಗಿದೆ. ಹತ್ತು ಗ್ರಾಂ ಚಿನ್ನ ಆಮದು ದರ 382 ಡಾಲರ್‍ಗಳಿಂದ 376 ಡಾಲರ್‍ಗಳಿಗೆ ಇಳಿಸಲಾಗಿದೆ. ಬೆಳ್ಳಿ ಒಂದು ಕೆಜಿ ದರ 516 ಡಾಲರ್‍ಗಳಿಂದ 498 ಡಾಲರ್ ಗಳಿಗೆ ಇಳಿಸಲಾಗಿದೆ.

ಸೀಮಾ ಸುಂಕವನ್ನು ತಪ್ಪಿಸಲು ಆಮದು ಕಂಪನಿಗಳು ಕಡಿಮೆ ದರಪಟ್ಟಿ ಹಾಕಿಸಿಕೊಂಡು ಬರಲಿವೆ. ಅದನ್ನು ತಪ್ಪಿಸಲು ಕೇಂದ್ರ ಅಬಕಾರಿ ಮತ್ತು ಸೀಮಾಸುಂಕ ಮಂಡಳಿ (ಸಿಬಿಇಸಿ) ಆಮದು ದರಗಳನ್ನು ನಿಗದಿಗೊಳಿಸಲಿದೆ. ಗುರುವಾರದ ವಹಿವಾಟಿನಲ್ಲಿ ದೇಶೀಯ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲೂ ಚಿನ್ನ ಮತ್ತು ಬೆಳ್ಳಿ ದರಗಳು ತುಸು ಇಳಿಮುಖ ಕಂಡಿವೆ.

ಕಳೆದ ಜೂನ್‍ನಲ್ಲಿ ದೇಶದ ಚಿನ್ನದ ಆಮದು ಶೇ.37ರಷ್ಟು ಕಡಿಮೆಯಾಗಿದ್ದು 196 ಕೋಟಿ ಡಾಲರ್ ತಲುಪಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 312 ಕೋಟಿ ಡಾಲರ್ ಮೌಲ್ಯದ ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು. ಭಾರತ ಪೆಟ್ರೋಲಿಯಂ ಉತ್ಪನ್ನಗಳ ನಂತರ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ಉತ್ಪನ್ನ ಚಿನ್ನವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ