ಮುಂಬೈ: ದಾಸ್ತಾನುಗಾರರು ಮತ್ತು ಸಟ್ಟಾ ಬಂಡವಾಳಗಾರರು ಹೆಚ್ಚಿನ ಮಾರಾಟಲ್ಲಿ ತೊಡಗಿರುವುದರಿಂದ ಚಿನ್ನ ಮತ್ತಷ್ಟು ಕುಸಿತ ಕಂಡಿದೆ. ಬುಧವಾರದ ವಹಿವಾಟಿನಲ್ಲಿ ಪ್ರತಿ ಹತ್ತು ಗ್ರಾಂ ಸ್ಟಾಂಡರ್ಡ್ ಚಿನ್ನದ ದರ ರು.250 ಇಳಿಕೆ ಕಂಡು ರು.24,870ಕ್ಕೆ ತಲುಪಿದೆ.
ಮಂಗಳವಾರದ ವಹಿವಾಟಿನಲ್ಲಿ ಈ ದರ ರು.25,120ರಷ್ಟಿತ್ತು. ಶುದಟಛಿ ಚಿನ್ನದ ದರವೂ ರು.250 ಕುಸಿದು ರು.25,020ಕ್ಕೆ ಇಳಿಯಿತು. ಕಳೆದ ನಾಲ್ಕು ವರ್ಷಗಳಲ್ಲೇ ಇದು ಚಿನ್ನದ ಕನಿಷ್ಠ ದರವಾಗಿದೆ. ಕೆಜಿ ಬೆಳ್ಳಿ ದರ ಸಹ ರು.175 ಇಳಿಕೆಯೊಂದಿಗೆ ರು.34,725ಕ್ಕೆ ತಲುಪಿತು.
ಜಾಗತಿಕ ಮಾರುಕಟ್ಟೆಯಲ್ಲೂ ಸಹ ಡಾಲರ್ ಮೌಲ್ಯ ಕಡಿಮೆ ಇದ್ದರೂ ಹೂಡಿಕೆದಾರರು ಹೆಚ್ಚಿನ ಮಾರಾಟದಲ್ಲಿ ತೊಡಗಿದ್ದರಿಂದ ದರಗಳು ಮತ್ತಷ್ಟು ಕುಸಿತದತ್ತ ಸಾಗಿದವು. ಯುರೋಪ್‍ನಲ್ಲೂ ಕುಸಿತು ಕಂಡಿತು.