ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 
ವಾಣಿಜ್ಯ

ಎಸ್‍ಬಿಎಂ ಲಾಭ ಶೇ.26 ಏರಿಕೆ

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಜೂ.30ಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ರು.94 ಕೋಟಿ ನಿವ್ವಳ ಲಾಭ ಗಳಿಸಿದ್ದು ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.26ರಷ್ಟು ಏರಿಕೆ ಕಂಡಿದೆ...

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಜೂ.30ಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ರು.94 ಕೋಟಿ ನಿವ್ವಳ ಲಾಭ ಗಳಿಸಿದ್ದು ಕಳೆದ ವರ್ಷ ಇದೇ ಅವಧಿಗೆ  ಹೋಲಿಸಿದರೆ ಶೇ.26ರಷ್ಟು ಏರಿಕೆ ಕಂಡಿದೆ.

ಗುಣಾತ್ಮಕ ಆಸ್ತಿಯ ವೃದ್ಧಿಯಿಂದಾಗಿ ಲಾಭ ಹೆಚ್ಚಳವಾಗಿದೆ. ಶುಲ್ಕ ಆದಾಯದಲ್ಲಿ ಶೇ.11ರಷ್ಟು ಏರಿಕೆ ದಾಖಲಿಸಿದೆ. ಠೇವಣಿಯಲ್ಲಿ ರು.68,400 ಕೋಟಿ ತಲುಪುವ ಮೂಲಕ ಶೇ.33.99ರಷ್ಟು  ಏರಿಕೆ ಕಂಡಿದೆ. ಮುಂಗಡ ರು.52,600 ಕೋಟಿಗೆ ತಲುಪಿದ್ದು, ಒಟ್ಟಾರೆ ವಹಿವಾಟು ರು.1.21 ಲಕ್ಷ ಕೋಟಿಗೆ ತಲುಪಿದೆ. ಇದೇ ಸಂದರ್ಭದಲ್ಲಿ ಅನುತ್ಪಾದಕ ಆಸ್ತಿ (ಎನ್‍ಪಿಎ) ಪ್ರಮಾಣ  ಶೇ.4.21ಕ್ಕೆ ಇಳಿಕೆಯಾಗಿದೆ ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‍ನ ಎಂಡಿ ಶರದ್ ಶರ್ಮಾ ತಿಳಿಸಿದ್ದಾರೆ.

ಈ ತ್ರೈಮಾಸಿಕದಲ್ಲಿ ಬ್ಯಾಂಕ್ ನ ಆಡಳಿತ ಹಾಗೂ ಸೇವೆಗಳಲ್ಲಿ ಹೆಚ್ಚಿನ ಪ್ರಗತಿಯಾಗಿದೆ. 222 ಹೊಸ ಎಟಿಎಂ ಸ್ಥಾಪಿಸಲಾಗಿದ್ದು ಒಟ್ಟಾರೆ ಸಂಖ್ಯೆ 1,350ಕ್ಕೆ ತಲುಪಿದೆ. ಈ ಪೈಕಿ ರಾಜ್ಯದಲ್ಲಿ  ಮಾತ್ರವೇ 1,167 ಎಟಿಎಂಗಳಿವೆ. ಡೆಬಿಟ್ ಕಾರ್ಡ್ ಸಂಖ್ಯೆ 56.3 ಲಕ್ಷಕ್ಕೆ ತಲುಪಿದೆ ಎಂದರು. ಸರ್ಕಾರಿ ಯೋಜನೆಗಳೊಂದಿಗೆ ಬ್ಯಾಂಕ್ ಆಡಳಿತ ಮಂಡಳಿ ಉತ್ತಮ ಸಹಯೋಗ ಹೊಂದಿದೆ.  `ಪ್ರಧಾನಮಂತ್ರಿ ಜನಧನ ಯೋಜನೆಯಡಿ 713 ಉಪಕೇಂದ್ರ ಹಾಗೂ 634 ವಾರ್ಡ್‍ಗಳಲ್ಲಿ 11.97 ಲಕ್ಷ ಮನೆಗಳ ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ ಪ್ರತಿ ಮನೆಗೆ ಕನಿಷ್ಠ ಒಂದು  ಬ್ಯಾಂಕ್ ಖಾತೆ ತೆರೆಯಲಾಗಿದೆ.

ಯೋಜನೆಯಡಿ ಹೊಸದಾಗಿ 8.26 ಲಕ್ಷ ಹೊಸ ಖಾತೆ ತೆರೆದಿದ್ದು, ಆರ್ಥಿಕ ವಿಭಾಗದಲ್ಲಿ ತೆರೆದ ಒಟ್ಟು ಖಾತೆಗಳ ಸಂಖ್ಯೆ 15.07 ಲಕ್ಷಕ್ಕೆ ತಲುಪಿದೆ. ಈ ಖಾತೆಗಳಲ್ಲಿ ಒಟ್ಟು ರು.85.22 ಕೋಟಿ  ಮೊತ್ತವಿದೆ ಎಂದು ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್