ನವದೆಹಲಿ: ಪ್ರಸಕ್ತ ಹಣಕಾಸು ಸಾಲಿನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‍ಗಳಿಗೆ ರು.25 ಸಾವಿರ ಕೋಟಿ ಬಂಡವಾಳ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಯೋಜನೆ `ಸಮರ್ಪಕ ಮತ್ತು ಒಳ್ಳೆಯ ಆರಂಭ' ಎಂದು ಆರ್‍ಬಿಐ ಗೌರ್ನರ್ ರಘುರಾಂ ರಾಜನ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ರು.7,940 ಕೋಟಿ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದರು. ಈಗ ಮತ್ತೆ ರು.12,010 ಕೋಟಿ ನೀಡಲು ಸಂಸತ್ತಿನ ಅನುಮೋದನೆ ಪಡೆದಿದ್ದಾರೆ. ಉಳಿದ ರು.5 ಸಾವಿರ ಕೋಟಿಯನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನೀಡಲಾಗುವುದು. ಈ ಕುರಿತು ಪ್ರತಿಕ್ರಿಯಿಸಿರುವ ರಘುರಾಂ ರಾಜನ್ ಮೊದಲ ವರ್ಷ ನೀಡುತ್ತಿರುವ ಈ ಬಂಡವಾಳ ಸಮರ್ಪಕ ವಾಗಿದೆ ಎಂದು ಆಗಸ್ಟ್ 4ರಂದು ನಡೆಯುವ ತ್ರೈಮಾಸಿಕ ಸಭೆಗೂ ಮುನ್ನ ಜೇಟ್ಲಿ ಜತೆ ಮಾತುಕತೆ ನಡೆಸಿದ ನಂತರ ಹೇಳಿದ್ದಾರೆ.