ಷೇರುಮಾರುಕಟ್ಟೆ 
ವಾಣಿಜ್ಯ

ಷೇರುಮಾರುಕಟ್ಟೆಯಲ್ಲಿ ರಕ್ತಪಾತ; 661 ಅಂಕ ಕಳೆದುಕೊಂಡ ನಿಫ್ಟಿ

ರೆಪೋ ದರ ಇಳಿಕೆಯ ಆರ್‍ಬಿಐ ನಿರ್ಧಾರ ಬಾಂಬೆ ಷೇರುಪೇಟೆಯಲ್ಲಿ ರಕ್ತಪಾತ ನಿರ್ಮಿಸಿತು. ಷೇರುಪೇಟೆ ಸೂಚ್ಯಂಕ 661 ಅಂಕಗಳಷ್ಟು ಕುಸಿತ ಕಂಡರೆ, ನಿಫ್ಟಿ 196 ಅಂಶಗಳಷ್ಟು ಕುಸಿತ ಕಂಡಿತು...

ಮುಂಬೈ: ರೆಪೋ ದರ ಇಳಿಕೆಯ ಆರ್‍ಬಿಐ ನಿರ್ಧಾರ ಬಾಂಬೆ ಷೇರುಪೇಟೆಯಲ್ಲಿ ರಕ್ತಪಾತ ನಿರ್ಮಿಸಿತು. ಷೇರುಪೇಟೆ ಸೂಚ್ಯಂಕ 661 ಅಂಕಗಳಷ್ಟು ಕುಸಿತ ಕಂಡರೆ, ನಿಫ್ಟಿ 196 ಅಂಶಗಳಷ್ಟು ಕುಸಿತ ಕಂಡಿತು.

ಈ ವರ್ಷದಲ್ಲಿ ಮೂರನೇ ಬಾರಿಗೆ ರಿಸರ್ವ್ ಬ್ಯಾಂಕ್ ಶೇ. 0.25ರಷ್ಟು ರೆಪೊ ದರ ಕಡಿತ ಮಾಡಿದೆ. ಇನ್ನು ಶೀಘ್ರದಲ್ಲಿ ಯಾವುದೇ ದರ ಕಡಿತವಿರುವುದಿಲ್ಲ ಎಂಬ ಹತಾಶೆಯೂ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಹಣದುಬ್ಬರವು 2016ರ ಜನವರಿ ವೇಳೆಗೆ 6ಕ್ಕೆ ಏರಲಿದೆ ಎಂಬುದು ಬ್ಯಾಂಕ್​ಗಳ ಚಿಂತೆಗೆ ಕಾರಣವಾಗಿದ್ದರೆ, ಮಳೆ ಕೊರತೆಯ ಮುನ್ಸೂಚನೆ ಹಲವು ಕ್ಷೇತ್ರಗಳಲ್ಲಿ ಉತ್ಸಾಹ ಕುಗ್ಗಿಸಿದೆ. ರಿಯಾಲ್ಟಿ, ಬ್ಯಾಂಕಿಂಗ್ ಮತ್ತು ಆಟೊಮೊಬೈಲ್ ಷೇರುಗಳು ಭಾರಿ ಕುಸಿತ ಕಂಡಿದ್ದು, ಏರ್​ಟೆಲ್ ಹೊರತುಪಡಿಸಿದರೆ ಬಹುತೇಕ ಎಲ್ಲ ಕಂಪನಿಗಳ ಷೇರುಗಳೂ ಇಳಿಕೆ ಕಂಡಿವೆ.

ಎಸ್​ಬಿಐ ಶೇ. 4.28ರಷ್ಟು, ಆಕ್ಸಿಸ್ ಬ್ಯಾಂಕ್ ಶೇ. 4.20, ಐಸಿಐಸಿಐ ಬ್ಯಾಂಕ್, ಶೇ. 3.70, ಎಚ್​ಡಿಎಫ್​ಸಿ ಶೇ. 3.55ರಷ್ಟು ಇಳಿಕೆ ಕಂಡಿದೆ. ದಿನದ ಆರಂಭ ಏರುಗತಿಯಲ್ಲೇ ಆಗಿತ್ತಾದರೂ, ಆರ್​ಬಿಐ ದರ ಕಡಿತ ಮಾಡುತ್ತಿದ್ದಂತೆಯೇ ಮಾರುಕಟ್ಟೆ ಇಳಿಮುಖವಾಯಿತು. ದಿನದ ಅಂತ್ಯಕ್ಕೆ 27,188.38 ಅಂಶಕ್ಕೆ ಬಿಎಸ್​ಇ ಸೆನ್ಸೆಕ್ಸ್ ತಲುಪಿದ್ದು, ಮೇ 6ರ ನಂತರದಲ್ಲಿ ದಾಖಲೆ ಏಕ ದಿನ ಇಳಿಕೆಯಾಗಿದೆ. ಇನ್ನು 50ಷೇರುಗಳ ಎನ್​ಸ್ಇ ನಿಫ್ಟಿ 196.95 ಇಳಿಕೆ ಕಂಡು 8236.45ಕ್ಕೆ ತಲುಪಿದೆ. ರೂಪಾಯಿ ಕೂಡ 26 ಪೈಸೆ ಇಳಿದು ದಿನದ ಅಂತ್ಯಕ್ಕೆ 63.96ಕ್ಕೆ ತಲುಪಿದೆ. ಅದಕ್ಕೆ ಪೂರಕವಾಗಿ ಹವಾಮಾನ ಇಲಾಖೆ ಮುಂಗಾರು ಮಳೆಯ ನಿರೀಕ್ಷೆಯನ್ನು ಪರಿಷ್ಕೃತಗೊಳಿಸಿದ್ದೂ ಪ್ರತಿಕೂಲ ಪರಿಣಾಮ ಬೀರಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT