ಸರಳೀಕೃತ ಐಟಿಆರ್ ಅರ್ಜಿಗೆ ಅಸ್ತು
ಮೂರು ಪುಟಗಳ ಸರಳೀಕೃತ ಅರ್ಜಿ ಸೇರಿದಂತೆ ಐಟಿಆರ್ ಅರ್ಜಿಗಳ ಹೊಸ ಸೆಟ್ ಅನ್ನು ಮಂಗಳವಾರ ಆದಾಯ ತೆರಿಗೆ ಇಲಾಖೆ ಪ್ರಕಟಿಸಿದೆ...
ನವದೆಹಲಿ: ಮೂರು ಪುಟಗಳ ಸರಳೀಕೃತ ಅರ್ಜಿ ಸೇರಿದಂತೆ ಐಟಿಆರ್ ಅರ್ಜಿಗಳ ಹೊಸ ಸೆಟ್ ಅನ್ನು ಮಂಗಳವಾರ ಆದಾಯ ತೆರಿಗೆ ಇಲಾಖೆ ಪ್ರಕಟಿಸಿದೆ. ಸೋಮವಾರವಷ್ಟೇ ವಿತ್ತ ಸಚಿವಾಲಯವು ಈ ಬಗೆಗಿನ ಗೆಜೆಟ್ ಅಧಿಸೂಚನೆ ಹೊರಡಿಸಿತ್ತು.
ಈ ಬಾರಿ ತೆರಿಗೆ ವಿವರ ಸಲ್ಲಿಸಲು ಆ.31ರವರೆಗೆ ಕಾಲಾವಕಾಶ ನೀಡಲಾಗಿದೆ. ಇದೇ ವೇಳೆ,
ತೆರಿಗೆದಾರರಿಗೆ ನೆರವಾಗುವಂತೆ ಐಟಿ ಇಲಾಖೆಯು ಹೊಸ ಯೋಜನೆ ಆರಂಭಿಸಿದೆ. ಅದರಂತೆ, ಇನ್ನು ಮುಂದೆ ತೆರಿಗೆ ಮರುಪಾವತಿಯ ಮೊತ್ತವು ನೇರವಾಗಿ ತೆರಿಗೆದಾರನ ಬ್ಯಾಂಕ್ ಖಾತೆಯಲ್ಲಿ ಜಮೆ ಆಗಲಿದೆ.
ಏತನ್ಮಧ್ಯೆ, ರು.50 ಸಾವಿರ ಮೌಲ್ಯದ ಐಟಿ ರೀಫಂಡ್ ಅನ್ನು ಚೆಕ್ ರೂಪದಲ್ಲಿ ಅಂಚೆ ಇಲಾಖೆ ಮೂಲಕ ಕಳುಹಿಸುವ ಪದ್ಧತಿಗೆ ಅಂತ್ಯಹಾಡಿ, ಅದನ್ನೂ ಬ್ಯಾಂಕ್ ಮೂಲಕ ಕಳುಹಿಸುವ ವ್ಯವಸ್ಥೆ ಜಾರಿ ಮಾಡಲು ಚಿಂತನೆ ನಡೆಸಲಾಗುತ್ತಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.